newsfirstkannada.com

ದರ್ಶನ್​ನಿಂದ ತಾಯಿ, ತಮ್ಮ ದೂರ ಇರೋದು ಯಾಕೆ.. ಶಾಕಿಂಗ್ ವಿಷ್ಯ ಬಿಚ್ಚಿಟ್ಟ ಉಮಾಪತಿ; ಏನಂದ್ರು?

Share :

Published June 18, 2024 at 8:58pm

  ನಟ ದರ್ಶನ್ ಆಗೊಮ್ಮೆ ಈಗೊಮ್ಮೆ ಮಾತ್ರ ಮನೆಗೆ ಹೋಗೋದು

  ಯಾರದರೂ ದರ್ಶನ್​ಗೆ ಬುದ್ಧಿ ಹೇಳಿದರೆ ಅದನ್ನು ಕೇಳೊ ತಾಳ್ಮೆ ಇಲ್ಲ

  ಒಂದೇ ಒಂದು ಸಣ್ಣ ತಪ್ಪು ಕೊಲೆ ಆರೋಪಿ ಪಟ್ಟ ತಂದು ಕೊಟ್ಟಿದೆ

ಉಮಾಪತಿ ಬಿಚ್ಚಿಟ್ಟಿರುವ ದರ್ಶನ್​ ಕರಾಳ ರಹಸ್ಯಗಳು ಕೇಳ್ತಿದ್ರೆ ನಿಜಕ್ಕೂ ಅದೆಷ್ಟು ಭಯಂಕರ ಅಂತ ಅನಿಸುತ್ತೆ. ಅಷ್ಟಕ್ಕೂ ದರ್ಶನ್​ ಆ್ಯಂಡ್ ಗ್ಯಾಂಗ್​ ಬಗ್ಗೆ ಇಂಡಸ್ಟ್ರಿಯಲ್ಲಿರುವ ಮಾತುಗಳೇನು? ಇವತ್ತು ದರ್ಶನ್ ಪರಿಸ್ಥಿತಿಗೆ ಸಹವಾಸ ದೋಷ ಕಾರಣವಾಯ್ತಾ? ಈ ಬಗ್ಗೆ ಉಮಾಪತಿ ಬಿಚ್ಟಿಟ್ಟ ಸತ್ಯಗಳೇನು?

ಡಿ ಬಾಂಬ್ 06- ಬುದ್ಧಿ ಹೇಳುವರು ಇದ್ರೆ ದರ್ಶನ್‌ ಹಾಳಾಗ್ತಿರಲಿಲ್ಲ

ನಿಮಗೆಲ್ಲ ಗೊತ್ತೆ ಇದೆ ದರ್ಶನ್​ ಬೆಂಗಳೂರಿನಲ್ಲಿ ಇರೋದಕ್ಕಿಂತ ಹೆಚ್ಚಾಗಿ ಮೈಸೂರಲ್ಲಿ ಇರ್ತಾರೆ. ಇನ್​ಫ್ಯಾಕ್ಟ್​ ದರ್ಶನ್ ಪತ್ನಿ ಮಗ ಕೂಡ ಒಟ್ಟಿಗೆ ಇರಲ್ಲ. ಆಗೊಮ್ಮೆ ಈಗೊಮ್ಮೆ ಮಾತ್ರ ಮನೆಗೆ ಹೋಗೊದು ಬರೋದು ಮಾಡ್ತಾರೆ. ಅತ್ತ ತಾಯಿ, ತಮ್ಮ ಕೂಡ ದರ್ಶನ್​ನಿಂದ ದೂರವೇ ಇದ್ದಾರೆ. ಹೀಗಾಗಿ ದರ್ಶನ್ ಪರಿಸ್ಥಿತಿಗೆ ಇವತ್ತು ಇದೇ ಕಾರಣವಾಯ್ತಾ ಅನ್ನೋದು ನಿರ್ಮಾಪಕ ಉಮಾಪತಿ ಮಾತು. ಯಾಕಂದ್ರೆ ಬುದ್ಧೀ ಹೇಳುವವರು ಇದ್ದಿದ್ರೆ ದರ್ಶನ್ ಈ ರೀತಿ ಹಾಳ್ತಾಗಿರಲಿಲ್ಲ.

ಇದನ್ನೂ ಓದಿ: A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್‌!

ತಪ್ಪು ಮಾಡ್ದಾಗ ತಿದ್ದೋರ ಇದ್ದಿದ್ರೆ ದರ್ಶನ್​ ಪರಿಸ್ಥಿತಿ ಬೇರೆ ಆಗಿರ್ತಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಬುದ್ಧಿ ಹೇಳ್ದಾಗ ಕೇಳುವ ವ್ಯವದಾನ ನಮ್ಮಲ್ಲಿ ಇರ್ಬೇಕು. ಆ ತಾಳ್ಮೆ ದರ್ಶನ್​ಗಿಲ್ಲ ಅಂತ ಉಮಾಪತಿ ಹೇಳಿದ್ದಾ ರೆ. ಉಮಾಪತಿ ನೋಡಿರೋ ಪ್ರಕಾರ ದರ್ಶನ್​ಗೆ ಯಾರಾದ್ರೂ ಬುದ್ಧಿ ಹೇಳಿದ್ರೆ ಕೇಳೊ ತಾಳ್ಮೆ ಇಲ್ಲ. ಇದೆ ಕಾರಣಕ್ಕೆ ದರ್ಶನ್ ಹಾಳಾಗಿರೋದು ಅನ್ನೋದು ಉಮಾಪತಿ ಅಭಿಪ್ರಾಯ.

ಇದನ್ನೂ ಓದಿ: ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ.. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ವಿನೀಶ್​ ಎಲ್ಲಿದ್ದಾರೆ?

ಭಗವಂತ ಪ್ರತ್ಯಕ್ಷ ಆಗಿ ಹೇಳಿದರು ಕಲಿಯಲ್ಲ

ನಾನೇನಾದರೂ ತಪ್ಪು ಮಾಡಿದಾಗ ನನ್ನ ಹೆಂಡತಿ, ತಾಯಿ ಸರಿ ಮಾಡಿದ್ದು ಉಂಟು. ನನ್ನ ಮಗ, ಮಗಳು ಎಷ್ಟೋ ಸಾರಿ ಬುದ್ಧಿ ಹೇಳಿದ್ದಾರೆ. ಯಾರಿಗಾದರು ಬೈದಾಗ ನೀವು ಯಾಕೆ ಅಷ್ಟು ಕೋಪ ಮಾಡಿಕೊಳ್ತೀರಾ, ಯಾಕೆ ಬೈತೀರಾ ಎಂದು ಬುದ್ಧಿ ಹೇಳಿದ್ದಾರೆ. ನಾವು ಕಲಿಯುವಂತವರು ಆಗಿದ್ರೆ ದಾರಿಯಲ್ಲಿ ಹೋಗೋ ದಾಸಪ್ಪ ಹೇಳಿದರು ನಾವು ಕಲಿಯುತ್ತೇವೆ. ಆದರೆ ಕಲಿಯಲ್ಲ ಅಂತ ಆದರೆ ಭಗವಂತ ಪ್ರತ್ಯಕ್ಷ ಆಗಿ ಹೇಳಿದರು ನಾವು ಕಲಿಯಲ್ಲ. ನಾವು ದಿನ ದೇವರಿಗೆ ಕೈ ಮುಗಿಯುತ್ತೇವೆ. ಕೆಲವೊಬ್ಬರು ದೆವ್ವಗಳಿಗೆ ಕೈ ಮುಗಿಯುತ್ತಾರೆ. ನಾವು ಯಾರಿಗೆ ಕೈ ಮುಗಿಯುತ್ತೇವೆ, ಯಾರನ್ನ ಪಾಲನೆ ಮಾಡುತ್ತೇವೆ ಅದು ಮುಖ್ಯ.

ಉಮಾಪತಿ, ನಿರ್ಮಾಪಕ

ಡಿ ಬಾಂಬ್ 07- ‘ಮನುಷ್ಯನಿಗೆ ಅವಶ್ಯಕತೆಗೆ ಮೀರಿ ಸಿಕ್ಕಿದ್ರೆ ದಾರಿ ತಪ್ತಾರೆ’

ದರ್ಶನ್ ದಶಕಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ಒಬ್ಬ ಖಳನಾಯಕನ ಮಗ ಇವತ್ತು ನಾಯಕನಾಗಿ ಮಿಂಚಿ ಸ್ಯಾಂಡಲ್​ವುಡ್​ನಲ್ಲಿ ಒಂದೊಳ್ಳೆ ಹೆಸರು ಮಾಡಿಕೊಂಡಿದ್ದರು. ಆದ್ರೆ ಮಾಡಿದ ಒಂದೇ ಒಂದು ಸಣ್ಣ ತಪ್ಪು ಇವತ್ತು ಕೊಲೆ ಆರೋಪಿಯ ಪಟ್ಟ ತಂದುಕೊಟ್ಟಿದೆ. ಇದಕ್ಕೆ ಕಾರಣ ದರ್ಶನ್​ಗೆ ಅವಶ್ಯಕತೆಗೆ ಮೀರಿ ಸಿಕ್ಕಿರೋದು ಅಂತ ಉಮಾಪತಿ ಹೇಳಿದ್ದಾರೆ. ಮುಳ್ಳಿನ ಮೇಲೆ ಬಟ್ಟೆ ಬಿದ್ರೂ ಬಟ್ಟೆ ಮೇಲೆ ಮುಳ್ಳು ಬಿದ್ದೂ ಹಾಳಾಗೋದು ಬಟ್ಟೆನೆ ಅನ್ನೋ ಮೂಲಕ ಉಮಾಪತಿ ದರ್ಶನ್​ಗೆ ಟಾಂಗ್ ಕೊಟ್ಟಿದ್ದಾರೆ.

ಅಡಿಗೆಗೆ ಉಪ್ಪು, ಉಳಿ ಕಾರ ಎಷ್ಟು ಇರಬೇಕು ಅಷ್ಟೇ ಇರಬೇಕು. ಅದರಂತೆ ಸ್ನೇಹಿತರನ್ನ ಎಷ್ಟು ಇಟ್ಕೊಬೇಕು ಅಷ್ಟೇ ಇಟ್ಕೋಬೇಕು. ಶತ್ರುಗಳನ್ನ ಎಷ್ಟು ಮಾಡಿಕೊಳ್ಳಬೇಕು. ನಾವು ಎಷ್ಟು ಕುಡಿಯಬೇಕು ಎನ್ನುವುದು ಅರಿವಿರಬೇಕು. ಮನುಷ್ಯನಿಗೆ ಅವಶ್ಯಕತೆ ಮೀರಿ ಏನ್ ಬಂದರು ದಾರಿ ತಪ್ಪೋಗುತ್ತೆ.

ಉಮಾಪತಿ, ನಿರ್ಮಾಪಕ

ಡಿ ಬಾಂಬ್ 08- ‘ಭಂಡ ಧೈರ್ಯ ದರ್ಶನ್‌ನ ಇಲ್ಲಿವರೆಗೆ ತಂದು ನಿಲ್ಲಿಸಿದೆ’

ದರ್ಶನ್ ಇದೇ ಮೊದಲು ಈ ತರಹದ ವಿವಾದಕ್ಕೆ ಸಿಲುಕಿಕೊಂಡಿಲ್ಲ. ಈ ಹಿಂದೆ ಅನೇಕ ಬಾರಿ ಅದೆಷ್ಟು ವಿವಾದ ದರ್ಶನ್​ ಸುತ್ತಿಕೊಂಡಿದ್ವು. ಹೆಂಡತಿ ಮೇಲೆ ಹಲ್ಲೆ ಮಾಡಿರೋದು, ಮೈಸೂರಿನ ವೇಯ್ಟರ್​ಗೆ ಹೊಡೆದಿರೋದು. ಹೀಗೆ ಒಂದಾ ಎರಡಾ ಹೇಳ್ತಾ ಹೋದರೆ ದಿನ ಕೂಡ ಸಾಲಲ್ಲ. ಆದ್ರೆ ತಪ್ಪು ಆಗಿದ್ರೂ ದರ್ಶನ್​ ಎಚ್ಚೆತ್ತುಗೊಳ್ಳದೆ ಪದೇ ಪದೇ ತಪ್ಪು ಮಾಡೋದಕ್ಕೆ ದರ್ಶನ್ ಭಂಡ ಧೈರ್ಯವೇ ಕಾರಣ ಅನ್ನೋದು ಉಮಾಪತಿ ಮಾತು. ಯಾಕಂದ್ರೆ ಮನುಷ್ಯನ ಏನ್ ತಿಂತಾನೇ ಅನ್ನೋದು ಗೊತ್ತಿರಬೇಕು ಏನ್ ತಿಂದ್ರೆ ಅರಗಿಸಿಕೊಳ್ಳೋದಕ್ಕೆ ಗೊತ್ತಿರಬೇಕು ಅಂತ ದರ್ಶನ್​ ಅಹಂಕಾರದ ಬಗ್ಗೆ ಚಾಟಿ ಏಟು ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನಿಂದ ಕೊಲೆಯಾದ ಯುವಕನ ಪತ್ನಿಗೆ ಸರ್ಕಾರಿ ಕೆಲಸ? ರೇಣುಕಾಸ್ವಾಮಿ ತಾಯಿ ಏನಂದ್ರು?

ಭಂಡ ಧೈರ್ಯ ಈ ಮಟ್ಟಕ್ಕೆ ಮಾಡಿದೆ

ಯಾರು ಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದರ ಮೇಲೆ ಎಲ್ಲ ಹೋಗುತ್ತದೆ. ಏನು ತಿಂತಾರೆ, ಅದನ್ನು ಅರಗಿಸಿಕೊಳ್ಳುವ ಅರಿವು ಅವರಿಗೆ ಇರಬೇಕು. ದರ್ಶನ್​ಗೆ ಅವಶ್ಯಕತೆಗೂ ಮೀರಿ ಏನೋ ಸಿಕ್ಕಿತು ಎಂದು ನಾನು ಭಾವಿಸಿಕೊಳ್ಳುತ್ತೇನೆ. ಭಂಡ ಧೈರ್ಯ ಈ ಮಟ್ಟಕ್ಕೆ ಮಾಡಿದೆ. ಮನುಷ್ಯ ಬೆಳೆಯುತ್ತಾ, ಬೆಳೆಯುತ್ತಾ ತಗ್ಗಿಬಗ್ಗಿ ನಡೆಯಬೇಕು. ಗುರು ಇರಬೇಕು ಮುಂದೆ ಗುರಿ ಇರಬೇಕು. ಇದು ಇಲ್ಲಂದರೆ ಹಾದಿ ತಪ್ಪುತ್ತಾರೆ.

ಉಮಾಪತಿ, ನಿರ್ಮಾಪಕ

ಡಿ ಬಾಂಬ್ 09- ‘ದರ್ಶನ್‌ರದ್ದು ಬೀರು ಬಿರಿಯಾನಿ ಗ್ಯಾಂಗ್’

ದರ್ಶನ್ ಹಾಳೋಗೋದಕ್ಕೆ ಅವರ ಸಹವಾಸ ದೋಷ ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮಾತನಾಡಿರುವ ಉಮಾಪತಿ ದರ್ಶನ್​ ಗ್ಯಾಂಗ್​​ ಬಗ್ಗೆ ಕಿಡಿ ಕಾರಿದ್ದಾರೆ. ಕೊಲೆ ಆರೋಪವಿದೆ ಅಂಥಾ ಗೊತ್ತಿದ್ರು ಅಭಿಮಾನಿಗಳು ಸಪೋರ್ಟ್ ಮಾಡ್ತಿರೋದು ನೋಡಿದ್ರೆ ಅವರ ಎಷ್ಟು ಲಜ್ಜೆಗೆಟ್ಟವರು ಅನ್ನೋದು ಗೊತ್ತಾಗುತ್ತೆ ಅಂದ್ರು. ಅಷ್ಟೆಲ್ಲ ಇಂಡಸ್ಟ್ರಿಯಲ್ಲಿ ದರ್ಶನ್​ ಗ್ಯಾಂಗ್ ಅಂದ್ರೆ ಬೀರು ಬಿರಿಯಾನಿ ಗ್ಯಾಂಗ್ ಅನ್ನೋ ಹೆಸರಿದೆ ಅನ್ನೋದ ಸ್ಫೋಟಕ ವಿಚಾರವನ್ನು ಹೊರ ಹಾಕಿದ್ದಾರೆ.

ಎಲ್ಲರಿಗೂ ಸ್ನೇಹಿತರು ಇರುತ್ತಾರೆ. ಅದರಲ್ಲಿ ಕೆಟ್ಟವರು, ಒಳ್ಳೆಯವರು ಇರುತ್ತಾರೆ. ಸ್ನೇಹಿತರನ್ನ ಅವರ ಯೋಗ್ಯತೆ ಅನುಸಾರ ಇಟ್ಕೋಳ್ಳಬೇಕು. ಕೆಲಸ ಮಾಡಿದವರು ಮೈ, ಕೈ ನೋವಿಗೆ ಕುಡಿಯುತ್ತಾರೆ. ಕೆಲವೊಬ್ಬರು ಕುಡಿಯೋಕೆ ಅಂತಾನೆ ಬದುಕಿದ್ದಾರೆ. ಇದು ಯಾವುದು ರೀ ಬೀರು ಬಿರಿಯಾನಿ ಗ್ಯಾಂಗ್ ಅಂತ. ಈ ಒಬ್ಬ ವ್ಯಕ್ತಿ ಸರಿಯಾಗಿ ಇದ್ದಿದ್ರೆ ಬಾಕ್ಸ್​ ಆಫೀಸ್ ಸುಲ್ತಾನ್ ಅಂತ ಸುಮ್ಮನೆ ಕರಿಯಲ್ಲ. ಕೆಲಸ ಅಂತ ಬಂದರೆ ದರ್ಶನ್ ರಾಕ್ಷಸ. ಆದರೆ ಕ್ರಮೇಣ ರಾಯರ ಕುದುರೆ ಕತ್ತೆ ಆಯಿತಂತೆ. ಹೀಗೆ ಆಯಿತು ಇದು.

ಉಮಾಪತಿ, ನಿರ್ಮಾಪಕ

ಇದನ್ನೂ ಓದಿ: ರೋಹಿತ್-ರಶೀದ್​​​ಗೆ ವರ್ಲ್ಡ್​​ಕಪ್​ನಲ್ಲಿ ಆಗಿ ಬರೋದಿಲ್ಲ.. ಯಾಮಾರಿದ್ರೆ ‘ದೋಸ್ತ್’​ಗಳೇ ವಿಲನ್ ಆಗ್ತಾರಾ?

ಡಿ ಬಾಂಬ್ 10- ಕಾಲಾಯ ತಸ್ಮೈ ನಮಃ, ನನ್ನ ಮಕ್ಕಳ ಕಣ್ಣೀರಿಗೆ ಬೆಲೆ ಸಿಕ್ಕಿದೆ

ಮೈಸೂರಿನಲ್ಲಿ ನಡೆದ ಗಲಾಟೆಯಿಂದ ಉಮಾಪತಿ ಮಾನಸಿಕವಾಗಿ ಕುಗ್ಗಿದ್ರಂತೆ. ಆವತ್ತು ಉಮಾಪತಿ ಮಕ್ಕಳು ತಬ್ಬಿಕೊಂಡು ಕಣ್ಣೀರು ಹಾಕಿದ್ರಂತೆ. ಅಷ್ಟೆ ಅಲ್ಲ, ದೊಡ್ಡ ನಿರ್ಧಾರ ಕೂಡ ಮಾಡಿದ್ದೆ. ಆದ್ರೆ ನನ್ನ ಕುಟುಂಬದ ಕಾರಣಕ್ಕೆ ನಾನು ಏನು ಮಾಡಲಿಲ್ಲ. ದೊಡ್ಡವರ ದೇವರು ನೋಡ್ಕೋತಾನೆ ಅಂತ ಬುದ್ಧಿ ಹೇಳಿದ್ರು ಅದಕ್ಕೆ ಸುಮ್ನೆ ಆದೆ. ಆದ್ರೆ ಇವತ್ತು ನನ್ನ ಮಕ್ಕಳ ಕಣ್ಣೀರಿಗೆ ಬೆಲೆ ಸಿಕ್ಕಿದೆ ಅಂತ ಹೇಳಿ ತಮ್ಮ ಮನಸ್ಸಲ್ಲಿ ನೋವನ್ನ ಹೊರ ಹಾಕಿದ್ದಾರೆ.

ದರ್ಶನ್ ಅವರು ತೊಂದರೆಯಲ್ಲಿ ಸಿಗಾಕಿಕೊಂಡಿರೋದು ನನಗೂ ಬೇಜಾರ್ ಇದೆ. ನಮ್ಮ ರೀತಿನೇ ಅವರಿಗೂ ಕುಟುಂಬವಿದೆ. ನನ್ನ ಮಕ್ಕಳು ಕಣ್ಣೀರು ಹಾಕಿದಾಗ ದೊಡ್ಡ ತೀರ್ಮಾನ ಮಾಡಿದ್ದೆ. ಏನೋ ಒಂಥರಾ ದೊಡ್ಡ ರೀತಿಯಲ್ಲೇ ಕೊಡಬೇಕು ಅನ್ಕೋಂಡಿದ್ದೆ. ಆದರೆ ನನಗೆ ಒಳ್ಳೆ ಗುರು, ಕುಟುಂಬ ಇತ್ತು. ನನಗೆ ಇರೋದು ಒಂದೇ ಮನೆ. ನಾ ಬಂದರೆ ಅದೇ ಮನೆಗೆ ಬರಬೇಕು. ಅದಕ್ಕೆ ಅವರೆಲ್ಲ ಬುದ್ಧಿ ಹೇಳಿದರು. ದೇವರೆಲ್ಲ ನೋಡ್ಕಾಂತಾನೆ ಬಿಡು ಎಂದ್ರು. ನಾನು ನಂಬಿರುವ ದೇವರು ನನ್ನ ಕೈ ಬಿಡಲಿಲ್ಲ ಅಂತ ನಾ ಭಾವಿಸುತ್ತೇನೆ. ನನ್ನ ಮಕ್ಕಳ ಕಣ್ಣೀರಿಗೆ ಇವತ್ತು ಬೆಲೆ ಸಿಕ್ಕಿದೆ. ಏನೇ ತೊಂದರೆ ಬಂದರು ನನಗಿರಲಿ. ನನ್ನ ನಂಬಿರೋರಿಗೆ ಇರಬಾರದು ಎನ್ನುವ ದೃಷ್ಟಿ ಇರುತ್ತದೆ. ಯಾರು ಯಾವುದೇ ಘಟನೆಯಿಂದ ಎಸ್ಕೇಪ್ ಆದರೂ ಮೇಲೋಬ್ಬ ಭಗವಂತನ ಕರ್ಮ ಎನ್ನುವ ದೃಷ್ಟಿಯಿಂದ ಎಸ್ಕೇಪ್ ಆಗೋಕೆ ಸಾಧ್ಯವಿಲ್ಲ. ತಪ್ಪು ಆದರೆ ಶಿಕ್ಷೆ ಆಗಲೇಬೇಕು. ಕಾರು ಖರೀದಿ ಮಾಡಬಹುದು. ಅವರ ಹತ್ತಿರ ಇರೋ ನಡತೆ, ಗುಣ ಖರೀದಿ ಮಾಡೋಕೆ ಆಗಲ್ಲ ಅಂತ ಯಾರೋ ಹೇಳಿದ್ದರು.

ಉಮಾಪತಿ, ನಿರ್ಮಾಪಕ

ಇವತ್ತು ಅಕ್ಷರಶಃ ಉಮಾಪತಿ ಆಡಿದ ಮಾತುಗಳು ಮನಸ್ಸಲ್ಲಿ ಹೇಳದೆ ಉಳಿದ್ದಿದ ಜ್ವಾಲೆಯನ್ನ ಹೊರ ಹಾಕಿತ್ತು. ದರ್ಶನ್ ಎಸಗಿದ್ದ ಒಂದೊಂದು ಕೃತ್ಯಕ್ಕೂ ಉಮಾಪತಿ ಆಡಿದ ಮಾತುಗಳಲ್ಲೇ ಹೊರ ಬಂದಿದ್ವು. ಅದೇನೆ ಇರಲಿ ಮನುಷ್ಯ ಜೀವನದಲ್ಲಿ ತಪ್ಪು ಮಾಡೋದು ಸಹಜ. ಆದ್ರೆ ಮಾಡಿದ ತಪ್ಪು ಪದೇ ಪದೇ ಮಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ದರ್ಶನ್​ ಪರಿಸ್ಥಿತಿಯೇ ದೊಡ್ಡ ಉದಾಹರಣೆ. ದರ್ಶನ್​ಗೆ ಶಿಕ್ಷೆಯಾಗುತ್ತಾ? ಅಥವಾ ಇಲ್ವಾ? ಗೊತ್ತಿಲ್ಲ. ಆದ್ರೆ ಇಷ್ಟು ವರ್ಷ ಕಷ್ಟ ಪಟ್ಟು ಬಣ್ಣದ ಲೋಕದಲ್ಲಿ ಹೆಸರು ಮಾಡಿದ್ದ ದರ್ಶನ್​ ಕೆರಿಯರ್​ಗೆ ಇದು ಬಹುದೊಡ್ಡ ಕಪ್ಪು ಚುಕ್ಕೆಯಾಗಿರೋದಂತು ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ನಿಂದ ತಾಯಿ, ತಮ್ಮ ದೂರ ಇರೋದು ಯಾಕೆ.. ಶಾಕಿಂಗ್ ವಿಷ್ಯ ಬಿಚ್ಚಿಟ್ಟ ಉಮಾಪತಿ; ಏನಂದ್ರು?

https://newsfirstlive.com/wp-content/uploads/2024/06/DARSHAN_UMAPATI.jpg

Load More