newsfirstkannada.com

ಸ್ಟೇಷನ್‌ನಲ್ಲಿ ದರ್ಶನ್ ಜೊತೆ ಮಾತಾಡಿ ಬಿಗ್ ಅಪ್​ಡೇಟ್ ಕೊಟ್ಟ ಲಾಯರ್.. ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌!

Share :

Published June 12, 2024 at 2:18pm

  ಕೇಸ್ ಸಂಬಂಧ ದರ್ಶನ್ ಪರ ವಕೀಲ ಮಾತಾಡಿದ್ದೇನು?

  ನಟ ದರ್ಶನ್ ಜೊತೆ ಮಾತನಾಡಿದಾಗ ನಿಜ ಗೊತ್ತಾಗಿದೆ

  ಕೊಲೆ ಕೇಸ್​ನಲ್ಲಿ ದರ್ಶನ್ ಕೈವಾಡದ ಬಗ್ಗೆ ಏನ್ ಹೇಳಿದ್ರು?

ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪ ಸದ್ಯ ಇಡೀ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಪವಿತ್ರಾ ಗೌಡ, ನಟ ಸೇರಿದಂತೆ 13 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಒಂದು ದಿನ ಜೈಲಿನಲ್ಲೇ ಕಳೆದಿದ್ದಾರೆ. ಆದರೆ ಇದೀಗ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮಾತನಾಡಿ ಬಿಗ್ ಅಪ್​ಡೇಟ್ ಕೊಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಟ ದರ್ಶನ್ ಅವರಿಗೆ ಒಂಚೂರು ಏನೆಂದು ಗೊತ್ತಿಲ್ಲ. ಈ ಕೇಸ್​ನಲ್ಲಿ ಅವರು ತುಂಬಾ ಇನೋಸೆಂಟ್. ಈ ರೇಣುಕಾಸ್ವಾಮಿ ಹತ್ಯೆಯಲ್ಲಿ ನಿನ್ನೆವರೆಗೂ ನನಗೂ ಕೆಲವು ಕನ್ಫ್ಯೂಸ್​ಗಳು ಇದ್ದವು. ಆದರೆ ಈ ಸಂಬಂಧ ದರ್ಶನ್ ಅವರ ಜೊತೆ ಮಾತನಾಡಿದಾಗ ನಿಜವೇನು ಎಂಬುದೆಲ್ಲ ಗೊತ್ತಾಗಿದೆ. ಇದರಲ್ಲಿ ಅವರು ಇನೋಸೆಂಟ್ ಆಗಿದ್ದಾರೆ. ಈ ಕೊಲೆಗೂ ದರ್ಶನ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಹತ್ಯೆ ಕುರಿತು ಅವರಿಗೆ ಮಾಹಿತಿನೇ ಇರಲಿಲ್ಲ ಎಂದು ವಕೀಲರು ಹೇಳಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವುದು ಅಭಿಮಾನಿ ಬಳಗಕ್ಕೆ ತೀವ್ರ ನೋವು ತಂದಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ರೇಣುಕಾಸ್ವಾಮಿ ಅಂತ್ಯಸಂಸ್ಕಾರ ಚಿತ್ರದುರ್ಗದಲ್ಲಿ ನೆರವೇರಿದೆ. ಆದರೆ ಮುಂದೆ ಈ ಕೇಸ್ ಯಾವ್ಯಾವ ಸ್ವರೂಪ ಪಡೆದುಕೊಳ್ಳುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟೇಷನ್‌ನಲ್ಲಿ ದರ್ಶನ್ ಜೊತೆ ಮಾತಾಡಿ ಬಿಗ್ ಅಪ್​ಡೇಟ್ ಕೊಟ್ಟ ಲಾಯರ್.. ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌!

https://newsfirstlive.com/wp-content/uploads/2024/06/DARSHAN_LAWER.jpg

Load More