newsfirstkannada.com

ಡೆವಿಲ್ ಗ್ಯಾಂಗ್‌ಗೆ ಬಿಗ್‌ ಶಾಕ್; ದರ್ಶನ್ ಸಿನಿಮಾ ನಿರ್ಮಾಪಕರಿಗೆ ನಡುಕ ಹುಟ್ಟಿಸಿದೆ ಈ ನಿರ್ಧಾರ!

Share :

Published June 24, 2024 at 9:26pm

Update June 24, 2024 at 10:17pm

  ದರ್ಶನ್​ ಫಾರಿನ್ ಟ್ರಿಪ್​, ಸಿನಿಮಾ ಶೂಟಿಂಗ್​ಗೆ ಬ್ರೇಕ್ ಬೀಳೋ ಸಾಧ್ಯತೆ

  ಇನ್ಮೇಲೆ ವಿದೇಶದಲ್ಲಿ ದರ್ಶನ್ ಸಿನಿಮಾ ಚಿತ್ರೀಕರಣ ಮಾಡೋಕೆ ಆಗಲ್ವಾ​?

  ದರ್ಶನ್​ಗೆ ರಿಲೀಫ್​ ಸಿಕ್ಕರೂ ಮೊದಲಿನಂತೆ ಫ್ರೀಡಂ ಸಿಗೋದಿಲ್ಲ ನಿಜಾನಾ?

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಜೈಲು ಸೇರಿದ್ಮೇಲೆ ದರ್ಶನ್​ಗೆ ಒಂದಲ್ಲ ಒಂದು ಕಂಟಕ ಕಾಡ್ತಾನೇ ಇದೆ. ಕಾನೂನಿನ ಕುಣಿಕೆ, ಮನೆ ಒತ್ತುವರಿಯಿಂದ ಹಿಡಿದು ತಿನ್ನೋ ಫುಡ್​ವರೆಗೂ ಎಲ್ಲವೂ ವಿಷಮಸ್ಥಿಗೆ ತಳ್ಳಿದೆ. ಈ ನಡುವೆ ತನ್ನಿಷ್ಟದಂತೆ ಸಿನಿಮಾ ಮಾಡೋಕು ದಾಸನಿಗೆ ಇನ್ಮೇಲೆ ಪರ್ಮೀಷನ್​ ಇರಲ್ಲ. ದರ್ಶನ್​ ಪಾಸ್ ಪೋರ್ಟ್ ರದ್ದಿಗೆ ಪೊಲೀಸರು ಮನವಿ ಸಲ್ಲಿಸಿದ್ದು, ಫಾರಿನ್ ಟ್ರೀಮ್​, ಶೂಟಿಂಗ್​ಗೆ ಬ್ರೇಕ್ ಬೀಳೋ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಮುದ್ದು ಮುದ್ದಾದ ಅವಳಿ ಶಿಶುಗಳನ್ನೇ ಸುಟ್ಟು ಹಾಕಿದ ಪಾಪಿ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಚಾರ್ಜ್ ಶೀಟ್ ಆದ್ಮೇಲೆ ದರ್ಶನ್​ಗೆ ಎದುರಾಗಿರುವ ಮತ್ತೊಂದು ಸಂಕಷ್ಟ ಇದೇನೇ. ಇನ್​ಫ್ಯಾಕ್ಟ್​​ ದರ್ಶನ್​ಗೆ ಅಷ್ಟೇ ಅಲ್ಲ. ಚಿತ್ರರಂಗಕ್ಕೂ ಕೂಡ ಇದೊಂದು ಆಘಾತಕಾರಿ ವಿಚಾರ. ಯಾಕಂದ್ರೆ ಒಂದು ವೇಳೆ ಪೊಲೀಸರ ಮನವಿ ಮೇರೆಗೆ ನ್ಯಾಯಾಲಯ ದರ್ಶನ್​ ಪಾಸ್ ಪೋರ್ಟ್ ರದ್ದು ಮಾಡಿದ್ದಲ್ಲಿ ದರ್ಶನ್​ಗೆ ವಿದೇಶಕ್ಕೆ ಹೋಗುವ ಯಾವ ಅವಕಾಶವು ಇಲ್ಲದಂತಾಗುತ್ತದೆ. ದರ್ಶನ್​ನ ಹಾಕಿ ಚಿತ್ರ ಮಾಡೋರು ಇನ್ಮೇಲೆ ಇದನ್ನ ಗಮನಿಸಲೇಬೇಕು. ಈ ರದ್ದು ಅನ್ನ ಗಮನದಲ್ಲಿಟ್ಟುಕೊಂಡೇ ಚಿತ್ರೀಕರಣಕ್ಕೆ ಪ್ಲಾನ್ ಮಾಡಬೇಕು.

ರದ್ದಾಗುತ್ತಾ ಪಾಸ್​ಪೋರ್ಟ್​?

ಕೊಲೆ ಆರೋಪಿ ಹಾಗೂ ಪ್ರಭಾವಿ ಆಗಿರುವ ನಟ ದರ್ಶನ್​, ಎಷ್ಟೇ ಪ್ರಭಾವಿಯಾಗಿದ್ರೂ, ಗಣ್ಯನಾಗಿದ್ರೂ ಪೊಲೀಸ್, ಕಾನೂನಿಗೆ ಆತ ಆರೋಪಿಯೇ. ಇದರಿಂದ ಆರೋಪಿ ಪರಾರಿಯಾಗದಂತೆ ನೋಡಿಕೊಳ್ಳೋದು ಅಗತ್ಯ. ಇದೇ ಕಾರಣಕ್ಕೆ ದರ್ಶನ್​ ಪಾಸ್​ಪೋರ್ಟ್ ರದ್ಧತಿಗೆ ಪತ್ರ ಬರೆಯಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಕೊಲೆ ಆರೋಪಿ ಬೇರೆ ದೇಶಗಳಿಗೆ ಎಸ್ಕೇಪ್ ಆಗಬಹುದು ಎಂಬ ಕಾರಣದಿಂದ ಪಾಸ್ ಪೋರ್ಟ್ ರದ್ಧತಿಗೆ ಪೊಲೀಸರು ಮನವಿ ಸಲ್ಲಿಸಲಿದ್ದಾರೆ. ಕೃತ್ಯವನ್ನ ಎಸಗಿರುವ ವ್ಯಕ್ತಿ ಬೇರೆ ದೇಶಗಳಿಗೆ ಪರಾರಿಯಾಗದಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

ಹೀಗಾಗಿ, ಪಾಸ್​ಪೋರ್ಟ್ ರದ್ದು ಬಳಿಕ ಸ್ವದೇಶದಲ್ಲೇ ದರ್ಶನ್ ಚಿತ್ರ ಚಿತ್ರೀಕರಣ ಮಾಡಬೇಕಿದೆ. ಸದ್ಯ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಇದೆ. ಪೂರ್ತಿ ಆಗದಿದ್ರೂ ಒಂದು ಹಾಡನ್ನಾದರೂ ವಿದೇಶದಲ್ಲಿ ಚಿತ್ರೀಕರಣ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ಆದ್ರೆ, ಮುಂದಿನ ದಿನಗಳಲ್ಲಿ ದರ್ಶನ್​ ವಿದೇಶಿ ಚಿತ್ರೀಕರಣ ಮಾಡಿದರೆ ಅದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ ನ್ಯಾಯಾಲಯ ಅನುಮತಿ ನೀಡಿದರೆ ಮಾತ್ರ ವಿದೇಶಕ್ಕೆ ತೆರಳಬಹುದು. ಆದರೆ ಪಾಸ್ ಪೋರ್ಟ್ ರದ್ದು ಮಾಡಿದರೆ ವಿದೇಶಿ ಕನಸು ಭಗ್ನವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಅತ್ತ ದರ್ಶನ್ ಪಾಸ್​ಪೋರ್ಟ್​ ರದ್ದು ಮಾಡಲು ಪೊಲೀಸರು ಮನವಿ ಸಲ್ಲಿಸುವ ಚಿಂತನೆಯಲ್ಲಿದ್ರೆ ಇತ್ತ ಪಂಜರದ ಗಿಣಿಯಾಗಿರುವ ದರ್ಶನ್​ಗೆ ಕಾರಗೃಹದಿಂದ ರಿಲೀಫ್​ ಸಿಕ್ಕರೂ ಮೊದಲಿನಂತೆ ಫ್ರೀಡಂ ಸಿಕ್ಕಲ್ಲ ಅನ್ನೋದು ಪಕ್ಕಾ ಎನ್ನುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಡೆವಿಲ್ ಗ್ಯಾಂಗ್‌ಗೆ ಬಿಗ್‌ ಶಾಕ್; ದರ್ಶನ್ ಸಿನಿಮಾ ನಿರ್ಮಾಪಕರಿಗೆ ನಡುಕ ಹುಟ್ಟಿಸಿದೆ ಈ ನಿರ್ಧಾರ!

https://newsfirstlive.com/wp-content/uploads/2024/06/Darshan-Fans-1.jpg

Load More