newsfirstkannada.com

ರೇಣುಕಾಸ್ವಾಮಿಗೆ ಯಾಕೆ ಬೇಕಿತ್ತು ಈ ಉಸಾಬರಿ-ನಟಿ ಅಪೂರ್ವ ಹೇಳಿಕೆ

Share :

Published July 8, 2024 at 1:51pm

    ಯಾರದೇ ಮನೆಯ ಮಹಿಳೆಯರ ವಿಚಾರಕ್ಕೆ ಹೋಗೋದು ತಪ್ಪು

    ರೇಣುಕಾಸ್ವಾಮಿ ಮಾಡಿದ ತಪ್ಪಿಗೆ ತನ್ನ ಮನೆ ದೀಪ ಹಾರಿ ಹೋಗಿದೆ

    ಕೆಟ್ಟ ಮೆಸೇಜ್​ಗಳಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಜೈಲು ಪಾಲಾಗಿದ್ದಾರೆ. ಸದ್ಯ ಈ ಕೇಸ್​ ಕೋರ್ಟ್​​ನಲ್ಲಿದ್ದು ವಿಚಾರಣೆ ಹಂತದಲ್ಲಿದೆ. ಪೊಲೀಸರು ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದಾರೆ. ಹೀಗಿರುವಾಗಲೇ ಹೆಣ್ಣು ಮಕ್ಕಳಿಗೆ ಬೇಕಾ ಬಿಟ್ಟಿ ಕಮೆಂಟ್ ಮಾಡೋದು ಸರಿಯಲ್ಲ. ರೇಣುಕಾಸ್ವಾಮಿಗೆ ಯಾಕೆ ಬೇಕಿತ್ತು ಈ ಉಸಾಬರಿ ಎಂದು ಸ್ಯಾಂಡಲ್​​ವುಡ್ ನಟಿ ಅಪೂರ್ವ ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ರಸೆಲ್.. ಹೃದಯ ಗುಜರಾತಿ, ಆತ್ಮ ಮಾತ್ರ ಕೆರಿಬಿಯನ್ ಅನ್ನೋದ್ಯಾಕೆ..?

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಟಿ ಅಪೂರ್ವ ಅವರು, ರೇಣುಕಾಸ್ವಾಮಿಗೆ ಯಾಕೆ ಬೇಕಿತ್ತು ಈ ಉಸಾಬರಿ. ಹೆಣ್ಣು ಮಕ್ಕಳಿಗೆ ಬೇಕಾ ಬಿಟ್ಟಿ ಕಮೆಂಟ್ ಮಾಡೋದು ಸರಿಯಲ್ಲ. ಯಾರೂ ಕೂಡ ಈ ರೀತಿ ಮಾಡಬಾರದು. ಚಿತ್ರದುರ್ಗದ ರೇಣುಕಾಸ್ವಾಮಿ ಮಾಡಿದ ತಪ್ಪಿಗೆ ಅವರ ಮನೆಯ ದೀಪನೇ ಹಾರಿ ಹೋಗಿದೆ. ಆತನ ಹೆಂಡತಿ ತುಂಬು ಗರ್ಭಿಣಿ. ಅವರ ಹೊಣೆಗಾರಿಕೆ ಇವಾಗ ನೋಡೋದ್ಯಾರು ಎಂದು ಕೇಳಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್​.. ಪತಿ ಕೊಡಿಸಿದ ಐಷಾರಾಮಿ ಸ್ಯಾರಿ ಬೆಲೆ ಎಷ್ಟು?

ಯಾರೇ ಆಗಲಿ, ಹೆಣ್ಣು ಮಕ್ಕಳ ವಿಚಾರದಲ್ಲಿ ಕೊಂಚ ಎಚ್ಚರಿಕೆಯಿಂದ ಇರಬೇಕು. ಎಷ್ಟೋ ಮಹಿಳೆಯರು, ಯುವತಿಯರು ಇಂತಹ ಕೆಟ್ಟ ಮೆಸೇಜ್​ಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ನಾನು ನೋಡಿದ್ದೇವೆ. ಯಾರದೇ ಮನೆಯ ಹೆಣ್ಮಕ್ಕಳಿಗೆ, ಮಹಿಳೆಯರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದರೆ ಯಾರೂ ಕೂಡ ಸಹಿಸಿಕೊಳ್ಳುವುದಿಲ್ಲ. ನಟ ದರ್ಶನ್ ಅವರು ಈ ಆರೋಪದಲ್ಲಿ ಜೈಲು ಪಾಲಾಗಿರೋದು ಬೇಸರ ತರಿಸಿದೆ ಎಂದು ಅಪೂರ್ವ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿಗೆ ಯಾಕೆ ಬೇಕಿತ್ತು ಈ ಉಸಾಬರಿ-ನಟಿ ಅಪೂರ್ವ ಹೇಳಿಕೆ

https://newsfirstlive.com/wp-content/uploads/2024/07/darshan_renuka.jpg

Load More