newsfirstkannada.com

ನಟ ದರ್ಶನ್​​ಗೆ ಕೊಟ್ಟ ಹಣದ ರಹಸ್ಯ ಬಯಲು -ಮೋಹನ್​ ರಾಜ್​ ಸ್ಫೋಟಕ ಹೇಳಿಕೆ

Share :

Published July 6, 2024 at 8:50am

  ಆರೋಪಿ ಧನರಾಜ್​ಗೆ ಪವಿತ್ರಾಗೌಡ ಆಪ್ತೆ ಸಮತಾ ಹಣ ನೀಡಿದ್ರಾ?

  ರೇಣುಕಾಸ್ವಾಮಿಗೆ ಕರೆಂಟ್​ ಶಾಕ್​ ನೀಡಿದ್ದ ಆರೋಪಿ ಧನರಾಜ್​

  ‘ಸಿನಿಮಾ ಶೂಟಿಂಗ್ ಇತ್ತಾ?’ ಡೆವಿಲ್ ಮೂವಿ ಡೈರೆಕ್ಟರ್​ಗೂ ಸಂಕಷ್ಟ..!

ರೇಣುಕಾಸ್ವಾಮಿ ಕೊಲೆ ಕೇಸ್​ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ನಟ ದರ್ಶನ್​ಗೆ ಮಾಜಿ ಉಪಮೇಯರ್​ 40 ಲಕ್ಷ ಹಣ ಕೊಟ್ಟಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ಮೋಹನ್​ ರಾಜ್​ಗೆ ನೋಟಿಸ್​ ನೀಡಿದ್ದ ಪೊಲೀಸರು ಠಾಣೆಗೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಪವಿತ್ರಾಗೌಡ ಆಪ್ತೆಗೂ ಪೊಲೀಸರು ನೋಟಿಸ್​ ನೀಡಿದ್ದಾರೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್​ನಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು.. ಕಾಫಿನಾಡಿನತ್ತ ಪ್ರವಾಸಿಗರ ಪಯಾಣ

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ದರ್ಶನ್ ಆ್ಯಂಡ್​ ಗ್ಯಾಂಗ್​ನ 17 ಜನ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದ್ರೆ ಕೊಲೆ ಬಳಿಕ ದರ್ಶನ್​ ಅಂಡ್​ ಗ್ಯಾಂಗ್​ ತೆರೆ ಮರೆಯಲ್ಲಿ ನಿಂತು ಸಹಾಯ ಮಾಡಿದವರ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನ ನಟ ದರ್ಶನ್​ಗೆ 40 ಲಕ್ಷ ಹಣ ನೀಡಿದ್ದ ಮಾಜಿ ಉಪ ಮೇಯರ್​ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ. ಇವತ್ತು ಮತ್ತಷ್ಟು ಜನರಿಗೆ ನೋಟಿಸ್​ ಕೊಟ್ಟು ಠಾಣೆಗೆ ಬರುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕೆಲವ್ರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ದೆಯೂ ಬರಲ್ಲ, ತಲೆಯೂ ಓಡಲ್ಲ -ಕುಮಾರಸ್ವಾಮಿ-ಡಿಕೆಶಿ ಮಧ್ಯೆ ವಾಗ್ಯುದ್ಧ ಹೆಂಗಿದೆ ಗೊತ್ತಾ?

ರೇಣುಕಾಸ್ವಾಮಿ ಕೊಲೆಯಾದ ಬಳಿಕ ಹಣದ ಹೊಳೆ ಹರಿಸಿ ನಟ ದರ್ಶನ್​ ಸಾಕ್ಷ್ಯನಾಶ ಯತ್ನಿಸಿದ್ದು, ವಿಚಾರಣೆ ವೇಳೆ ಬಯಲಾಗಿದೆ ಎನ್ನಲಾಗಿದೆ. ಮಾಜಿ ಉಪಮೇಯರ್​ ಒಬ್ಬರು ನಟ ದರ್ಶನ್​ಗೆ 40 ಲಕ್ಷ ಹಣ ಕೊಟ್ಟಿದ್ದು, ಆ ಹಣವನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, 40 ಲಕ್ಷ ಹಣ ಕೊಟ್ಟಿದ್ದೇಕೆ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ದರ್ಶನ್​ ಆಪ್ತ ಮೋಹನ್​ರಾಜ್​ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.. ಕೊನೆಗೂ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಮಾಜಿ ಉಪ ಮೇಯರ್​, ದರ್ಶನ್​ಗೆ ಕೊಟ್ಟ 40 ಲಕ್ಷದ ಹಣದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅವರ ದುಡ್ಡನ್ನ ಅವರಿಗೆ ಕೊಟ್ಟಿದ್ದೀನಿ

ಆ ಕ್ಯಾಶ್ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆಲ್ಲ ಉತ್ತರ ಕೊಟ್ಟಿದ್ದೇನೆ. ಮೂರು ತಿಂಗಳ ಹಿಂದೆ ನಾನು ಇಸ್ಕೊಂಡಿದ್ದೆ, ಅದನ್ನೇ ವಾಪಸ್ ಕೊಟ್ಟಿದ್ದೇನೆ. ಪ್ರಕರಣ ತನಿಖೆ ಹಂತದಲ್ಲಿದೆ. ಎಲ್ಲವನ್ನೂ ಲಿಖಿತ ರೂಪದಲ್ಲಿ ಕೊಟ್ಟಿದ್ದೀನಿ. ಸಿನಿಮಾ ವಿಚಾರವಾಗಿ ಅಲ್ಲ, ವೈಯಕ್ತಿಕವಾಗಿ ತಗೊಂಡಿದ್ದೆ, ವೈಯಕ್ತಿವಾಗಿ ಕೊಟ್ಟಿದ್ದೆ. ಅವರದ್ದೇ ದುಡ್ಡನ್ನ ಅವರಿಗೆ ಕೊಟ್ಟಿದ್ದೀನಿ.

​ಮೋಹನ್​ ರಾಜ್​, ಮಾಜಿ ಉಪ ಮೇಯರ್​

ಪವಿತ್ರಾಗೌಡ ಸ್ನೇಹಿತೆ ಸಮತಾಗೆ ಪೊಲೀಸರ ನೋಟಿಸ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಆಪ್ತರಿಗೆ ಮಾತ್ರವಲ್ಲ.. ಪವಿತ್ರಾಗೌಡರ ಆಪ್ತೆಗೂ ಪೊಲೀಸರು ನೋಟಿಸ್​ ನೀಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಆರೋಪಿ ಧನರಾಜ್​ಗೆ ಪವಿತ್ರಾಗೌಡ ಆಪ್ತೆ ಸಮತಾ ಹಣ ನೀಡಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಸಮತಾಗೆ ಪೊಲೀಸರು ನೋಟಿಸ್​ ನೀಡಿ, ವಿಚಾರಣೆಗೆ ಕರೆದಿದ್ದಾರೆ.

ಇದನ್ನೂ ಓದಿ: ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಕರಾವಳಿ, ಮಲೆನಾಡು! ರೆಡ್​ ಅಲರ್ಟ್.. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ರೇಣುಕಾಸ್ವಾಮಿಗೆ ಕರೆಂಟ್​ ಶಾಕ್​ ನೀಡಿದ್ದ ಆರೋಪಿ ಧನರಾಜ್​, ಇದಕ್ಕಾಗಿ ಮೆಗ್ಗಾರ್​ ತಂದಿದ್ದ.. ಆದ್ರೆ ಆರೋಪಿ ಧನರಾಜ್​ಗೆ ಸಮತಾ ಹಣ ನೀಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಫೋನ್ ಪೇ ಮೂಲಕ 30 ಸಾವಿರ ಹಣ ವರ್ಗಾಯಿರುವ ಆರೋಪ ಇದೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ಬಳಿಕ ಹಣ ಕೊಡಲು ಕಾರಣವೇನು? ಈ ಹಣವನ್ನು ಕೊಟ್ಟಿದ್ದೇಕೆ. ಈ ಹಣ ಕೊಡಲು ಪವಿತ್ರಾ ಹೇಳಿದ್ರಾ? ಸಮತಾ, ಧನರಾಜ್​ಗೂ ಪರಿಚಯ ಇತ್ತಾ? ಸಮತಾ ನಿಜಕ್ಕೂ ಹಣ ಕಳುಹಿಸಿದ್ರಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ನೋಟಿಸ್​ ನೀಡಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಇವತ್ತೂ ಕೂಡ ನಿರ್ದೇಶಕ ಪ್ರಕಾಶ್‌ ವಿಚಾರಣೆ ಸಾಧ್ಯತೆ

ಇನ್ನು ರೇಣುಕಾಸ್ವಾಮಿ ಕೊಲೆ ಬಳಿಕ ಸೈಲೆಂಟ್​ ಆಗಿಯೇ ಮೈಸೂರಿಗೆ ತೆರಳಿ ಡೆವಿಲ್​ ಚಿತ್ರದ ಶೂಟಿಂಗ್​ನಲ್ಲಿ ದರ್ಶನ್​ ಭಾಗಿಯಾಗಿದ್ರು. ದರ್ಶನ್‌ರ ಹೇಳಿಕೆ ಆಧರಿಸಿ ಪೊಲೀಸರು ಪ್ರಕಾಶ್‌ ಅವರಿಗೂ ನೋಟಿಸ್‌ ಕೊಟ್ಟು ವಿಚಾರಣೆ ಮಾಡಿದ್ದಾರೆ. ಕೊಲೆ ನಂತರದ ದಿನ ಮೈಸೂರಿನಲ್ಲಿ ಡೆವಿಲ್‌ ಚಿತ್ರದ ಚಿತ್ರೀಕರಣ ಇತ್ತೇ? ನಟ ದರ್ಶನ್‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರೇ? ಎಂಬ ಪ್ರಶ್ನೆಗಳನ್ನು ಪ್ರಕಾಶ್‌ಗೆ ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನು ಇವತ್ತೂ ಕೂಡ ವಿಚಾರಣೆಗೆ ಹಾಜರಾಗುವಂತೆ ಡೆವಿಲ್​ ನಿರ್ದೇಶಕ ಪ್ರಕಾಶ್​ಗೆ ನೋಟಿಸ್​ ನೀಡಿದ್ದಾರೆ.

ಇದನ್ನೂ ಓದಿ: ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?

ಇವರಷ್ಟೇ ಅಲ್ಲ, ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರ ಕಾರು ಚಾಲಕ ಕಾರ್ತಿಕ್‌ ಪುರೋಹಿತ್‌ ಎಂಬಾತನಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಕಾರ್ತಿಕ್‌ ಪುರೋಹಿತ್‌, ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪ್ರದೋಷ್‌ನ ಪರಮಾಪ್ತ.. ಪೊಲೀಸ್‌ ನೋಟಿಸ್‌ ಜಾರಿ ಬೆನ್ನಲ್ಲೇ ಕಾರ್ತಿಕ್‌ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾನೆ. ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮತ್ತಷ್ಟು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​​ಗೆ ಕೊಟ್ಟ ಹಣದ ರಹಸ್ಯ ಬಯಲು -ಮೋಹನ್​ ರಾಜ್​ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/07/DARSHAN-3.jpg

Load More