newsfirstkannada.com

ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?

Share :

Published June 13, 2024 at 6:43am

Update June 13, 2024 at 6:48am

  ಪೊಲೀಸರ ಖಡಕ್​ ತನಿಖೆಯಿಂದ ಆರೋಪಿಗಳು ಅಂದರ್​​

  ರೇಣುಕಾಸ್ವಾಮಿಯ ಕೊಲೆಯಲ್ಲಿ ಮೂರು ತಂಡಗಳು ಭಾಗಿ

  ಡಿ-ಗ್ಯಾಂಗ್​ನ ಖತರ್ನಾಕ್​ ಪ್ಲಾನ್​ ಪೊಲೀಸರ ಮುಂದೆ ಫ್ಲಾಪ್

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್​ ಮಾಡಿ, ಭೀಕರವಾಗಿ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರ ತನಿಖೆ ವೇಳೆ ಬಗೆದಷ್ಟು ರಸಹ್ಯಗಳು ಬಯಲಾಗುತ್ತಿವೆ. ಈ ಕೊಲೆ ಕೇಸ್​ನಲ್ಲಿ ಮೂರು ತಂಡಗಳು ಭಾಗಿಯಾಗಿದ್ದು, ದರ್ಶನ್ ಅಂಡ್ ಗ್ಯಾಂಗ್ ತಗಲ್ಲಾಕೊಂಡಿದ್ದೇ ರೋಚಕವಾಗಿದೆ. ಇದರ ಜೊತೆಗೆ ನಟ ದರ್ಶನ್​ ವಿರುದ್ಧ ಮತ್ತಷ್ಟು ಸಾಕ್ಷ್ಯಗಳು ಲಭ್ಯವಾಗಿವೆ.

ಇದನ್ನೂ ಓದಿ: ‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

ರೇಣುಕಾಸ್ವಾಮಿಯ ಮರ್ಡರ್​ ಕೇಸ್​ನಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಪೊಲೀಸರ ತನಿಖೆ ವೇಳೆ ರೇಣುಕಾಸ್ವಾಮಿಯ ಕೊಲೆಯಲ್ಲಿ ಮೂರು ತಂಡಗಳು ಭಾಗಿರೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅದರಲ್ಲಿ ಒಂದು ಕಿಡ್ನ್ಯಾಪ್​ ತಂಡ ಮತ್ತೊಂದು ಹಲ್ಲೆ ನಡೆಸಿ ಕೊಂದ ತಂಡ. ಇನ್ನೊಂದು ಮೃತದೇಹವನ್ನು ವಿಲೇವಾರಿ ಮಾಡಿ, ಪೊಲೀಸರಿಗೆ ಶರಣಾದ ತಂಡ. ಈ ಮೂರು ತಂಡಗಳು ಪೊಲೀಸರ ಕೈಯಲ್ಲಿ ಲಾಕ್​ ಆಗಿದ್ದೇ ಬಲು ರೋಚಕವಾಗಿದೆ.

ನಟ ದರ್ಶನ್​ ಅಣತಿಯಂತೆ ರಾಘವೇಂದ್ರ & ಟೀಂ, ಚಿತ್ರದುರ್ಗದಲ್ಲಿ ಜೂನ್ 8 ರಂದು ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿಯನ್ನ ಎತ್ತಾಕಿಕೊಂಡು ಬಂದಿತ್ತು. ಬಳಿಕ ಆರ್​ಆರ್​ ನಗರದ ಪಟ್ಟಣಗೆರೆಯ ಶೆಡ್​ ಬಳಿಗೆ ರಾಘವೇಂದ್ರ ಅಂಡ್​ ಟೀಂ ಕರೆ ತಂದಿದ್ದಾರೆ. ಅಷ್ಟೊತ್ತಿಗಾಗಲೇ ಶೆಡ್​ ಬಳಿ ಕಾಯ್ತಿದ್ದ ವಿನಯ್, ಕಾರ್ತಿಕ್, ಪ್ರದೋಶ್, ನಿಖಿಲ್, ಕೇಶವಮೂರ್ತಿ, ದೀಪಕ್ ನಂದೀಶ್ ನಾಗರಾಜ್ ತಂಡ ರೇಣುಕಾಸ್ವಾಮಿ ಬರ್ತಿದ್ದಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಜೂನ್​ 8ರ ಸಂಜೆ ಹೊತ್ತಿಗೆ ಪವಿತ್ರಾ ಗೌಡ ಜೊತೆ ಶೆಡ್​ ಬಳಿ ಹೋದ ದರ್ಶನ್​ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ, ಬಳಿಕ ದರ್ಶನ್​ ಮತ್ತು ಪವಿತ್ರಾ ವಾಪಸ್​ ತೆರಳಿದ್ದಾರೆ. ದರ್ಶನ್ ಶೆಡ್ ನಿಂದ ತೆರಳುವ ವೇಳೆಗೆ ಅರೆಜೀವವಾಗಿದ್ದ ರೇಣುಕಾಸ್ವಾಮಿ, ಸಂಜೆ 6 ಗಂಟೆ ಸುಮಾರಿಗೆ ಮೃತ ಪಟ್ಟಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮೂರು ತಂಡಗಳು ರಾತ್ರಿಯೆಲ್ಲ ದರ್ಶನ್​ ಜೊತೆ ವಾಟ್ಸಾಪ್​ ಕಾಲ್​ ಮಾಡಿದ್ದ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ. ಇನ್ನು, ರೇಣುಕಾಸ್ವಾಮಿ ಮೃತಪಟ್ಟಿರುವ ವಿಷಯ ಕಿವಿಗೆ ಬೀಳ್ತಿದ್ದಂತೆ, ದರ್ಶನ್​ ತಮ್ಮ ಸಹಚರರ ಮೇಲೆ ಕೆಂಡಾಮಂಡಲ ಆಗಿದ್ರಂತೆ.

ಅಷ್ಟೇ ಅಲ್ಲ, ಅವರಿಗೆಲ್ಲ ದರ್ಶನ್​ ಬೈದಿದ್ದಾರೆ. ಬಳಿಕ ಈ ಕೇಸ್​ನಿಂದ ಹೊರ ಬರಲು ಪ್ರಕರಣವನ್ನು ಬೇರೆಯವರ ತಲೆಗೆ ಕಟ್ಟಲು ಪ್ಲಾನ್​ ಮಾಡಿದ್ದಾರೆ. ಈ ವೇಳೆ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ ಒಬ್ಬರ ಸಲಹೆ ಪಡೆದು, ರೇಣುಕಾಸ್ವಾಮಿಯ ಮೃತದೇಹವನ್ನು ಆರ್​ಆರ್​ ನಗರದಿಂದ ಸುಮನಹಳ್ಳಿ ಬ್ರಿಡ್ಜ್​ ಬಳಿಯ ರಾಜಕಾಲುವೆ ಬಳಿ ತಂದು ಎಸೆದು ಎಸ್ಕೇಪ್​ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಭಾಗಿಯಾಗಿರೋ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತಷ್ಟು ಎವಿಡೆನ್ಸ್​ಗಳು ಸಿಕ್ಕಿವೆ.

ಇದನ್ನೂ ಓದಿ: ಗಂಡನ ಸಾವಿಗೆ ಅಸಲಿ ಕಾರಣ ಬಿಚ್ಚಿಟ್ಟ ರೇಣುಕಾಸ್ವಾಮಿ ಪತ್ನಿ; ದರ್ಶನ್​​-ಪವಿತ್ರಾ ಮಾಡಿದ್ದೇನು?

ರೇಣುಕಾಸ್ವಾಮಿ ಕೊಲೆ ಕೇಸ್​ ಅನ್ನು ಬೇರೆಯವರ ತಲೆಗೆ ಕಟ್ಟಲು ಮುಂದಾಗಿದ್ದ ದರ್ಶನ್​ ಅದರಂತೆ, ಪ್ರದೂಶ್​ಗೆ ಡೀಲ್​ ಕೊಟ್ಟಿದ್ರಂತೆ. ಬಳಿಕ ಪ್ರದೂಶ್​ ಗಿರಿನಗರದ ಕಾರ್ತಿಕ್​ ಅಲಿಯಾಸ್​ ಕಪ್ಪೆ, ಕೇಶವಮೂರ್ತಿ, ನಿಖಿಲ್​ ನಾಯಕ್​ ಎಂಬುವರಿಗೆ ಮೃತದೇಹ ವಿಲೇವಾರಿ ಮಾಡಿ, ಪೊಲೀಸರ ಮುಂದೆ ಸರೆಂಡರ್​ ಆಗಲು 30 ಲಕ್ಷಕ್ಕೆ ಡೀಲ್​ ಮಾಡಿದ್ದಾನೆ. ಜೊತೆಗೆ ಕೋರ್ಟ್​ ಖರ್ಚು, ಬೇಲ್​ ಖರ್ಚು ಎಲ್ಲವನ್ನೂ ನೋಡಿಕೊಳ್ಳೇದಾಗಿ ಹೇಳಿ ಒಪ್ಪಿಸಿದ್ದಾನೆ.

ಅದರಂತೆ ಹಣ ತೋರಿಸಿದ ಬಳಿಕ ಆರೋಪಿಗಳು, ರೇಣುಕಾಸ್ವಾಮಿ ಮೃತದೇಹವನ್ನು ರಾಜಕಾಲುವೆ ಬಳಿ ಎಸೆದು, ಗಿರಿನಗರ ಪೊಲೀಸರಿಗೆ ಶರಣಾಗಿದ್ದಾರೆ. ಆದ್ರೆ, ವಿಚಾರಣೆ ವೇಳೆ ಒಬ್ಬೊಬ್ಬ ಆರೋಪಿ ಒಂದೊಂದು ಹೇಳಿಕೆ ನಿಡಿದ್ದಾರೆ. ಅನುಮಾನದ ಮೇರೆಗೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗಿದೆ. ಕೊಲೆ ಕೇಸ್​ನಲ್ಲಿ ಲಾಕ್​ ಆಗಿರುವ ನಟ ದರ್ಶನ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಪ್ರಕರಣದ ದಿಕ್ಕು ತಪ್ಪಿಸಲು ದರ್ಶನ್​ ಬಳಿ ಪಡೆದಿದ್ದ 30 ಲಕ್ಷ ಹಣವನ್ನು ಪ್ರದೋಶ್​ ತನ್ನ ಬಳಿಯೇ ಇಟ್ಟುಕೊಂಡಿದ್ದ. ಇದೇ ಆ ಹಣ ಇಟ್ಟಿರುವ ಸ್ಥಳವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಂಚನಾಮೆ ಮಾಡಿ ಹಣವನ್ನು ರಿಕವರಿ ಮಾಡಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬಗೆದಷ್ಟು ರೋಚಕವಾಗಿತ್ತಿದೆ. ಇದೀಗ ಈ ಕೇಸ್​ನಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ವಿರುದ್ಧ ಮತ್ತಷ್ಟು ಸಾಕ್ಷಿಗಳು ಲಭ್ಯವಾಗಿದ್ದು, ಕುತೂಹಲ ಮೂಡಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?

https://newsfirstlive.com/wp-content/uploads/2024/06/darshan18.jpg

Load More