newsfirstkannada.com

ಪವಿತ್ರಾ ಗೌಡ ಬೆನ್ನಲ್ಲೇ A1 ಆಪ್ತೆಯನ್ನು ಭೇಟಿಯಾದ ದರ್ಶನ್; ಕಾರಣವೇನು? ಯಾರಿವರು?

Share :

Published July 2, 2024 at 5:24pm

Update July 2, 2024 at 6:12pm

    ಪವಿತ್ರಾಗೆ ಎಲ್ಲಾ ಸರಿ ಹೋಗುತ್ತೆ ಎಂದು ಸಮಾಧಾನ ಮಾಡಿದ್ದ ದರ್ಶನ್

    ಜೈಲಿನಲ್ಲಿ ಪವಿತ್ರಾ, ದರ್ಶನ್ ಚರ್ಚೆ ಬೆನ್ನಲ್ಲೇ ಕುತೂಹಲ ಕೆರಳಿಸಿದ ಭೇಟಿ

    ನಟ ಧನ್ವೀರ್ ಭೇಟಿಯಾಗೋ ಮೊದಲೇ ಪವಿತ್ರಾ ಆಪ್ತೆ ಜೊತೆ ಚರ್ಚೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್‌ ಕಂಬಿ ಹಿಂದೆ ಬಂಧಿಯಾಗಿದೆ. ಪರಪ್ಪನ ಅಗ್ರಹಾರ ಜೈಲಿಗೆ ಪ್ರತಿ ದಿನ ಆಪ್ತರು, ಕುಟುಂಬಸ್ಥರು ಆರೋಪಿಗಳನ್ನ ಭೇಟಿ ಮಾಡಲು ಬರುತ್ತಿದ್ದಾರೆ. ಜೈಲಿನ ನಿಯಾಮವಳಿಗಳ ಪ್ರಕಾರ ಆರೋಪಿಗಳನ್ನ ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ​​ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್​! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ? 

ಜೈಲಲ್ಲಿ ಇರುವ ನಟ ದರ್ಶನ್ ಅವರನ್ನು ಇಂದು ನಟ ಧನ್ವೀರ್ ಅವರು ಭೇಟಿಯಾಗಲು ಆಗಮಿಸಿದ್ದರು. ಧನ್ವೀರ್ ಅವರಿಗೂ ಮೊದಲೇ ಓರ್ವ ಮಹಿಳೆ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಬೇರೆಯವರಿಗೆ ಭೇಟಿಯಾಗಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಕೊನೆಗೂ ಧನ್ವೀರ್ ಅವರು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಯಾರು ಈ ಸಮತಾ??
ನಟ ಧನ್ವೀರ್ ಅವರಿಗೂ ಮುಂಚೆ ಇಂದು ಜೈಲಲ್ಲಿ ದರ್ಶನ್ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದಾರೆ. ಅವರು ಯಾರು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆಮೇಲೆ A1 ಪವಿತ್ರಾ ಗೌಡ ಅವರ ಆಪ್ತೆ ಸಮತಾ ಅವರನ್ನು ದರ್ಶನ್ ಭೇಟಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ.

ಪವಿತ್ರಾ, ಸಮತಾ ಇಬ್ಬರು ಕ್ಲೋಸ್ ಫ್ರೆಂಡ್ಸ್‌. ಇತ್ತೀಚಿಗೆ ಪವಿತ್ರಾ ಗೌಡ ಅವರನ್ನು ಭೇಟಿಯಾಗಿದ್ದ ದರ್ಶನ್ ಅವರು ಇದೀಗ ಅವರ ಪ್ರಾಣ ಸ್ನೇಹಿತೆಯನ್ನು ಭೇಟಿಯಾಗಿದ್ದಾರೆ. ಪವಿತ್ರಾ ಗೌಡ ಅವರ ಜೊತೆ ಬಹಳ ವರ್ಷಗಳಿಂದ ಜೊತೆಗಿರುವ ಸಮತಾ ಅವರು ಇಂದು ದರ್ಶನ್ ಅವರನ್ನ ಭೇಟಿ ಮಾಡಿ ಬಂದಿದ್ದಾರೆ.

ಪವಿತ್ರಾಗೆ ದರ್ಶನ್ ಸಮಾಧಾನ!!
ಜೈಲಿನಲ್ಲಿ ಪ್ರತಿ ದಿನ ದರ್ಶನ್ ಗ್ಯಾಂಗ್‌ಗೆ ಆಸ್ಪತ್ರೆಯಲ್ಲಿ ಇನ್ಸೂಲಿನ್ ಕೊಡಿಸಲಾಗುತ್ತದೆ. ದರ್ಶನ್‌ಗೆ ಇನ್ಸೂಲಿನ್ ಕೊಡಿಸುವ ವೇಳೆ ಆಸ್ಪತ್ರೆಯಲ್ಲಿ ನಿನ್ನೆ ದರ್ಶನ್ ಮತ್ತು ಪವಿತ್ರಾ ಗೌಡ ಭೇಟಿ ಮಾಡಿ 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ‘ದರ್ಶನ್-ವಿಜಯಲಕ್ಷ್ಮೀ ಸಂಸಾರದಲ್ಲಿ ಹುಳಿ ಹಿಂಡಿದ್ಯಾರು?- ಶಮಿತಾ ಮಲ್ನಾಡ್​​ ಏನಂದ್ರು?

ಎ1 ಮತ್ತು ಎ2 ಆರೋಪಿಗಳಿಬ್ಬರು ಜೈಲು ದಿನಗಳ ಬಗ್ಗೆ ಮಾತಾಡಿದ್ದಾರೆ. ನೋವಿನ ಭಾವುಕತೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪವಿತ್ರಾ ಗೌಡಗೆ ಎಲ್ಲಾ ಸರಿ ಹೋಗುತ್ತೆ ಎಂದು ದರ್ಶನ್ ಸಮಾಧಾನ ಪಡಿಸಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಗೌಡ ಬೆನ್ನಲ್ಲೇ A1 ಆಪ್ತೆಯನ್ನು ಭೇಟಿಯಾದ ದರ್ಶನ್; ಕಾರಣವೇನು? ಯಾರಿವರು?

https://newsfirstlive.com/wp-content/uploads/2024/07/Samatha-S1.jpg

Load More