newsfirstkannada.com

VIDEO: ‘ಕೈ ಮುಗಿತೀನಿ ಬಿಟ್ಬಿಡಿ..’- ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸ್ರ ಕಾಲಿಗೆ ಬಿದ್ದ ದರ್ಶನ್!

Share :

Published June 17, 2024 at 4:46pm

  ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್​​!

  ಕೇಸಲ್ಲಿ ನಟ ದರ್ಶನ್​​ ಸೇರಿ ಬರೋಬ್ಬರಿ 13 ಮಂದಿ ಆರೋಪಿಗಳು ಅರೆಸ್ಟ್​

  ದರ್ಶನ್​​ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕೇಳಿದ ಪೊಲೀಸ್​ ತನಿಖಾಧಿಕಾರಿಗಳು

ಬೆಂಗಳೂರು: ನಟ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್​ ಮಾಡಿದ್ದರು ಅನ್ನೋ ಆರೋಪದಲ್ಲಿ ರೇಣುಕಾಸ್ವಾಮಿ ಎಂಬ ಯುವಕ ಕೊಲೆಯಾಗಿದ್ದರು. ಈ ಕೊಲೆ ಕೇಸಲ್ಲಿ ನಟ ದರ್ಶನ್​​ ಮತ್ತು ಗ್ಯಾಂಗ್​ ಅರೆಸ್ಟ್​ ಆಗಿದೆ.

ಇನ್ನು, ಅರೆಸ್ಟ್​ ಆದ ದರ್ಶನ್​ ಮತ್ತು ಗ್ಯಾಂಗ್​ ಅನ್ನು ತೀವ್ರ ವಿಚಾರಣೆ ಮಾಡಿದ ಬಳಿಕ ಪುನಃ ಕೋರ್ಟ್​ನಲ್ಲಿ ಹಾಜರು ಪಡಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ಕೋರ್ಟ್​ ದರ್ಶನ್​ ಮತ್ತು ಗ್ಯಾಂಗ್​ಗೆ ಮತ್ತೆ 5 ದಿನಗಳ ಪೊಲೀಸ್​ ಕಸ್ಟಡಿಗೆ ನೀಡಿದೆ. ಈಗ ಮತ್ತೆ ದರ್ಶನ್ ಅವರನ್ನು ಪೊಲೀಸ್ರು ವಿಚಾರಣೆ ಶುರು ಮಾಡಿದ್ದಾರೆ.

ವಿಚಾರಣೆ ವೇಳೆ ನಟ ದರ್ಶನ್​ ಪೊಲೀಸ್ರ ಕಾಲಿಗೆ ಬಿದ್ದಿದ್ದಾರಂತೆ. ಸಿಕ್ಕ ಸಾಕ್ಷಿಗಳ ಮುಂದಿಟ್ಟು ದರ್ಶನ್​ಗೆ ತನಿಖಾಧಿಕಾರಿಗಳ ಪ್ರಶ್ನೆ ಮಾಡುತ್ತಿದ್ರು. ಜಾಸ್ತಿ ಪ್ರಶ್ನೆ ಕೇಳ್ತಿದ್ದಂತೆ ದರ್ಶನ್ ಕಾಲಿಗೆ ಬಿದ್ದಿದ್ದಾರೆ. ನನ್ನದು ತಪ್ಪಾಗಿದೆ, ದಯವಿಟ್ಟು ಏನೂ ಕೇಳಬೇಡಿ. ಕೈ ಮುಗಿತೀನಿ ಬಿಟ್ಬಿಡಿ. ಗೆೊತ್ತಿರೋದನ್ನೆಲ್ಲಾ ಹೇಳಿದ್ದೀನಿ. ಮತ್ತೆ ಏನೇನೋ ಕೇಳಬೇಡಿ ಎಂದು ಮನವಿ ಮಾಡಿದ್ದು, ದರ್ಶನ್​​ ಮಾತಿಗೆ ಮಣಿಯದ ಪೊಲೀಸ್ರು ನಾನ್​ ಸ್ಟಾಪ್​​ ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಕೈ ಮುಗಿತೀನಿ ಬಿಟ್ಬಿಡಿ..’- ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸ್ರ ಕಾಲಿಗೆ ಬಿದ್ದ ದರ್ಶನ್!

https://newsfirstlive.com/wp-content/uploads/2024/06/darshan23.jpg

Load More