ದರ್ಶನ್ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಪ್ರಕರಣ
ತನಿಖೆಯನ್ನು ತೀವ್ರಗೊಳಿಸಿದ ಪರಪ್ಪನ ಅಗ್ರಹಾರದ ಪೊಲೀಸರು
ಎಫ್ಐಆರ್ನಲ್ಲಿ ಇನ್ನೂ 10 ಮಂದಿಯ ಹೆಸರನ್ನು ಸೇರಿಸುವ ಸಾಧ್ಯತೆ
ಬೆಂಗಳೂರು: ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಲ್ಲಿ ದೊರಕಿದ ರಾಜಾತಿಥ್ಯ ಪ್ರಕರಣ ಈಗ ಹೊಸ ದಿಕ್ಕಿನತ್ತ ಸಾಗಿದೆ. ದರ್ಶನ್ ವಿರುದ್ಧ ದಾಖಲಾದ ಪ್ರಕರಣಗಳ ತನಿಕೆಗೆ ಈಗ ಪರಪ್ಪನ ಅಗ್ರಹಾರದ ಪೊಲೀಸರು ಮುಂದಾಗಿದ್ದಾರೆ. ಇದುವರೆಗೂ ಫೋಟೋ ಸಂಬಂಧ ನಟ ದರ್ಶನ್ರನ್ನ ಮಾತ್ರ ಪೊಲೀಸರು ವಿಚಾರಣೆ ಮಾಡಿದ್ದರು. ಜೊತೆಗೆ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿದ್ದರು. ಪ್ರಕರಣ ಸಂಬಂಧ ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: 20 ವರ್ಷದ ಸಂಭ್ರಮ ಹಿನ್ನೆಲೆ ಕರಿಯ ರಿ ರಿಲೀಸ್; ದರ್ಶನ್ ಅಭಿಮಾನಿಗಳಿಗೆ ಪೊಲೀಸರು ಬೆಳ್ಳಂಬೆಳಗ್ಗೆ ವಾರ್ನಿಂಗ್..!
ಈಗಾಗಲೇ ವಿಚಾರಣೆಗೆ ನ್ಯಾಯಾಲಯದಿಂದ ಒಂದು ತಿಂಗಳು ಅನುಮತಿ ಪಡೆದಿರುವ ಪೊಲೀಸರು, ದರ್ಶನ್ ಇರುವ ಬಳ್ಳಾರಿ ಜೈಲಿಗೆ ತೆರಳಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ದರ್ಶನ್ ಹೇಳಿಕೆಯ ಮೇರೆಗೆ ವಿಲ್ಸನ್ ಗಾರ್ಡನ್ ನಾಗನ ವಿಚಾರಣೆಯನ್ನು ಪೊಲೀಸರು ನಡೆಸಲಿದ್ದಾರೆ. ಲಾನ್ನಲ್ಲಿ ಕೂತು ಸಿಗರೇಟ್ ಸೇದಿದ ಫೋಟೋ ಪ್ರಕರಣ ಸಂಬಂಧ ಇಲ್ಲಿಯವರೆಗೂ ಪೊಲೀಸರು ನಾಗನ ವಿಚಾರಣೆ ಮಾಡಿಲ್ಲ.
ಇದನ್ನೂ ಓದಿ: ದರ್ಶನ್ ಬ್ಯಾಗ್ನಲ್ಲಿ 20 ಪುಸ್ತಕಗಳು.. ಅವು ಯಾವ್ಯಾವುವು? ಮನಸು ಬದಲಾಯಿಸಬಹುದೇ?
ಇದುವರೆಗೂ ಜೈಲಿನ ನಿಯಮಗಳನ್ನು ಅನುಸರಿಸದೇ ಇರೋ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಬಂದಾಗ ಒಂದು ತಟ್ಟೆ, ಒಂದು ಲೋಟ ನೀಡಲಾಗಿತ್ತು. ಅದೇ ತಟ್ಟೆ ಅದೇ ಲೋಟವನ್ನೇ ಬಳಸಬೇಕು. ಆದ್ರೆ ಜೈಲಿನಲ್ಲಿ ತೆಗೆದ ಫೋಟೋದಲ್ಲಿ ದರ್ಶನ್ ಕಾಫಿ ಮಗ್ ಹಾಗೂ ಸಿಗರೇಟ್ ಹಿಡಿದಿದ್ದಾರೆ. ಹಾಗಾದ್ರೆ ದರ್ಶನ್ಗೆ ಕಾಫಿ ಮಗ್ ಕೊಟ್ಟವರು ಯಾರು? ಸಿಗರೇಟ್ ತಂದು ಕೊಟ್ಟವರು ಯಾರು ಈ ಎಲ್ಲದರ ತನಿಖೆಗೆ ಈಗ ಪೊಲೀಸರು ಮುಂದಾಗಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಜೊತೆಗೆ ಫೋಟೋದಲ್ಲಿದ್ದ ವಸ್ತುಗಳನ್ನು ಕೂಡ ಶೇಖರಿಸಲು ಸಜ್ಜಾಗಿದ್ದಾರೆ. ದರ್ಶನ್ ಕುಳಿತದ್ದ ಚೇರ್, ಕಾಫಿ ಮಗ್, ಟಿಪಾಯ್ ಎಲ್ಲವನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದು ಆರೋಪಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ನಾಲ್ಕು ಮಂದಿ ಆರೋಪಿಗಳನ್ನು ಎಫ್ಐಆರ್ನಲ್ಲಿ ಹೆಸರಿಸಿದ್ದಾರೆ. ದರ್ಶನ್, ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್ ನಾಗರಾಜ್ ಹಾಗೂ ಕುಳ್ಳ ಸೀನನ ಹೆಸರು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ತನಿಖೆ ಮುಂದುವರೆದಂತೆ ಆರೋಪಿಗಳ ಸಂಖ್ಯೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನೂ 10 ಮಂದಿ ಆರೋಪಿಗಳು ಎಫ್ಐಆರ್ನಲ್ಲಿ ಸೇರುವ ಸಾಧ್ಯತೆ ಇದೆ.ಆರೋಪಿಗಳ ರಾಜಾತಿಥ್ಯಕ್ಕೆ ಸಹಕರಿಸಿದ ಎಲ್ಲರನ್ನೂ ಆರೋಪಿಗಳ ಲಿಸ್ಟ್ ಗೆ ಪೊಲೀಸರು ಸೇರಿಸಲಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನದಾಗಿ ಬಿಎನ್ಎಸ್ ಸೆಕ್ಷನ್ಗಳನ್ನು ಸೇರಿಸಲು ಚಿಂತನೆ ನಡೆದಿದೆ. ಸದ್ಯ ಕರ್ನಾಟಕ ಕಾರಾಗೃಹ ಕಾಯ್ದೆ 42 ರ ಅನ್ವಯ ಪ್ರಕರಣ ದಾಖಲಿಸಿರುವ ಪೊಲೀಸರು.ಇದಕ್ಕೆ ಹೆಚ್ಚುವರಿಯಾಗಿ ಬಿಎನ್ ಎಸ್ ಸೆಕ್ಷನ್ ಸೇರಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ