newsfirstkannada.com

ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಒನ್​​​ ಅಂಡ್​ ಓನ್ಲಿ ದರ್ಶನ್? ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಟ್ವಿಸ್ಟ್‌; ಏನದು?

Share :

Published September 4, 2024 at 10:19pm

    3 ತಿಂಗಳ ಹಿಂದೆ ರೇಣುಕಾಸ್ವಾಮಿ ಸಿನಿಮಾದ ಸ್ಕ್ರೀನ್​ ಪ್ಲೇ ರೆಡಿ ಆಗಿತ್ತು

    ಶೆಡ್‌ನಲ್ಲಿ ದರ್ಶನ್ ಸ್ಟಂಟ್​​ ಮಾಸ್ಟರ್​ ಪಾತ್ರವನ್ನು ನಿರ್ವಹಿಸಿರೋದ್ರಾ?

    ಬಾಡಿಯನ್ನು ಎಲ್ಲಾದರೂ ಬಿಸಾಕಿ ಬನ್ನಿ ಅಂತ ಖುದ್ದು ದರ್ಶನ್​ ಸೂಚನೆ?

ರಾಜ್ಯವನ್ನೇ ಬೆಚ್ಚಿ ಬೀಳಿಸಿರೋದು, ದರ್ಶನ್​​ ಅಭಿಮಾನಿಗಳು ಅಳುವಂತೆ ಮಾಡಿರೋದು ಅಂದ್ರೆ ಅದು ರೇಣುಕಾಸ್ವಾಮಿಯ ಕೇಸ್. ಅಸಲಿಗೆ ದರ್ಶನೇ​ ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ್ರು ಅನ್ನೋದಕ್ಕೆ ಪೊಲೀಸರು ಸಲ್ಲಿಸಿರೋ ಚಾರ್ಜ್​ಶೀಟ್​​ನಲ್ಲಿ ಸ್ಫೋಟಕ ಸಾಕ್ಷಿಗಳಿವೆ. ಅದ್ರಲ್ಲೂ ಪಟ್ಟಣಗೆರೆ ಶೆಡ್​​ನ ಕ್ರೌರ್ಯದ ಅಧ್ಯಾಯವನ್ನ ಪೊಲೀಸರು ರಕ್ತದಲ್ಲೇ ಬರೆದಿದ್ದಾರೆ ಅನಿಸುತ್ತೆ. ದರ್ಶನ್​​ ಇನ್ನಾದ್ರೂ ರಿಲೀಸ್​ ಆಗ್ತಾರಾ? ಇಲ್ವಾ? ಅನ್ನೋ ಕೌತುಕಕ್ಕೆ ಇದೀಗ ನಿರ್ದೇಶಕ ದರ್ಶನ್​​​ ಎಲ್ಲಿ ಎಡವಿದ್ದಾರೆ? ಎಲ್ಲಿ ಎದ್ದು ನಿಂತಿದ್ದಾರೆ? ಅನ್ನೋ ಲೆಕ್ಕಾಚಾರ ಮುಖ್ಯವಾಗಲಿದೆ. 22 ಸಾಕ್ಷಿಗಳ ಪಟ್ಟಿಯೇ ದರ್ಶನ್​​ ಪಾಲಿಗೆ ಬಹುದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಪ್ಯಾಂಟ್‌ ಬಿಚ್ಚಿಸಿ ಖಾಸಗಿ ಅಂಗ ತುಳಿದ ದರ್ಶನ್? ಪಟ್ಟಣಗೆರೆ ಶೆಡ್‌ನ 7 ಕರಾಳ ಮುಖಗಳು ಬೆಚ್ಚಿ ಬೀಳಿಸುತ್ತೆ! 

ರೇಣುಕಾಸ್ವಾಮಿ ಕೊಲೆ ಕೇಸ್​​ ಕ್ಲೈಮ್ಯಾಕ್ಸ್​ ತಲುಪಿದೆ. ಪೊಲೀಸರು 24ನೇ ACMM ನ್ಯಾಯಾಲಯಕ್ಕೆ ಸಲ್ಲಿಸಿರೋ 3991 ಪುಟಗಳ ಬೃಹತ್​ ಚಾರ್ಜ್​​ಶೀಟ್​​ ಬೆಚ್ಚಿ ಬೀಳಿಸೋ ಸಂಗತಿಗಳನ್ನ ಹೇಳುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೂತ್ರಧಾರಿಯೇ? ಪ್ರಮುಖ ಪಾತ್ರಧಾರಿಯೇ? ಪೋಷಕ ಪಾತ್ರಧಾರಿಯೇ? ಅಸಲಿಗೆ ಕೊಲೆ ಕೇಸ್​​ನಲ್ಲಿ ದರ್ಶನ್​ ಪಾತ್ರ ಏನು ಅಂತ ನೋಡಿರೋ ಸ್ಫೋಟಕ ಸೀನ್​ಗಳನ್ನು ರಿವೀಲ್ ಮಾಡುತ್ತಿದೆ. ಈ ರಿಯಲ್​ ಕ್ರೈಂ ಸ್ಟೋರಿಯ ಶುರುವಿನಿಂದ ಹಿಡಿದು ಕೊನೆವರೆಗೂ ಗಟ್ಟಿಯಾಗಿ ನಿಲ್ಲುವ ಪಾತ್ರ ಒಂದೇ. ಅದು ದರ್ಶನ್​, ದರ್ಶನ್​, ದರ್ಶನ್​.

ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಒನ್​​​ ಅಂಡ್​ ಓನ್ಲಿ ದರ್ಶನ್?
ಹೌದು, ದರ್ಶನ್​​ ಇಷ್ಟು ದಿನ ಲಕ್ಷಾಂತರ ಅಭಿಮಾನಿಗಳ ಪಾಲಿನ ಚಾಲೆಂಜಿಂಗ್​​ ಸ್ಟಾರ್ ಆಗಿದ್ದರು. ಕೆಮ್ಮಿದ್ರೂ ರಿಯಾಕ್ಟ್​ ಮಾಡೋ ಬಹುದೊಡ್ಡ ಫ್ಯಾನ್​​ ಬೇಸ್​​ ದರ್ಶನ್​​ಗಿದೆ. ದರ್ಶನ್​​ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಐದು ರೋಲ್​​ಗಳನ್ನು ಮಾಡೋ ಮೂಲಕ ಕಮಲ್ ಹಾಸನ್‌ಗೂ ಕಾಂಪಿಟೇಶನ್ ಕೊಟ್ಟಿದ್ದಾರಾ ಅನಿಸುತ್ತದೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್​ ಮಾಡಿದ್ದ ಪಾತ್ರ ಎಂಥದ್ದು. ದರ್ಶನ್​ರ ಪಾತ್ರ ಯಾವ ರೀತಿ ಪೊಲೀಸ್​ ರೆಕಾರ್ಡ್ಸ್​ಗಳಲ್ಲಿ ದಾಖಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಕಥೆಗಾರ ದರ್ಶನ್
ರೇಣುಕಾಸ್ವಾಮಿ ಕೇಸ್​​ ಪ್ರೀ ಪ್ಲಾನ್​​!?
ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​​​ ಅಸಲಿಗೆ ಕಥೆಗಾರ. ಆದ್ರೆ, ಬರೀ ಕಥೆಗಾರ ಅಲ್ಲ, ಚಿತ್ರಕಥೆಯನ್ನೂ ಬರೆದಿದ್ದಾರೆ. ಪೊಲೀಸರು ಸಲ್ಲಿಸಿರೋ ಬೃಹತ್​ ಚಾರ್ಜ್​​ಶೀಟ್​ ಇಂಥದ್ದೊಂದು ಸ್ಫೋಟಕ ವಿಚಾರ ರಿವೀಲ್​ ಮಾಡ್ತಿದೆ. ಪವಿತ್ರ ಗೌಡ ಹೇಳಿದ ಚಾಡಿ ಕೇಳಿ ರೋಷಾಗ್ನಿ ಜ್ವಾಲೆಯಿಂದ ಉರಿದುರಿದ ದರ್ಶನ್ ಪಕ್ಕಾ ಪ್ಲಾನ್ ಮಾಡಿದ್ದ ಎನ್ನಲಾಗುತ್ತಿದೆ. ಜೂನ್ 1ರಂದು.. ಅಂದ್ರೆ 3 ತಿಂಗಳ ಹಿಂದೆ ರೇಣುಕಾಸ್ವಾಮಿ ಕೊಲೆ ಸಿನಿಮಾದ ಸ್ಕ್ರೀನ್​ ಪ್ಲೇ ರೆಡಿಯಾಗಿತ್ತು. ಕೊಲೆಗೆ ಒಂದು ವಾರ ಮುಂಚೆಯೇ ಚಿತ್ರದುರ್ಗದ ದರ್ಶನ್​ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಘುಗೆ ಖುದ್ದು ದರ್ಶನ್​​ ಫೋನ್ ಮಾಡಿದ್ದನಂತೆ. ಎ4 ಆಗಿರೋ ರಘು ಅಲಿಯಾಸ್ ರಾಘವೇಂದ್ರ ದರ್ಶನ್​​ ಕಟ್ಟಾಜ್ಞೆಯಂತೆಯೇ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ್ದಾನೆ. ಹಾಗಾಗಿಯೇ ರೇಣುಕಾಸ್ವಾಮಿ ಕೊಲೆಯ ಚಿಲ್ಲಿಂಗ್​​ ಸೀನ್​​​ ಶೂಟ್​​ ಮಾಡೋಕೆ ಮುಂಚೆಯೇ ದರ್ಶನ್​​ ಅಂಡ್​ ಗ್ಯಾಂಗ್​​ ಮಹತ್ವದ ಪ್ಲಾನ್ ಮಾಡಿರುವುದು ಗೊತ್ತಾಗುತ್ತಿದೆ. ಅಲ್ಲಿಗೆ ದರ್ಶನ್​​ ಆರಂಭದಿಂದಲೂ ಬಹುಮುಖ್ಯ ಪಾತ್ರ ವಹಿಸಿದ್ದಾರೆ ಅನ್ನೋದಕ್ಕೆ ಸಾಕ್ಷಿ ಪೊಲೀಸರ ಚಾರ್ಜ್​ಶೀಟ್​.

ಸ್ಟಂಟ್​ ಮಾಸ್ಟರ್​ ದರ್ಶನ್
ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ!?
ಪೊಲೀಸರ ಜಾರ್ಜ್​​ಶೀಟ್​​ ಈ ಕೊಲೆ ಕೇಸ್​ನಲ್ಲಿ ದರ್ಶನ್​ ಅತ್ಯಂತ ಸ್ಪಷ್ಟವಾಗಿ ಸ್ಟಂಟ್​​ ಮಾಸ್ಟರ್​ ಪಾತ್ರವನ್ನೂ ನಿರ್ವಹಿಸಿರೋದರ ಬಗ್ಗೆಯೂ ಹೇಳಿದೆ. ಪಟ್ಟಣಗೆರೆ ಶೆಡ್​​ನಲ್ಲಿ ಜೂನ್ 8ರ ರಾತ್ರಿ ಎಂತಹ ಭೀಕರ ಸನ್ನಿವೇಶ ಸೃಷ್ಟಿಯಾಗಿತ್ತು ಅನ್ನೋದನ್ನ ಓದೋದಕ್ಕೂ ಭಯವಾಗುತ್ತಿದೆ. ಅಷ್ಟರ ಮಟ್ಟಿಗಿನ ಕ್ರೌರ್ಯ ಪಟ್ಟಣಗೆರೆ ಶೆಡ್​​ನಲ್ಲಿ ನಡೆದಿತ್ತು. ಸಿನಿಮಾ ಭಾಷೆಯಲ್ಲೇ ಹೇಳೋದಾದರೆ ದರ್ಶನ್​​ ಈ ಪಟ್ಟಣಗೆರೆ ಪಾಪಿಗಳ ಲೋಕದ ರಾಜನಾಗಿದ್ದ. ರೇಣುಕಾಸ್ವಾಮಿ ಅನ್ನೋ ಒಂಟಿ ಜೀವದ ಮೇಲೆ ದೈತ್ಯರ ದಂಡು ದಾಳಿ ಮಾಡಿದ್ದು ಹೇಗಿತ್ತು ಗೊತ್ತಾ? ಇರುವೆಯೊಂದು ಆನೆಯ ಪಾದದಡಿಗೆ ಸಿಕ್ಕರೇ ಏನಾಗುತ್ತೋ? ಅದೇ ರೀತಿಯಲ್ಲಿತ್ತು.

ಇದನ್ನೂ ಓದಿ: ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಸಿದ್ದು, ಬಳಿಕ ಶೆಡ್ ನಲ್ಲಿ ಹಲ್ಲೆ ಮಾಡಿದ್ದು ದರ್ಶನ್ ಅನ್ನೋದು ಜಾರ್ಜ್​​ಶೀಟ್​​ನಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗ್ತಿದೆ. ಅಲ್ಲಿಗೆ ರೇಣುಕಾಸ್ವಾಮಿ ಹಲ್ಲೆಯ ವಿಚಾರದಲ್ಲೂ ದರ್ಶನ್​​ ಪಾತ್ರವಿದೆ ಎಂದೇ ಹೇಳಲಾಗುತ್ತಿದೆ.

ಸಂಕಲನಕಾರ ದರ್ಶನ್‌
ಶವ ಸಾಗಿಸೋದಕ್ಕೆ ಸೂಚನೆ ಕೊಟ್ಟಿದ್ದು ದರ್ಶನ್?
ಸಿನಿಮಾ ಭಾಷೆಯಲ್ಲೇ ಹೇಳೋದಾದರೆ ರೇಣುಕಾಸ್ವಾಮಿ ಕೇಸ್​​ನಲ್ಲಿ ದರ್ಶನ್​​ ಎಡಿಟಿಂಗ್​ ಕೆಲಸವನ್ನೂ ಮಾಡಿದ್ದಾರೆ. ಪವಿತ್ರಾ ಗೌಡ ಮಾತು ಕೇಳ್ಕೊಂಡು ತಮ್ಮ ದಂಡು ದಾಳಿಯೊಂದಿಗೆ ದಂಡ ನಾಯಕನಾಗಿ ಅಬ್ಬರಿಸಿದ್ದ ದರ್ಶನ್​​ ಆಮೇಲೆ ಅಕ್ಷರಶಃ ಹಳೇ ಸಿನಿಮಾ ವಿಲನ್ ಅಂತೆಯೇ ಯೋಚಿಸಿದ್ದಾರೆ. ಇದಕ್ಕೆ ಸಾಕ್ಷಿ ಪೊಲೀಸರು ಸಲ್ಲಿಸಿರೋ ಜಾರ್ಜ್​​ಶೀಟ್​. ರೇಣುಕಾಸ್ವಾಮಿ ಕೊಲೆ ಕೇಸ್​​ನ ಅಸಲಿ ಟರ್ನಿಂಗ್​ ಪಾಯಿಂಟ್ ಇದೇ ನೋಡಿ.

ರೇಣುಕಾಸ್ವಾಮಿ ಅಕ್ಷರಶಃ ಕೈ ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಬರ್ಬರವಾಗಿ ದಾಳಿ ಮಾಡಿ ಕೊಂದಿದೆ ಡಿ ಗ್ಯಾಂಗ್. ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿರುವ ಫೋಟೋಗಳನ್ನ ನೋಡಿದರೆ ಎಂತಹವರಿಗೂ ಕರುಳು ಚುರಕ್ ಎನ್ನುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿಯೇ ರೇಣುಕಾಸ್ವಾಮಿ ಸತ್ತನೆಂದು ಖಚಿತವಾದ ಮೇಲೂ ದಾಳಿ ಮಾಡಿದ್ದ ದುಷ್ಟರು ದರ್ಶನ್​​ಗೆ ಮಾಹಿತಿ ನೀಡಿದ್ದರು. ದರ್ಶನ್​​ ಈ ಹಂತದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ. ಆ ಬಾಡಿಯನ್ನು ಎಲ್ಲಾದರೂ ಬಿಸಾಕಿ ಬನ್ನಿ ಅಂತ ಖುದ್ದು ದರ್ಶನ್​ ಸೂಚನೆ ನೀಡಿದ್ದ ಅನ್ನೋ ಮಾಹಿತಿ ಜಾರ್ಜ್​​ಶೀಟ್​​ನಲ್ಲಿ ದಾಖಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಅಲ್ಲಿಗೆ ದರ್ಶನ್​​ ಸಾಕ್ಷಿಗಳ ಎಡಿಟ್ ಮಾಡೋ ಎಡಿಟರ್​ ಪಾತ್ರವನ್ನೂ ನಿಭಾಯಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್​! 

ನಿರ್ಮಾಪಕ ದರ್ಶನ್
ಹಣ ಕೊಟ್ಟು ಪ್ರಕರಣ ಮುಚ್ಚಿಹಾಕುವ ಪ್ರಯತ್ನ!?
ಸಿನಿಮಾ ಭಾಷೆಯಲ್ಲೇ ಹೇಳುವ ಮಾತಿದು. ರೇಣುಕಾಸ್ವಾಮಿ ಕೊಲೆಯನ್ನೂ ಸಹ ದರ್ಶನ್​ ಅಂಡ್​ ಗ್ಯಾಂಗ್​ ಸಿನಿಮಾದಂತೆಯೇ ಮಾಡಿದೆ. ಹಣ ಕೊಟ್ಟು ಪ್ರಕರಣವನ್ನೇ ಮುಚ್ಚಿ ಹಾಕುವ ಪ್ರಯತ್ನದಲ್ಲಿ ದರ್ಶನ್​​ ನಿರ್ಮಾಪಕನ ಪಾತ್ರವನ್ನೂ ಮಾಡಿದ್ದಾರೆ. ಖುದ್ದು ಪೊಲೀಸರ ಮುಂದೆಯೂ ದರ್ಶನ್​​ ಈ ಬಗ್ಗೆ ಸ್ವಇಚ್ಛೆಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್​​ ಮುಚ್ಚಿ ಹಾಕೋದಕ್ಕೆ ಪೊಲೀಸ್, ಲಾಯರ್ ಹಾಗೂ ಶವ ಸಾಗಿಸೋ ವ್ಯಕ್ತಿಗಳಿಗೆ ಕೊಡುವುದಕ್ಕೆ 30 ಲಕ್ಷ ನೀಡಿದ್ದೇರೆ ಎಂದು ಸ್ವ ಇಚ್ಛೆಯ ಹೇಳಿಕೆಯನ್ನು ದರ್ಶನ್​​ ನೀಡಿದ್ದಾರೆ ಎನ್ನಲಾಗುತ್ತಿದೆ. ಇದೇ 30 ಲಕ್ಷ ಹಣವನ್ನು ಪಡೆದುಕೊಂಡಿದ್ದ ಪ್ರದೂಷ್​​​ಗೆ ನೀಡಿದ್ದರು. ಇಂಥದ್ದೊಂದು ಸಂಗತಿಯನ್ನು ಎ15 ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ನಾಯ್ಕ್ ಸರಂಡರ್​ ಆಗುವ ಮೂಲಕ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದೇ ಮೂವರಿಗೆ ಡಿ ಗ್ಯಾಂಗ್​​ ಹಣ ನೀಡಿ ರೇಣುಕಾಸ್ವಾಮಿ ದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದರು ಎಂದು ತನಿಖೆಯಿಂದ ಪೊಲೀಸರಿಗೆ ತಿಳಿದು ಬಂದಿದೆ. ಸಾಕ್ಷ್ಯನಾಶ ಆರೋಪದ ಪಾತ್ರ ದರ್ಶನ್​​ ಆದಿಯಾಗಿ ಈ ನಾಲ್ವರ ಮೇಲೂ ಚಾರ್ಜ್‌ಶೀಟ್‌ ನಲ್ಲಿ ದಾಖಲಾಗಿದೆ.

ಪುಡಾಂಗ್​ ಡೈರೆಕ್ಟರ್​​ ದರ್ಶನ್
ಕೊಲೆ, ಕಿಡ್ನಾಪ್, ಸಾಕ್ಷಿನಾಶ ಎಲ್ಲದರ ಸೂತ್ರಧಾರಿ!?
ದರ್ಶನ್​ ಈ ಹಿಂದೆ ನಿರ್ದೇಶಕರೊಬ್ಬರನ್ನ ಪುಡಾಂಗ್ ಅನ್ನೋ ಮೂಲಕ ಟೀಕಿಸಿದ್ದರು. ದರ್ಶನ್​ ಸಿನಿ ಬದುಕಿನ ಬಹುದೊಡ್ಡ ಟರ್ನಿಂಗ್​ ಪಾಯಿಂಟ್ ಕರಿಯ ಸಿನಿಮಾ. ಅದೇ ಸಿನಿಮಾದ ನಿರ್ದೇಶಕ ಪ್ರೇಮ್ ಬಗ್ಗೆ ಮಾತಾಡಿದ್ದ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪಕ್ಕಾ ಪುಡಾಂಗ್​ ನಿರ್ದೇಶಕನಂತೆಯೇ ವ್ಯವಹರಿಸಿದ್ದಾರೆ. ಮೂರು ಆಯಾಮದಲ್ಲೂ ಜಾರ್ಜ್​​ಶೀಟ್​​ನ ತನಿಖಾ ಪುಟಗಳು ದರ್ಶನ್​ ಸೂತ್ರಧಾರಿ ಎಂದೇ ಹೇಳುತ್ತಿವೆಯಂತೆ. ಕಿಡ್ನಾಪ್, ಕೊಲೆಯ ಪ್ಲಾನ್ ಮೂಲಕ ಚಿತ್ರಕಥೆ ಬರೆದಿದ್ದು ದರ್ಶನ್. ಪಟ್ಟಣಗೆರೆಯ ಸಾಹಸ ದೃಶ್ಯದ ಮೂಲಕ ರೇಣುಕಾಸ್ವಾಮಿಯ ಉಸಿರನ್ನೇ ನಿಲ್ಲಿಸಿದ್ದರ ಹಿಂದೆ ಸ್ಟಂಟ್​ ಮಾಸ್ಟರ್​ ದರ್ಶನ್​ ಪಾತ್ರವಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು

ಶವ ಸಾಗಿಸೋ ಸೂಚನೆ ನೀಡುವ ಮೂಲಕ ಎಡಿಟರ್​ ಕೆಲಸ ಮಾಡಿ ಸಾಕ್ಷಿ ನಾಶಕ್ಕೂ ದರ್ಶನ್ ಮುಂದಾಗಿರೋ ಪಾತ್ರ ಕಾಣಿಸುತ್ತಿದೆ. ಲಕ್ಷ ಲಕ್ಷ ದುಡ್ಡು ಕೊಟ್ಟು ಸಾಕ್ಷಿನಾಶದ ನಿರ್ಮಾಣ ಮಾಡಿದ ನಿರ್ಮಾಪಕನ ಪಾತ್ರವೂ ದರ್ಶನ್​ ಮೇಲಿದೆ. ಈ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್​​ ಅನ್ನೋ ಭೀಕರ ರಿಯಲ್ ಸಿನಿಮಾದ ಅಸಲಿ ಸೂತ್ರಧಾರಿ ದರ್ಶನ್​​ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ಅಂಶಗಳು ಒಂದು ಕಡೆಯಾದರೇ, 22 ಸಾಕ್ಷಿಗಳ ಪಟ್ಟಿ ದರ್ಶನ್​​ ಅಭಿಮಾನಿಗಳನ್ನು ಬಿಕ್ಕಳಿಸಿ ಬಿಕ್ಕಳಿಸಿ ಅಳುವಂತೆ ಮಾಡುತ್ತಿದೆ. 22 ಸಾಕ್ಷಿಗಳ ಲೆಕ್ಕ ನೋಡಿದರೇ ದರ್ಶನ್​​ ರಿಲೀಸ್​ ಆಗ್ತಾರಾ? ಇಲ್ವಾ? ಉತ್ತರ ಸಾಕ್ಷಿಗಳ ಹೇಳಿಕೆಗಳಲ್ಲೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಒನ್​​​ ಅಂಡ್​ ಓನ್ಲಿ ದರ್ಶನ್? ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಟ್ವಿಸ್ಟ್‌; ಏನದು?

https://newsfirstlive.com/wp-content/uploads/2024/09/Darshan-Renukaswamy-Case-1.jpg

Load More