newsfirstkannada.com

×

ದರ್ಶನ್​ ಜೈಲಿನಲ್ಲಿದ್ರೂ ಕಾಟೇರ ಮೂವಿಗೆ ಪ್ರಶಸ್ತಿಗಳ ಸುರಿಮಳೆ.. ಮತ್ತೆ ಎಷ್ಟು ಪ್ರಶಸ್ತಿ ಬಾಚಿದೆ ಗೊತ್ತಾ?

Share :

Published September 29, 2024 at 11:59am

Update September 29, 2024 at 12:15pm

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೆರಿಯರ್​ನಲ್ಲೇ ಅತ್ಯುತ್ತಮ ಚಿತ್ರ

    ಕಾಟೇರ ಸಿನಿಮಾಕ್ಕೆ ಹರಿದು ಬರುತ್ತಿರೋ ಪ್ರಶಸ್ತಿ, ಬಹುಮಾನಗಳು

    ದರ್ಶನ್ ಜೈಲಿನಲ್ಲಿ, ಕಾಟೇರ ಮೂವಿಗೆ ಮತ್ತೆ ಬಂದ ಪ್ರಶಸ್ತಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೀಯರ್​ನಲ್ಲೇ ಅತ್ಯುತ್ತಮ ಸಿನಿಮಾ ಅಂದರೆ ಅದು ಕಾಟೇರ. ಹೋದ ಕಡೆಗಳಲ್ಲೆ ಪ್ರಶಸ್ತಿಗಳನ್ನು ಎರಡು ಕೈಗಳಿಂದ ಬಾಚಿಕೊಳ್ಳುತ್ತಿದೆ. ಕರ್ನಾಟಕದಲ್ಲೇ ಮಾತ್ರ ರಿಲೀಸ್ ಆಗಿದ್ದ ಕಾಟೇರ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು. ದರ್ಶನ್ ಜೈಲಿನಲ್ಲಿದ್ದರು ತರುಣ್ ಸುದೀರ್ ನಿರ್ದೇಶನದ ಈ ಸಿನಿಮಾಕ್ಕೆ ಪ್ರಶಸ್ತಿಗಳು, ಬಹುಮಾನಗಳು ಹರಿದು ಬರುತ್ತಿವೆ.

ಇದನ್ನೂ ಓದಿ: ದರ್ಶನ್​ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?

ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದ್ರೆ ಕಾಟೇರದಲ್ಲಿ ದರ್ಶನ್ ಅತ್ಯದ್ಭುತವಾಗಿ ಅಭಿನಯ ಮಾಡಿದ್ದಾರೆ. ಸಿನಿಮಾ ನೋಡಿದ ವಿಮರ್ಷಕರು ಈ ಬಾರಿ ದರ್ಶನ್​ಗೆ ಸ್ಟೇಟ್ ಅವಾರ್ಡ್​ ಅಲ್ಲ, ನ್ಯಾಷನಲ್ ಅವಾರ್ಡ್ ಸೇರಿ ಹಲವು ಪ್ರಶಸ್ತಿಗಳು ದೊರೆಯುವುದು ಪಕ್ಕಾ ಎಂದು ಹೇಳುತ್ತಿದ್ದರು. ಅದರಂತೆ ಇತ್ಥೀಚೆಗಷ್ಟೇ ದುಬೈನಲ್ಲಿ ನಡೆದಿದ್ದ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬರೋಬ್ಬರಿ 4 ಪ್ರಶಸ್ತಿಗಳನ್ನು ಕಾಟೇರಗೆ ಬಂದಿದ್ದವು. ಇದರ ಬೆನ್ನಲ್ಲೇ ಕಾಟೇರ ಮತ್ತೆ ನಾಲ್ಕು ಆವರ್ಡ್​ಗಳನ್ನು ಪಡೆದುಕೊಂಡಿದೆ.

ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್​​​ಎ) ಕಾರ್ಯಕ್ರಮದಲ್ಲಿ ದರ್ಶನ್‌ ಅಭಿನಯಿಸಿದ್ದ ಕಾಟೇರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡಿರುವ ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ. ನಟಿ ಶ್ರುತಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಒಲಿದು ಬಂದಿದೆ. ಡೆಬ್ಯೂ ಆ್ಯಕ್ಟಿಂಗ್​​ಗಾಗಿ ಮಾಲಶ್ರೀ ಅವರ ಮಗಳು ಆರಾಧನಾ ಅವರಿಗೆ ಪ್ರಶಸ್ತಿ ಸಿಕ್ಕಿದ್ದು, ತೆಲುಗು ನಟ ಜಗಪತಿ ಬಾಬು ಅವರಿಗೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​.. ಐಟಿ ಇಲಾಖೆಯಿಂದ ಬಿಗ್ ಶಾಕ್ ಎದುರಾಗುತ್ತಾ?

3 ದಿನಗಳ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (ಐಐಎಫ್​​​ಎ) ಕಾರ್ಯಕ್ರಮ ದುಬೈನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಬಾಲಿವುಡ್ ಸೇರಿ ದಕ್ಷಿಣ ಭಾರತದ 4 ಭಾಷೆಯ ಸಿನಿಮಾಗಳಿಗೆ ಈ ಪ್ರಶಸ್ತಿಗಳನ್ನ ನೀಡಲಾಗುತ್ತದೆ. 2023ರಲ್ಲಿ ರಿಲೀಸ್ ಸಿನಿಮಾಗಳಿಗೆ ಐಐಎಫ್​​​ಎ ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿದೆ. ಬೇರೆಲ್ಲ ಸೆಲೆಬ್ರೆಟಿಗಳು ದುಬೈನಲ್ಲಿ ಸಂತಸದಿಂದ ಅವಾರ್ಡ್ ಪಡೆಯುತ್ತಿದ್ದರೇ ರಿಯಲ್ ಆಗಿಯೇ ಡಿಬಾಸ್​ ದರ್ಶನ್ ಬಳ್ಳಾರಿ ಜೈಲಲ್ಲಿ ದಿನಗಳನ್ನ ಎಣಿಕೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಜೈಲಿನಲ್ಲಿದ್ರೂ ಕಾಟೇರ ಮೂವಿಗೆ ಪ್ರಶಸ್ತಿಗಳ ಸುರಿಮಳೆ.. ಮತ್ತೆ ಎಷ್ಟು ಪ್ರಶಸ್ತಿ ಬಾಚಿದೆ ಗೊತ್ತಾ?

https://newsfirstlive.com/wp-content/uploads/2024/09/DARSHAN_ARADHANA.jpg

Load More