newsfirstkannada.com

3 ದಿನ ಸ್ನಾನವಿಲ್ಲ, ಒಂದೇ ಟೀ ಶರ್ಟ್​​.. ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ಗೆ 5 ದುಸ್ಥಿತಿ; ಏನದು?

Share :

Published September 1, 2024 at 10:18pm

    ಬಳ್ಳಾರಿ ಜೈಲಿನಲ್ಲಿ ಏಕಾಂಗಿಯಾದ ಕೊಲೆ ಆರೋಪಿ ದರ್ಶನ್​ ತೂಗದೀಪ

    ಬಂದ ಕಷ್ಟಗಳು ಒಂದೆರಡಲ್ಲ, ಪತ್ನಿಯನ್ನು ಕಂಡು ಕಣ್ಣೀರಿಟ್ಟರಾ ಕಾಟೇರಾ..?

    ದರ್ಶನ್​ಗೆ ಒದಗಿದ ಸ್ಥಿತಿಯ ಬಗ್ಗೆ ಬಳ್ಳಾರಿ ಕಾರಾಗೃಹದ ಡಿಐಜಿ ಹೇಳೋದೇನು?

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​​ ಸದ್ಯದ ಸ್ಥಿತಿ ಯಾವ ದುಷ್ಮನ್​ಗೂ ಬೇಡ. ಒಂದೇ ಒಂದು ತಪ್ಪು ದರ್ಶನ್​​ನ ಬಾಣಲೆಯಿಂದ ಬೆಂಕಿಗೆ ಬಿಸಾಡಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್​ ಸ್ಥಿತಿ ಕಂಡು ಡಿಐಜಿ ಸಹ ಮರುಗಿದ್ದಾರೆ. ಹೈ ಸೆಕ್ಯೂರಿಟಿ ಸೆಲ್​ ದರ್ಶನ್​​ ಪಾಲಿಗೆ ಅಕ್ಷರಶಃ ನರಕವಾಗಿದೆ. ಕೊಲೆ ಆರೋಪಿ, ಅಭಿಮಾನಿಗಳ ದಾಸ ಅನುಭವಿಸುತ್ತಿರೋ ಐದು ದುಃಸ್ಥಿತಿಗಳೇನು? ಪತ್ನಿಯ ಎದುರು ಕಣ್ಣೀರಿಟ್ರಾ ದರ್ಶನ್? ಮೂರು ದಿನದಿಂದ ಮಂಕಾಗಿರೋ ದರ್ಶನ್​​ ಸಂಕಟ ಏನು? ದೇವೇಂದ್ರನಂತೆ ಇರಬಹುದಾಗಿದ್ದ ದರ್ಶನ್​ ಹೇಗಿದ್ದಾರೆ ಗೊತ್ತಾ? ಅನಾಥರಂತಾದ ದರ್ಶನ್​​ ದುಃಸ್ಥಿತಿಯನ್ನೇ ಸಂಪೂರ್ಣ ವಿವರಣೆ ಇಲ್ಲಿದೆ.

ಇಳಿ ಬಿದ್ದ ಕಣ್ಣು, ಕಳೆಗುಂದಿದ ಮುಖ, ಸಂಕಟ ತರಿಸೋ ದರ್ಶನ!
ಶನಿವಾರ ಪತ್ನಿ ವಿಜಯಲಕ್ಷ್ಮಿ ಭೇಟಿಯ ಟೈಮಲ್ಲಿ ಸೆಲ್​​ನಿಂದ ಹೊರ ಬಂದ ದರ್ಶನ್​​ ಸ್ಥಿತಿ ನಿಜಕ್ಕೂ ದಯನೀಯ. ಇಳಿ ಬಿದ್ದ ಕಣ್ಣು, ಕಳೆ ಗುಂದಿದ ಮುಖ, ತಲೆ ತಗ್ಗಿಸಿ ನಡೆಯೋ ಭಂಗಿ, ಎಲ್ಲವೂ ಶೋಚನೀಯ. ಸದಾ ವರ್ಣರಂಜಿತವಾಗಿ ಕಾಣುತ್ತಿದ್ದ ದರ್ಶನ್​ರನ್ನ ಈ ಸ್ಥಿತಿಯಲ್ಲಿ ನೋಡಿದವರೆಲ್ಲರೂ ಸಂಕಟಪಡ್ತಿದ್ದಾರೆ. ಸದಾ ಸುತ್ತಲೂ ದೊಡ್ಡದೊಂದು ಪಟಾಲಂ ಇರುತ್ತಿತ್ತು. ಆದ್ರೀಗ ಪೊಲೀಸರ ಸರ್ಪಗಾವಲಿನಲ್ಲಿ ದರ್ಶನ್ ಇದ್ದಾರೆ. ಸಣ್ಣದೊಂದು ಹೂಗುಚ್ಛವನ್ನೂ ಹಿಡಿದುಕೊಳ್ಳೋದಕ್ಕೆ ಜೊತೆಗಿದ್ದೋರು ಬಿಡ್ತಿರ್ಲಿಲ್ಲ. ಆದರೀಗ, ಪತ್ನಿ ಜೈಲಿಗೆ ತಂದಿದ್ದ ವಸ್ತುಗಳ ಬ್ಯಾಗನ್ನ ಖುದ್ದು ದರ್ಶನ್​​ ಹೊತ್ತೊಯ್ಯುತ್ತಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್​​ 5 ದುಃಸ್ಥಿತಿಗೆ ಅದೊಂದೇ ಕಾರಣ?
ಯಾವ ದುಷ್ಮನ್​ಗೂ ಇಂಥಾ ದುಃಸ್ಥಿತಿ ಬೇಡ ಅಂತ ಬಿಕ್ಕಳಿಸ್ತಾರೆ. ಹೀಗಂಥಾ ದರ್ಶನ್​ನ ಬಳ್ಳಾರಿ ಜೈಲಿನಲ್ಲಿ ನೋಡಿದ ಸಿಬ್ಬಂದಿ ಮಾತಾಡಿಕೊಳ್ತಿದ್ದಾರೆ. ಜಸ್ಟ್​ ಒಂದೇ ವಾರದ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಮಾಡಿದ ಒಂದೇ ಒಂದು ತಪ್ಪಿಗೆ ದರ್ಶನ್ ಅಕ್ಷರಶಃ ನರಕಕ್ಕೆ ಬೀಳುವಂತಾಗಿದೆ. ದುರಹಂಕಾರವೇ ಮಹಾಪತನಕ್ಕೆ ಅಡಿಪಾಯ ಎನ್ನುವುದಕ್ಕೆ ದರ್ಶನ್​ ಕೇಸಲ್ಲಿ ಮತ್ತೆ ಸಾಬೀತು ಆಗಿದೆ. ವಿಲ್ಸನ್ ಗಾರ್ಡನ್ ನಾಗನ ಸಹವಾಸಕ್ಕೆ ಸಿಲುಕಿ ದೊಡ್ಡ ಡಾನ್​​ನಂತೆ ಸಿಗರೇಟು ಸೇದಿದ್ದು ದುರಂಕಾರದ ಮತ್ತೊಂದು ಪರಮಾವಧಿ ಅನ್ನದೇ ತಪ್ಪಿಲ್ಲ. ಆದರೇ, ಇವತ್ತು ದರ್ಶನ್​ ಸ್ಥಿತಿ ಹೇಗಿದೆ ಗೊತ್ತಾ?

ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ಅಂಧಾಭಿಮಾನದ​ ಬಗ್ಗೆ ಕಿಚ್ಚ ಸುದೀಪ್‌ ಯಾಕೆ ಹೀಗಂದ್ರು? ಅಸಲಿ ಕಾರಣ ಇಲ್ಲಿದೆ!

ದರ್ಶನ್ ದುಸ್ಥಿತಿ 1
ಕಳೆದ 3 ದಿನಗಳಿಂದ ಒಂದೇ ಟೀ ಶರ್ಟ್​ನಲ್ಲಿದ್ದ ದರ್ಶನ್!

ದರ್ಶನ್ ಒಬ್ಬ ಲ್ಯಾವೀಶ್ ಪ್ರಪಂಚವನ್ನು ಹತ್ತಿರದಿಂದ ಕಂಡ ಹೀರೋ, ಅದ್ದೂರಿ ಕಾರು, ಕಾಸ್ಟ್ಲೀ ಬಟ್ಟೆ, ರಂಗು ರಂಗಿನ ದುನಿಯಾದ ಚಕ್ರವರ್ತಿಯಂತೆ ಮೆರೆದ ಈ ಹೀರೋ ದುಃಸ್ಥಿತಿ ನೋಡಿದ್ರೇ ಹೇಗಿದ್ದ ದರ್ಶನ್​ ಹೇಗಾಗಿಬಿಟ್ರು ಅನ್ನೋ ಪ್ರಶ್ನೆ ಮೂಡುತ್ತೆ. ಬಳ್ಳಾರಿ ಜೈಲಿಗೆ ಶಿಫ್ಟ್​ ಆದಾಗಿನಿಂದ ದರ್ಶನ್​​ ಒಂದೇ ಟೀ ಶರ್ಟ್​​ನಲ್ಲಿದ್ದದ್ದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. 3 ದಿನಗಳ ಕಾಲ ಸ್ಟಾರ್​ನಟ ಬಟ್ಟೆ ಕೂಡ ಬದಲಿಸಿರಲಿಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್​ ಸ್ನಾನವನ್ನೂ ಮಾಡೋದಕ್ಕೆ ಆಗಿಲ್ಲವಂತೆ.

ಇದನ್ನೂ ಓದಿ: ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​!

ಈ ಬಗ್ಗೆ ಮಾತನಾಡಿರುವ ಕಾರಾಗೃಹದ ಡಿಐಜಿ, ಮೂರು ದಿನಗಳಿಂದ ದರ್ಶನ್​​ ಸ್ನಾನ ಮಾಡಿಲ್ಲ. ಬೇರೆ ಬಟ್ಟೆಯನ್ನೂ ತೊಡಲಿಲ್ಲ. ಯಾಕೆ ಅನ್ನೋದು ನನಗೂ ಗೊತ್ತಿಲ್ಲ ಅಂತ ಡಿಐಜಿ ಹೇಳಿದ್ದಾರೆ. ಹಲವು ಸಮಸ್ಯೆಗಳಿಂದ ಬಳುತ್ತಿರುವ ದರ್ಶನ್​ ಸ್ನಾನಕ್ಕಾಗಿ ಬಿಸಿ ನೀರು ಕೇಳಿದ್ದರು ಎನ್ನಲಾಗುತ್ತಿದೆ. ಮೇಲಾಧಿಕಾರಿಗಳು ಬಂದ್ಮೇಲೆ ಅವರ ಗಮನಕ್ಕೆ ತರ್ತೀವಿ ಅಂತಾ ಸಿಬ್ಬಂದಿ ಹೇಳಿದ್ದಾರಂತೆ.

ದರ್ಶನ್ ದುಸ್ಥಿತಿ 2
12X4 ಕೋಣೆಯಲ್ಲಿ ಏಕಾಂಗಿ ಜೈಲು ವಾಸ,ದರ್ಶನ್ ಮಾನಸಿಕವಾಗಿ ಹೈರಾಣು

ಆರಡಿಯ ಕಟ್ಟುಮಸ್ತಾದ ದೇಹಧಾಡ್ಯವಿರುವ ದರ್ಶನ್​ ಬಳ್ಳಾರಿ ಜೈಲಿನಲ್ಲಿ ಎಂಥಾ ದುಃಸ್ಥಿತಿ ಪಡುತ್ತಿದ್ದಾರೆ ಅನ್ನೋದಕ್ಕೆ ಇದು ಮತ್ತೊಂದು ಸಾಕ್ಷಿ. ದರ್ಶನ್​​ ಇರಿಸಿರುವ ಸುಣ್ಣದ ಸೆಲ್ ನೋಡಿಯೇ ತಲೆ ಚಚ್ಚಿಕೊಂಡಿದ್ದರು. 12 ಅಡಿ ಉದ್ದ 4 ಅಡಿ ಅಗಲ ಇರುವ ಪುಟ್ಟ ಕಲ್ಲಿನ ಕೋಣೆಯಲ್ಲಿ ದರ್ಶನ್​ ವಿಲ ವಿಲ ಒದ್ದಾಡುತ್ತಿದ್ದಾರೆ. ಇದಕ್ಕಿಂತಲೂ ಸಂಕಟ ತರಿಸೋ ವಿಚಾರ ದರ್ಶನ್​ ಅಕ್ಕ ಪಕ್ಕದಲ್ಲಿ ಒಬ್ಬೇ ಒಬ್ಬ ಸಹ ಕೈದಿಯೂ ಇಲ್ಲ. ಏಕಾಂಗಿಯಾಗಿ ದರ್ಶನ್​​ ಸೆಲ್ ನಂಬರ್​ 15ರಲ್ಲಿ ಕೂತಿದ್ದಾರೆ. ಅಂತ ಖುದ್ದು ಡಿಐಜಿ ಈ ಬಗ್ಗೆ ಹೇಳುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್‌ ಕೈಗೆ ಸಿಗರೇಟ್ ಕೊಟ್ಟವರು ಯಾರು? ಜೈಲಿನ ಫೋಟೋ & ರಾಜಾತಿಥ್ಯದ ಸ್ಫೋಟಕ ಸತ್ಯ ಬಹಿರಂಗ

ದರ್ಶನ್ ದುಸ್ಥಿತಿ 3

ಪತ್ನಿ ಎದುರು ಕಣ್ಣೀರಿಟ್ಟು ಕಷ್ಟ ಹೇಳಿದ ದರ್ಶನ್? 

ದರ್ಶನ್​ ಪರಿಸ್ಥಿತಿ ಹೇಗಿದೆ ಅನ್ನೋದಕ್ಕೆ ಪತ್ನಿ ಬಿಕ್ಕಳಿಸುತ್ತಾ ಹೊರಗೆ ಕಾಲಿಟ್ಟ ದೃಶ್ಯವೇ ಸಾಕ್ಷಿ. ಖುಷಿಯಿಂದಲೇ ಜೈಲಿನೊಳಕ್ಕೆ ಕಾಲಿಟ್ಟ ವಿಜಯಲಕ್ಷ್ಮಿ ವಾಪಾಸ್ ಆಗುವಾಗ ಮಂಕಾಗಿದ್ರು. ಕಾರಣ, ದರ್ಶನ್​ ಭೇಟಿಯ ವೇಳೆ ಪತಿ ತೋಡಿಕೊಂಡ ಅಳಲೇ ಅದಕ್ಕೆ ಕಾರಣ ಎನ್ನಲಾಗ್ತಿದೆ. ಪತಿ ಇದ್ದ ಸೆಲ್ ನೋಡಿಯೇ ವಿಜಯಲಕ್ಷ್ಮಿ ಕಣ್ಣೀರು ಸುರಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಸದಾ ಧೈರ್ಯವಾಗಿ ಪತಿಯನ್ನು ಸಂತೈಸುತ್ತಿದ್ದ ವಿಜಯಲಕ್ಷ್ಮಿ ಈ ಸಲ ದರ್ಶನ್​ರನ್ನ ನೋಡುತ್ತಲೇ ಅತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದಲೇ ಸಿಕ್ಕಿದೆ. ಸುದೀರ್ಘ 25 ನಿಮಿಷಗಳ ಕಾಲ ದರ್ಶನ್​ ಪತ್ನಿಯೊಂದಿಗೆ ಮಾತಾಡಿದ್ದಾರಂತೆ.

ಇದನ್ನೂ ಓದಿ: ಪೂಮಾ ಟೀ ಶರ್ಟ್‌ನಲ್ಲೇ ದರ್ಶನ್.. ಮೆಡಿಕಲ್ ಚೆಕಪ್​ಗೆ ಕರೆದುಕೊಂಡು ಹೋದ ಜೈಲಾಧಿಕಾರಿಗಳು; ಕಾರಣವೇನು?

ದರ್ಶನ್ ದುಸ್ಥಿತಿ 4
ಸದಾ ಜೊತೆಗಿದ್ದ ದಂಡು ಇದೀಗ ಇತ್ತ ಸುಳಿಯುತ್ತಿಲ್ಲ
ದರ್ಶನ್​​ ಪಾಲಿಗೆ ಧೈರ್ಯ ಅಂತ ಇದ್ದಿದ್ದೇ ದಂಡು. ಸ್ನೇಹಿತರ ದಂಡು. ಖುಷಿಯಾಗಿದ್ದಾಗ ಸದಾ ಜೊತೆಯಲ್ಲೇ ಇರುತ್ತಿದ್ದ ಮಿತ್ರಕೂಟ ಇದೀಗ ಸನಿಹಕ್ಕೇ ಬರುತ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೇ ಕೆಲವೇ ಕೆಲವು ಸ್ನೇಹಿತರು ಬಂದು ಭೇಟಿ ಮಾಡಿದ್ದರು. ದರ್ಶನ್​ ದುಃಸ್ಥಿತಿ ನೋಡಿದರೇ ನಂಬಿಕೊಂಡಿದ್ದ ಮಿತ್ರ ಬಳಗವೂ ಇದೀಗ ಕೈ ಕೊಡುತ್ತಿದೆ. ಅಲ್ಲದೇ, ದರ್ಶನ್​​ ಭೇಟಿಗೆ ಬಳ್ಳಾರಿ ಜೈಲಿನ ಅಧಿಕಾರಿಗಳು ಒಂದಷ್ಟು ನಿಯಮಗಳನ್ನು ರೂಪಿಸಿದ್ದಾರೆ.

ದರ್ಶನ್ ದುಸ್ಥಿತಿ 5
ದಾಸನಿಗೆ ಕಾಡುತ್ತಿವೆ ಹಲವು ಆರೋಗ್ಯದ ಸಮಸ್ಯೆಗಳು

ದರ್ಶನ್​ ನಡೆದು ಬರುತ್ತಿರುವ ಇದೊಂದೇ ಒಂದು ದೃಶ್ಯ ಎಂಥಾ ದುಃಸ್ಥಿತಿಯಲ್ಲಿ ಇದ್ದಾರೆ ಅನ್ನೋದಕ್ಕೆ ಪ್ರತ್ಯಕ್ಷ ಪುರಾವೆ ಆಗಿದೆ. ದರ್ಶನ್ ಸರಿಯಾಗಿ ಊಟವನ್ನೂ ಮಾಡುತ್ತಿಲ್ಲ. ಅದಕ್ಕೂ ಕಾರಣ ಜೈಲಿನೊಳಗಿನ ಸಮಸ್ಯೆ. ಜೈಲು ಸೇರಿ 70 ದಿನಗಳೇ ಉರುಳಿವೆ ಈವರೆಗೂ ದರ್ಶನ್ 15 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಜೈಲಿನ ಊಟ ಸೇರುತ್ತಿಲ್ಲ ಎನ್ನುವಂಥದ್ದು. ಕೈ ನೋವಿನಿಂದ ಸದಾ ಬಳಲುತ್ತಲೇ ಇರುವ ದರ್ಶನ್​ ಮತ್ತೊಂದು ಸಮಸ್ಯೆಯನ್ನೂ ಹೇಳಿಕೊಂಡಿದ್ದಾರೆ.

ಸರ್ಜಿಕಲ್ ಕುರ್ಚಿಗಾಗಿ ಬೇಡಿಕೆ ಇಟ್ಟ ದರ್ಶನ್​​ಗೆ ಮಹಾ ಸಮಸ್ಯೆ!
ವಿಶೇಷ ಭದ್ರತಾ ಬ್ಯಾರಕ್ ಆಗಿದೆ. ಆದರೆ ಈ ಬ್ಯಾರಕ್ ಮಾತ್ರ ಸರಳ ಶೌಚಾಲಯ ಹೊಂದಿದೆ. ಇದು ದರ್ಶನ್‌ಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬೆನ್ನು ನೋವು ಹಾಗೂ ಎಡಗೈ ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಭಾರತೀಯ ಶೈಲಿಯ ಶೌಚಾಲಯ ಬಳಸಲು ಕಷ್ಟವಾಗುತ್ತಿದೆ. ಈ ಬ್ಯಾರಕ್‌ನಲ್ಲಿ ಮಾಡರ್ನ್‌ ಶೌಚಾಲಯ ಅಥವಾ ಕನಿಷ್ಠ ಸರ್ಜಿಕಲ್ ಕುರ್ಚಿಯನ್ನು ಒದಗಿಸುವಂತೆ ದರ್ಶನ್ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕಾರಾಗೃಹ ಸಿಬ್ಬಂದಿ, ಕಾರಾಗೃಹದ ಮೇಲಧಿಕಾರಿಗಳು ಹಾಗೂ ವೈದ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.

ಜೈಲಿನ ವೈದ್ಯಾಧಿಕಾರಿಗಳಿಂದ ದರ್ಶನ್​ ಆರೋಗ್ಯ ಪರೀಕ್ಷೆ ನಡೆಸಲಾಗಿದೆ. ಜೈಲಿನ ವೈದ್ಯಾಧಿಕಾರಿಗಳು ನೀಡುವ ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿ ದರ್ಶನ್​​ಗೆ ಸರ್ಜಿಕಲ್ ಚೇರ್ ಕೊಡಬೇಕೋ? ಬೇಡವೋ ಅನ್ನೋದನ್ನ ನಿರ್ಧರಿಸಲಿದ್ದಾರೆ ಜೈಲಾಧಿಕಾರಿಗಳು. ಬಳ್ಳಾರಿ ಜೈಲಿನಲ್ಲಿ ಎಷ್ಟು ಕಟ್ಟುನಿಟ್ಟಿನ ಕ್ರಮವಿದೆ ಅಂದರೇ. ವಿಜಯಲಕ್ಷ್ಮಿ ತಂದಿದ್ದ ಬೆಡ್​​ಶೀಟ್​ ಅನ್ನೂ ಕೊಟ್ಟಿಲ್ಲ. ಇದೀಗ ಬಳ್ಳಾರಿ ಜೈಲಿನಲ್ಲಿ ದರ್ಶನ್​ ಅನುಭವಿಸ್ತಿರೋ ದುಃಸ್ಥಿತಿಗಳನ್ನ ನೋಡಿದ್ರೂ ಅಷ್ಟೇ ದುಃಖಿಸೋ ಮಂದಿ ಕಾಣ್ತಿದ್ದಾರೆ. ಇದಕ್ಕಿಂತಲೂ ಘೋರ ಅನಿಸೋದು ದರ್ಶನ್​​​ಗೆ ಗೆಳತಿ ಕೊಟ್ಟ ಮರೆಯಲಾಗದ ಗಿಫ್ಟ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ದಿನ ಸ್ನಾನವಿಲ್ಲ, ಒಂದೇ ಟೀ ಶರ್ಟ್​​.. ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ಗೆ 5 ದುಸ್ಥಿತಿ; ಏನದು?

https://newsfirstlive.com/wp-content/uploads/2024/09/DARHSAN-BELLARY.jpg

Load More