newsfirstkannada.com

ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?

Share :

Published September 1, 2024 at 10:35pm

    ಪವಿತ್ರಗೌಡ ಜಾಮೀನು ಅರ್ಜಿ ವಜಾ, ದರ್ಶನ್​ಗೆ ಶುರುವಾಯ್ತು ಢವಢವ!

    ಗೆಳತಿಯ ಬೇಲ್ ಅರ್ಜಿ ವಜಾಗೊಂಡಿದ್ದು ನೋಡಿ ಕಂಗಾಲಾದ್ರಾ ದರ್ಶನ್​?

    ದರ್ಶನ್​ಗೂ ಕಾದಿದೆ ಹಲವು ಸಂಕಷ್ಟ, ಜಾಮೀನು ಸಿಗುವುದು ಸರಳವಲ್ಲ

ಬಳ್ಳಾರಿ: ದರ್ಶನ್ ಅಭಿನಯದ ನವಗ್ರಹ ಸಿನಿಮಾದ ಹಾಡಿನ ಈ ಸಾಲು ನೀವು ಕೇಳಿರಬೇಕು. ಕಳಬೇಡ, ಕೊಲ ಬೇಡ, ಈ ವಚನ ಮರೀಬೇಡ, ಸುಮ್​ ಸುಮ್ನೆ ಮೆರೀಬೇಡವೋ ಅನ್ನೋ ಈ ಸಾಲುಗಳನ್ನ ಬಹಳ ಹಿಂದೆಯೇ ಅರ್ಥಮಾಡಿಕೊಳ್ಳಬೇಕಿತ್ತೋ ಏನೋ? ದರ್ಶನ್ ಸ್ಥಿತಿ ಇವತ್ತು ಎಷ್ಟರ ಮಟ್ಟಿಗಿದೆ ಅಂದ್ರೆ ಈ ಕ್ಷಣಕ್ಕಾದ್ರೂ ದರ್ಶನ್​​ ತಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಂಡು ತಿದ್ದಿಕೊಳ್ಳಬೇಕಿತ್ತು. ಯಾಕಂದ್ರೆ ಯಾರೂ ಕೂಡ ದರ್ಶನ್​​ ಜೊತೆಗೆ ಇವತ್ತು ನಿಂತಿಲ್ಲ. ದರ್ಶನ್​ ಇವತ್ತು ಅಕ್ಷರಶಃ ಅನಾಥರಂತೆ ವಿಲ ವಿಲ ಒದ್ದಾಡುತ್ತಿದ್ದಾರೆ.

ಇದನ್ನೂ ಓದಿ: ಅನ್ಯಾಯಕಾರಿ ಬ್ರಹ್ಮ.. ಸನ್ಯಾಸಿ ಯುವಕರೇ ಎಚ್ಚರ; ಮದುವೆ ಆಗ್ತೀನಿ ಅಂತ ಮೋಸ ಮಾಡ್ತಿದ್ದ ಆಂಟಿ ಅರೆಸ್ಟ್‌!

ದರ್ಶನ್​​ರ ಇಂಥಾ ದುಸ್ಥಿತಿಗೆಲ್ಲಾ ದುರಂಹಕಾರವೇ ಕಾರಣ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾರೋ ಕೊಟ್ಟ ಸಿಗರೇಟನ್ನಾದ್ರೂ ಕದ್ದು ಮುಚ್ಚಿ ಸೇದಬಹುದಿತ್ತು. ತೀರಾ ಕಟ್ಟು ನಿಟ್ಟಿನ ಜೈಲು ಯಾವುದೂ ಇಲ್ಲ ಅನ್ನೋದನ್ನ ಬಹುಪಾಲು ಜೈಲರ್​​ಗಳೂ ಒಪ್ಪುತ್ತಾರೆ. ಅಂಥಹದರಲ್ಲಿ ದರ್ಶನ್​ ಟಾಯ್ಲೆಟ್​​ನಲ್ಲೋ, ತಮ್ಮ ಬ್ಯಾರಕ್​ನಲ್ಲೋ ಇನ್ನೆಲ್ಲೋ ಕದ್ದುಮುಚ್ಚಿ ಧಮ್​ ಅಂಟಿಸಬಹುದಿತ್ತು. ಕುಖ್ಯಾತರ ಜೊತೆ ಕುಳಿತಾಗಲಾದ್ರೂ ದರ್ಶನ್​​ ಎಚ್ಚರಿಕೆಯಿಂದ ವರ್ತಿಸಬೇಕಿತ್ತು. ಅದು ಬಿಟ್ಟು ಜೈಲಿನ ಓಪನ್ ಗ್ರೌಂಡಲ್ಲಿ, ರಾಜಾಧಿರಾಜನಂತೆ, ಎಲ್ಲರಿಗೂ ಕಾಣುವ ಹಾಗೇ ಸಿಗರೇಟು ಅಂಟಿಸಿ ನಾನು ಬೇರೆ ಕೈದಿಗಳಿಗಿಂತ ಭಿನ್ನ ಅನ್ನೋ ದೌಲತ್ತು ಪ್ರದರ್ಶನ ಮಾಡಿದ್ದೇ ಇವತ್ತು ಬಳ್ಳಾರಿ ಜೈಲೆಂಬ ನರಕಕೂಪಕ್ಕೆ ತಳ್ಳಿದೆ. ಈ ಮೂಲಕ ದರ್ಶನ್​ರ ಕಾಂಟ್ರವರ್ಷಿಯಲ್​ ಲೈಫ್​ ಶುರುವಿನಿಂದ ಕೊನೆಯವರೆಗೂ ದುರಹಂಕಾರವೇ ಮಹಾಪತನಕ್ಕೆ ಅಡಿಪಾಯ ಎನ್ನುವುದಕ್ಕೆ ದರ್ಶನ್​ ಕೇಸಲ್ಲಿ ಮತ್ತೆ ಸಾಬೀತು ಆಗಿದೆ. ಕೊನೆಗೆ ದರ್ಶನ್ ತುಂಬಾ ನಂಬಿದ್ದ ಗೆಳತಿಯೂ ಕೈಕೊಡ್ತಿದ್ದಾಳಾ ಎನ್ನುವ ಪ್ರಶ್ನೆ ಹುಟ್ಟಿದೆ.

ಉಲ್ಟಾ ಹೊಡೆದ ಪವಿತ್ರಾ? ದರ್ಶನ್ ವಿರುದ್ಧವೇ ಹೇಳಿಕೆ ಕೊಟ್ಟರಾ ಪವಿತ್ರಾ?
ರೇಣುಕಾಸ್ವಾಮಿ ಕೊಲೆ ಕೇಸ್​ನ A1 ಆಗಿರೋ ಪವಿತ್ರಾ ಗೌಡ ಅವರು ಜಾಮೀನು ಅರ್ಜಿ ವಜಾ ಆಗಿದೆ. ತನ್ನ ಗೆಳೆಯ ದರ್ಶನ್​ಗಿಂತಲೂ ಮುಂಚೆ ಜೈಲಿಂದ ಆಚೆ ಬರೋಕೆ ಪ್ಲಾನ್​ ಮಾಡಿದ್ದ ಪವಿತ್ರಾ ಗೌಡಳಿಗೆ ನ್ಯಾಯಾಲಯ ಶಾಕ್​ ಕೊಟ್ಟಿದೆ. ರೇಣುಕಾಸ್ವಾಮಿಯ ಹತ್ಯೆ ಭೀಕರ ಮತ್ತು ಘನಘೋರವಾಗಿದೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ಇಬ್ಬರು ಪ್ರತ್ಯಕ್ಷದರ್ಶಿಗಳು ಪವಿತ್ರಾ ಗೌಡನಾ ಗುರುತಿಸಿದ್ದಾರೆ. ಹಾಗಾಗಿ ಆಕೆಗೆ ಜಾಮೀನು ನೀಡಲು ಸಾಧ್ಯವಿಲ್ಲ ಅಂತಾ ಕಡ್ಡಿ ಮುರಿದಂತೆ 57ನೇ ಸಿಸಿಹೆಚ್ ಕೋರ್ಟ್ ಹೇಳಿದೆ. ಆದ್ರೆ, ಚಾರ್ಜ್‌ಶೀಟ್ ಸಲ್ಲಿಸೋಕು ಮೊದಲೆ ಅದ್ರಲ್ಲೂ ದರ್ಶನ್​ಗೂ ಮೊದಲೇ ಬೇಲ್ ಅರ್ಜಿ ಹಾಕಿರೋ ಪವಿತ್ರಾಳ ಪರ ವಕೀಲರು ಕೋರ್ಟ್‌ನಲ್ಲಿ ಮಾಡಿದ್ದ ವಾದ ಕೇಳಿದ್ರೆ ಎಂಥವರಿಗೂ ಅಚ್ಚರಿಯಾಗುತ್ತೆ.

ಯಾಕಂದ್ರೆ, ಪವಿತ್ರಾ ಗೌಡ ಪರ ವಕೀಲರ ಮೊದಲ ಲಾ ಪಾಯಿಂಟ್ ಪ್ರಕಾರ ಈಕೆ ಮೇಲೆ ಕೇಳಿ ಬಂದಿರೋ ಆರೋಪಗಳೆಲ್ಲವೂ ಸುಳ್ಳಂತೆ. ಕಪಾಳಕ್ಕೆ ಹೊಡೆದಿದ್ದಾರೆಯೇ ವಿನಃ ಕೊಲೆಯಾಗುವ ರೀತಿ ಹಲ್ಲೆ ಮಾಡಿಲ್ಲ ಅಂತಾ ಜಡ್ಜ್​ ಮುಂದೆ ಹೇಳಿದ್ದಾರೆ. ಅಂದ್ರೆ ಅರ್ಥ ರೇಣುಕಾಸ್ವಾಮಿ ಕೊಲೆಯನ್ನ ತಾನು ಮಾಡಿಲ್ಲ, ಬೇರೆಯವರಿಂದ ಆಗಿರಬಹುದು ಅನ್ನೋದನ್ನ ಒಪ್ಪಿಕೊಂಡಿತೆಯೇ?

ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷ..! ಹೌಹಾರಿದ ಜನ, ಮನೆಯಿಂದ ಆಚೆ ಬರಲು ಭಯ..

ಪವಿತ್ರಾ ಗೌಡ ಕೊಟ್ಟರು ಅತಿ ದೊಡ್ಡ ಟ್ವಿಸ್ಟ್, ದರ್ಶನ್​​ಗೆ ಸಂಕಷ್ಟ
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆ ಅಂತಲೇ ಪವಿತ್ರಾಗೌಡ ಪರ ವಕೀಲರು ವಾದಿಸಿದ್ದಾರೆಂಬ ಮಾಹಿತಿಯಿದೆ. ಶೆಡ್‌ನಲ್ಲಿ ಹಲ್ಲೆ ಮಾಡಿದವರ ಗ್ಯಾಂಗ್‌ನಲ್ಲಿ ಪವಿತ್ರಾ ಗೌಡ ಇರಲಿಲ್ಲ. ಅವರು ಯಾವುದೇ ಮಾರಕಾಸ್ತ್ರ ಬಳಸಿದ್ದಾರೆ ಎಂಬುದಕ್ಕೂ ಸಾಕ್ಷಿಗಳಿಲ್ಲ ಎಂಬುದು ಪವಿತ್ರಾ ಪರ ವಕೀಲರ ವಾದ. ಅರ್ಥಾತ್, ಪವಿತ್ರಾ ತಮ್ಮ ಲಾಯರ್ ಮೂಲಕ ಕೋರ್ಟ್‌ ಎದುರು ಹಲ್ಲೆಯ ಬಗ್ಗೆ ಎಳೆ ಎಳೆಯಾಗಿ ತೆರೆದಿಡ್ತಿದ್ದಾಳಾ ಎಂಬ ಶಂಕೆ ಹುಟ್ಟದೇ ಇರದು. ಬಹುಮುಖ್ಯವಾಗಿ ತನ್ನ ಗೆಳತಿ ದರ್ಶನ್‌ ಮೇಲೆಯೇ ಪವಿತ್ರಾ ಉಲ್ಟಾ ಹೊಡೆಯುತ್ತಿರೋದು ಕೇಸ್‌ಗೆೆ ಅತಿ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಪವಿತ್ರಾ ಉಲ್ಟಾ ಹೊಡೆದಿರೊ ಈ ಎರಡೂ ಕಾಣಗಳಿಂದಲೂ ದರ್ಶನ್​ ಇನ್ನಷ್ಟು ಕುಗ್ಗಿರಬಹುದು. ಇದೇ ಹೊತ್ತಿಗೆ ಸಹ ಕೈದಿಗಳೇ ಇಲ್ಲದ ಜೈಲಿನ ಸಣ್ಣ ಕೋಣೆಯಲ್ಲಿ ಅಕ್ಷರಶಃ ಅನಾಥರಾಗಿದ್ದಾರೆ.

ಪವಿತ್ರಾ ಬೇಲ್​​ ವಜಾ, ದರ್ಶನ್​ಗೂ ಶಿಕ್ಷೆಯ ಸುಳಿವು ನೀಡಿದ್ಯಾ?
ತಾನು ಬಚಾವ್ ಆದ್ರೆ ಸಾಕು ಅಂದ್ಕೊಂಡು ಕಾನೂನು ಹೋರಾಟಕ್ಕಿಳಿದಿರೋ ಪವಿತ್ರಾ ಗೌಡಗೆ ಬೇಲ್ ನಿರಾಕರಣೆ ಆಗಿದೆ. ಎಲ್ಲಾ ವಿಚಾರವನ್ನೂ ವಿಜಯಲಕ್ಷ್ಮಿ ಪತಿ ದರ್ಶನ್​ಗೆ ಹೇಳಿದ್ದಾರೆ ಎನ್ನಲಾಗ್ತಿದೆ. ಅಷ್ಟೆಲ್ಲಾ ಕಾರಣಗಳನ್ನ ಕೊಟ್ಟು, ಪ್ರಬಲ ವಾದ ಮಂಡಿಸಿದ್ರೂ ಪವಿತ್ರಾಗೆ ಬೇಲ್ ಸಿಕ್ಕಿಲ್ಲ. ಹೀಗಿರುವಾಗ, ನೂರಾರು ಸಾಕ್ಷ್ಯಗಳ ಬಲೆ ಹೆಣೆದಿರುವ ಪೊಲೀಸರು ದರ್ಶನ್​ಗೆ ಈಸಿಯಾಗಿ ಬೇಲ್ ಸಿಗುವಂತೆ ಮಾಡಿಬಿಡ್ತಾರಾ? ಚಾನ್ಸೇ ಇಲ್ಲ

ದರ್ಶನ್ ಬೇಲ್ ಭವಿಷ್ಯ: ಭೀಕರ ಹತ್ಯೆ, ಚಿತ್ರಹಿಂಸೆಯ ಕೊಲೆ
ದರ್ಶನ್​​ಗೆ ಬೇಲ್ ಸಿಗೋದು ಅನುಮಾನ ಅನ್ನೋದಕ್ಕೆ ಮೊದಲ ಕಾರಣ ಇದೇ ನೋಡಿ. ಪೊಲೀಸರಿಗೆ ಇದುವರೆಗೂ ಸಿಕ್ಕಿರೋ ಸಾಂದರ್ಭಿಕ ಸಾಕ್ಷಿಗಳು, ವೈದ್ಯಕೀಯ ಪರೀಕ್ಷೆಯ ವರದಿಗಳು, ಎಫ್​ಎಸ್​ಎಲ್ ಪರೀಕ್ಷಾ ರಿಪೋರ್ಟ್​ ರೇಣುಕಾಸ್ವಾಮಿಯದ್ದು ಅತ್ಯಂತ ಭೀಕರ ಕೊಲೆ ಅಂತಲೇ ಹೇಳುತ್ತಿದೆ. ಇನ್ನು, ಬರ್ಬರವಾಗಿ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಅನ್ನೋ ವಿಚಾರಕ್ಕೆ ಕೋರ್ಟ್​​ ಪವಿತ್ರಾ ಗೌಡಗೂ ಬೇಲ್ ನೀಡಿಲ್ಲ. ಇದು ದರ್ಶನ್​​ಗೂ ಅನ್ವಯಿಸಬಹುದು.

ಪ್ರತ್ಯಕ್ಷದರ್ಶಿ ಹೇಳಿಕೆ, ಡಿಎನ್​ಎ ಪುರಾವೆಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಆರೋಪಿಗಳನ್ನು ಗುರ್ತಿಸಿದ್ದಾರೆ ಹಾಗೂ 164ನಲ್ಲಿ ಹೇಳಿಕೆ ದಾಖಲಾಗಿದೆ. ಈ ಮಹತ್ವದ ಪುರಾವೆಗಳ ಕಾರಣಕ್ಕೆ ಬೇಲ್ ಡೌಟ್ ಎನ್ನಲಾಗ್ತಿದೆ. ಇದಕ್ಕಿಂತಲೂ ಬಹುಮುಖ್ಯ ಸಂಗತಿ ಆರೋಪಿಗಳ ಬಟ್ಟೆ ಮೇಲೆ ಪತ್ತೆ ಆಗಿರುವ ಡಿಎನ್​ಎ ಕೊಲೆ ಕಹಾನಿಗೆ ಮಹಾ ಸಾಕ್ಷಿ ಒದಗಿಸಿದೆ.

ಸಿಸಿಟಿವಿ ಸಾಕ್ಷಿ, ಆರೋಪಿಗಳ ವಿರುದ್ಧ ಸಾಕ್ಷಿಗಳು
ಯಾರೇ ಬಿಟ್ರೂ ಮೇಲಿರೋನು ಬಿಡೋದಿಲ್ಲ ಅನ್ನೋದು ಇದಕ್ಕೆ ಇರಬಹುದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​​ ಅಂಡ್​ ಗ್ಯಾಂಗ್ ಬಳಸಿದ್ದಾರೆ ಎನ್ನಲಾಗುತ್ತಿರುವ ಕಾರಿನ ದೃಶ್ಯ ಸಾಕ್ಷಿಯೂ ಇದೀಗ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಇದು ಸಾಲದು ಅಂತ ಈ ಪ್ರಕರಣದಲ್ಲಿ ಸಿಕ್ಕಿರೋ ಎಲ್ಲಾ ಸಾಕ್ಷಿಗಳು ಆರೋಪಿಗಳ ವಿರುದ್ಧವೇ ಇದ್ದು, ಬೇಲ್ ಕೊಡೋದಕ್ಕೆ ಸಾಧ್ಯವಿಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಪವಿತ್ರಾ ಗೌಡ ಬೇಲ್ ಪ್ರಕರಣದಂತೆಯೇ ಡಿ ಗ್ಯಾಂಗ್​​ಗೂ ಸಹ ಕೋರ್ಟ್​ ಚಿತ್ರಹಿಂಸೆ ಕೊಟ್ಟು ಭೀಕರವಾಗಿ ಕೊಂದ ಕಾರಣಕ್ಕೆ ಬೇಲ್ ಅರ್ಜಿ ವಜಾಗೊಳಿಸಬಹುದು. ಇದೆಲ್ಲವನ್ನೂ ನೋಡುತ್ತಿದ್ದರೆ ದರ್ಶನ್‌ಗೆ ಇನ್ನೂ ಎರಡು ವರ್ಷ ಜಾಮೀನು ಸಿಗೋದು ಕಷ್ಟ, ಶಿಕ್ಷೆ ಆಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?

https://newsfirstlive.com/wp-content/uploads/2024/06/DARSHAN_PAVITRA-1.jpg

Load More