newsfirstkannada.com

×

ಇವತ್ತಿಂದ ದರ್ಶನ್‌ಗೆ ಬಿಡುಗಡೆಯ ಕನಸು.. ಡೆವಿಲ್‌ಗಾಗಿ ಜೈಲಲ್ಲಿ ವರ್ಕೌಟ್ ಆರಂಭ; ಏನಿದರ ಗುಟ್ಟು?

Share :

Published September 9, 2024 at 6:12am

    ಇಂದಿಗೆ ದರ್ಶನ್‌ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಮುಕ್ತಾಯ

    ಬಳ್ಳಾರಿ ಜೈಲಿನಲ್ಲಿರೋ ಡೆವಿಲ್‌ಗೆ ಶುರು ಬಾಡಿ ಮೆಂಟೇನ್ ಚಿಂತೆ!

    ಆರೋಪಿಗಳ ಪರ ವಕೀಲರಿಗೆ ಇಂದು ಚಾರ್ಜ್‌ಶೀಟ್ ಕಾಪಿ ಸಿಗುತ್ತೆ

ಬಳ್ಳಾರಿ: ನಟ ದರ್ಶನ್ ಅಂಡ್ ಗ್ಯಾಂಗ್‌ನ ಅಟ್ಟಹಾಸದ ಕಂಪ್ಲೀಟ್ ರಿಪೋರ್ಟ್‌ ಕೋರ್ಟ್‌ಗೆ ಸಲ್ಲಿಕೆಯಾಗಿದೆ. 3991 ಪುಟಗಳ ಆರೋಪ ಪಟ್ಟಿಯಲ್ಲಿ ಡೆವಿಲ್ ಪಡೆಯ ರಕ್ಕಸತನ ರಿವೀಲ್ ಆಗಿದೆ. ರೇಣುಕಾಸ್ವಾಮಿಗೆ ಕೊಟ್ಟಿದ್ದ ಚಿತ್ರಹಿಂಸೆಯ ಎಳೆ ಎಳೆಯೂ ದೋಷಾರೋಪಣೆಯಲ್ಲಿ ಅಡಕವಾಗಿದೆ. ಇದೆಲ್ಲದರ ಮಧ್ಯೆ ಡಿ ಗ್ಯಾಂಗ್ ಜೈಲಿನಿಂದ ಹೊರ ಬರಲು ಸಿದ್ಧತೆಯಲ್ಲಿ ತೊಡಗಿದೆ.

ಇದನ್ನೂ ಓದಿ: ಇಷ್ಟು ದಿನ ಒಂದು ಲೆಕ್ಕ ನಾಳೆಯಿಂದ ದರ್ಶನ್‌ಗೆ ಹೊಸ ದುನಿಯಾ.. ದಾಸ ಕಾಯುತ್ತಿದ್ದ ಆ ದಿನ ಬಂದೇ ಬಿಡ್ತಾ? 

ಇಂದು ‘ಡಿ ಗ್ಯಾಂಗ್’ ನ್ಯಾಯಾಂಗ ಬಂಧನ ಮುಕ್ತಾಯ!

ಪಟ್ಟಣಗೆರೆಯ ಡೆವಿಲ್ ಪಡೆ ಸದ್ಯ ಪರಪ್ಪನ ಅಗ್ರಹಾರದಿಂದ ದಿಕ್ಕಾಪಾಲಾಗಿದೆ. ರಾಜ್ಯದ ಬೇರೆ ಬೇರೆ ಜೈಲುಗಳಲ್ಲಿ ಕಂಬಿ ಎಣಿಸ್ತಿದ್ದಾರೆ. ಈ ಮಧ್ಯೆ ಆಗಸ್ಟ್‌ 28ರಂದು 24ನೇ ಎಸಿಎಂಎಂ ನ್ಯಾಯಾಲಯ ಡೆವಿಲ್ ಪಡೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಿತ್ತು. ಇಂದು ಆ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದೆ. ಈ ಮಧ್ಯೆ ದರ್ಶನ್‌ ಅಂಡ್‌ ಪಟಾಲಂ ಬೇಲ್‌ಗೆ ಅರ್ಜಿ ಸಲ್ಲಿಸಲು ಸಜ್ಜಾಗಿದೆ.

ಬೇಲ್‌ಗೆ ಅರ್ಜಿ ಹಾಕ್ತಾರಾ ‘ದಾಸ’?
ದರ್ಶನ್ ಗ್ಯಾಂಗ್​ನ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಮುಕ್ತಾಯವಾಗಲಿದೆ. ವಿವಿಧ ಜೈಲುಗಳಿಂದ ಆರೋಪಿಗಳು ಇಂದು ಕೋರ್ಟ್​ಗೆ ಹಾಜರಾಗಲಿದ್ದಾರೆ. 24ನೇ ACMM ಕೋರ್ಟ್​​ಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳನ್ನ ಪೊಲೀಸರು ಹಾಜರುಪಡಿಸಲಿದ್ದಾರೆ. ಇದರ ಜೊತೆಗೆ ಇಂದು ಆರೋಪಿಗಳ ಪರ ವಕೀಲರಿಗೆ ಚಾರ್ಜ್‌ಶೀಟ್ ಕೈ ಸೇರಲಿದೆ. ಚಾರ್ಜ್‌ಶೀಟ್ ಸಿಗುತ್ತಿದ್ದಂತೆ ಡೆವಿಲ್ ಪಡೆಯ ಕೆಲ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್ ಕಾಪಾಡಲು ಸರೆಂಡರ್ ಆಗಿದ್ದ A16 ಕೇಶವ ಸಿಕ್ಕಿದ್ದೇ ರೋಚಕ! 

ಬಳ್ಳಾರಿ ಜೈಲಿನಲ್ಲಿರೋ ಡೆವಿಲ್‌ಗೆ ಬಾಡಿ ಮೆಂಟೇನ್ ಚಿಂತೆ!

ಪರಪ್ಪನ ಅಗ್ರಹಾರದಲ್ಲಿದ್ದಾಗ ರಾಜಾತಿಥ್ಯ ಪಡೆಯುತ್ತಾ ದಾಸ ಭರ್ಜರಿ ಬಾಡಿ ಮೇಂಟೇನ್ ಮಾಡಿದ್ದಾರೆ. ಅಲ್ಲಿ ಕಟ್ಟುಮಸ್ತಾದ ದೇಹಕ್ಕೆ ಬೇಕಾದ ವೆರೈಟಿ ಫುಡ್ ತರಿಸಿಕೊಡಲು ವಿಲ್ಸನ್ ಗಾರ್ಡನ್ ನಾಗ ಇದ್ದ. ಅಷ್ಟೇ ಅಲ್ಲ ವರ್ಕೌಟ್ ಮಾಡಲು ಜಿಮ್ ಬೇರೆ ಇತ್ತು. ಆದ್ರೀಗ ಬಳ್ಳಾರಿ ಜೈಲಿನಲ್ಲಿ ಖೇಲ್‌ ಖತಂ ನಾಟಕ್ ಬಂದ್. ಹೀಗಾಗಿ ಇಲ್ಲಿಗೆ ಶಿಫ್ಟ್ ಆಗಿ 11 ದಿನ ಕಳೀತಿದ್ದಂತೆ ದಾಸನ ದೇಹ ಸೊರಗುತ್ತಿದ್ಯಂತೆ. ಹೀಗಾಗಿ ದೇಹವನ್ನ ಉರಿಗೊಳಿಸುವ ಕಡೆ ಮತ್ತೆ ದಾಸನ ಚಿತ್ತ ನೆಟ್ಟಿದೆಯಂತೆ.

‘ದಾಸ’ನಿಗೆ ಈಗ ದೇಹದ ಚಿಂತೆ!

ಬಳ್ಳಾರಿ ಜೈಲಲ್ಲಿದ್ರೂ ದರ್ಶನ್‌ ಬಾಡಿ ಮೆಂಟೇನ್ ಮಾಡೋದನ್ನ ಬಿಟ್ಟಿಲ್ವಂತೆ. ದೇಹದ ಕಡೆ ನಟ ದರ್ಶನ್ ಹೆಚ್ಚು ಗಮನ ಕೊಡುತ್ತಿದ್ದಾರಂತೆ. ಮಾನಸಿಕವಾಗಿ ಕುಗ್ಗಿದ್ರೂ ದೇಹದ ಕಡೆಗೆ ಹೆಚ್ಚು ಒತ್ತು ನೀಡ್ತಿದ್ದಾರೆ ಅಂತ ತಿಳಿದುಬಂದಿದೆ. ಜೈಲಿನಲ್ಲೂ ದರ್ಶನ್‌ಗೆ ‘ಡೆವಿಲ್’ ಸಿನಿಮಾದೇ ಚಿಂತೆ ಕಾಡುತ್ತಿದೆಯಂತೆ. ಒಂದ್ವೇಳೆ ಜಿಮ್ ಮಾಡದಿದ್ದರೆ, ಬಾಡಿ ಶೇಪ್ ಹಾಳಾಗುವ ಆತಂಕ, ಅಲ್ಲದೇ ಒಮ್ಮೆಲೆ ಜಿಮ್ ಬಿಟ್ಟರೆ ಚರ್ಮ ಜೋತು ಬಿದ್ದು ವಿಲಕ್ಷಣ ಆಗುವ ಚಿಂತೆ ಕಾಡುತ್ತಿದೆಯಂತೆ. ಹೀಗಾಗಿ ಜೈಲಿನಲ್ಲಿ ಅನ್ನ ಬಿಟ್ಟು ಚಪಾತಿ, ಮುದ್ದೆ ಊಟಕ್ಕೆ ಕಾಟೇರ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ.. ವಿಟಮಿನ್ ಟ್ಯಾಬ್ಲೆಟ್ಸ್‌ನೂ 2ನೇ ಆರೋಪಿ ಸೇವಿಸುತ್ತಿದ್ದಾರೆ ಅಂತ ತಿಳಿದುಬಂದಿದೆ.

ಇದನ್ನೂ ಓದಿ: ಜೈಲಲ್ಲಿ ಅನ್ನ ತಿನ್ನುವುದು ಬಿಟ್ಟ ದರ್ಶನ್.. ಈ ಮಾತ್ರೆಗಳನ್ನ ಸೇವನೆ ಮಾಡುತ್ತಿರುವುದು ಏಕೆ? 

ದರ್ಶನ್‌ ಮೊದಲೇ ತೆರೆ ಮೇಲೆ ಹೀರೋ ಆಗಿ ಮೆರೆದವರು. ಗುಂಡು-ತುಂಡಿಗೆ ಒಗ್ಗಿದ್ದ ದೇಹ ಬೇರೆ. ಈಗ ಬಳ್ಳಾರಿ ಜೈಲಿನಲ್ಲಿ ಸೊರಗದೇ ಇರುತ್ತಾ? ಜೈಲಲ್ಲಿದ್ರೆ ಬಾಡಿ ಮೆಂಟೇನ್‌ ಮಾಡಬಾರದು ಅನ್ನೋ ಕಾನೂನಂತೂ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವತ್ತಿಂದ ದರ್ಶನ್‌ಗೆ ಬಿಡುಗಡೆಯ ಕನಸು.. ಡೆವಿಲ್‌ಗಾಗಿ ಜೈಲಲ್ಲಿ ವರ್ಕೌಟ್ ಆರಂಭ; ಏನಿದರ ಗುಟ್ಟು?

https://newsfirstlive.com/wp-content/uploads/2024/07/Devil-Darshan.jpg

Load More