newsfirstkannada.com

ದರ್ಶನ್​ಗೆ ಬೇಲ್​ ಸಿಗುತ್ತಾ? ಇಲ್ವಾ? ನಿವೃತ್ತ ಪೊಲೀಸ್​​​ ಅಧಿಕಾರಿಯಿಂದ ಸ್ಫೋಟಕ ವಿಷ್ಯ ಬಯಲು

Share :

Published July 6, 2024 at 9:32pm

  ರೇಣುಕಾಸ್ವಾಮಿ ಹತ್ಯೆ ಕೇಸ್​​ನಲ್ಲಿ ನಟ ದರ್ಶನ್​ ಅಂಡ್​​​ ಗ್ಯಾಂಗ್​​ ಜೈಲಿಗೆ

  ಇದುವರೆಗೂ ದರ್ಶನ್​​ ಬೇಲ್​ಗಾಗಿ ಅರ್ಜಿ ಸಲ್ಲಿಕೆ ಮಾಡದೆ ಇರೋದು ಯಾಕೆ?

  ಜೈಲಿನಿಂದ ದರ್ಶನ್​​ರನ್ನು ಬಿಡಿಸಿಕೊಳ್ಳಲು ಪತ್ನಿ ವಿಜಯಲಕ್ಷ್ಮಿ ಭಾರೀ ಕಸರತ್ತು

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್​ ಅಂಡ್​​​ ಗ್ಯಾಂಗ್​​ ಜೈಲು ಪಾಲಾಗಿರೋ ವಿಷಯ ಗೊತ್ತೇ ಇದೆ. ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್​​ರನ್ನು ಬಿಡಿಸಿಕೊಳ್ಳಲು ಪತ್ನಿ ವಿಜಯಲಕ್ಷ್ಮಿ ಭಾರಿ ಕಸರತ್ತು ನಡೆಸ್ತಿದ್ದಾರೆ. ಆದ್ರೂ ಇದುವರೆಗೂ ದರ್ಶನ್​​ ಬೇಲ್​ಗಾಗಿ ಅರ್ಜಿ ಸಲ್ಲಿಕೆ ಮಾಡಿಲ್ಲ, ದರ್ಶನ್​ಗೆ ಜಾಮೀನು ಸಿಗುತ್ತಾ ಇಲ್ವಾ ಅನ್ನೋದೇ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ‘ತಿಮ್ಮಿ ಥರಾ ಇದ್ಲು.. ಪವಿತ್ರಾ ಟ್ರ್ಯಾಪ್​ಗೆ ದರ್ಶನ್​ ತಗ್ಲಾಕೊಂಡ್ರು’ ನಿರ್ದೇಶಕಿ ಚಂದ್ರಕಲಾ ಬಿಚ್ಚಿಟ್ರು ಅಚ್ಚರಿಯ ಮಾಹಿತಿ

ಅಭಿಮಾನಿಗಳಿಗೆ​ ಪೊಲೀಸ್​​ ಕಸ್ಟಡಿಯಿಂದ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಪರಪ್ಪನ ಆಗ್ರಹಾರ ಜೈಲು ಸೇರೋವಗರೆಗೂ ದರ್ಶನ್​​ಗೆ ಬೇಲ್​ ಯಾವಾಗ ಎಂದು ಒಂದೇ ಪ್ರಶ್ನೆ ಕೇಳ್ತಿದ್ದಾರೆ. ಆದ್ರೆ ಸದ್ಯಕ್ಕಂತೂ ಬೇಲ್​​ ಸಿಗೋದೇ ಇಲ್ಲ ಅನ್ನೋ ಮಾತನ್ನ ಹಿರಿಯ ನಿವೃತ್ತ ಪೊಲೀಸ್​ ಅಧಿಕಾರಿ ಎಸ್​​​​.ಕೆ ಉಮೇಶ್​​​ ಹೇಳುತ್ತಿದ್ದಾರೆ. ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್​ರನ್ನು ಬಿಡಿಸಿಕೊಳ್ಳಲು ಪತ್ನಿ ವಿಜಯಲಕ್ಷ್ಮೀ ಕಸರತ್ತು ನಡೆಸ್ತಿದ್ದಾರೆ. ದರ್ಶನ್​ರನ್ನು ಹೊರ ತರಲು ಖ್ಯಾತ ವಕೀಲರನ್ನು ನೇಮಿಸಿದ್ದಾರೆ. ಇಷ್ಟೆಲ್ಲಾ ಆದ್ರೂ ದರ್ಶನ್​ ಜಾಮೀನಿಗಾಗಿ ಅರ್ಜಿ ಹಾಕಲಿಲ್ಲವೇಕೆ ಎಂಬ ಪ್ರಶ್ನೆ ಹುಟ್ಟಿದ್ದು, ಅದಕ್ಕೆ ಕಾರಣವೇನು ಅಂತ ನಿವೃತ್ತ ಪೊಲೀಸ್​​ ಅಧಿಕಾರಗಳೇ ಉತ್ತರ ಕೊಟ್ಟಿದ್ದಾರೆ.

ದರ್ಶನ್​ ಅಂಡ್​​ ಗ್ಯಾಂಗ್​ ಮಾಡಿರೋ ಕೃತ್ಯಕ್ಕೆ ದಾಖಲಾಗಿರೋ ಸೆಕ್ಷನ್​ಗಳ ಅಧಾರದ ಮೇಲೆ ಯಾವ ಶಿಕ್ಷೆ ಬೀಳಬಹುದು ಅಂತ ಎಸ್​ಕೆ ಉಮೇಶ್​​ ಅವರು ತಮ್ಮ ಅನುಭವದ ಆಧಾರದ ಮೇಲೆ ಸ್ಫೋಟಕ ಹೇಳಿಕೆ ಹೇಳಿದ್ದಾರೆ. ದರ್ಶನ್​​ಗೆ ಬೇಲ್​​ ಸಿಗುತ್ತೆ ಅಂತ ಕಾಯುತ್ತಿದ್ದ ದರ್ಶನ್​ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ದರ್ಶನ್​​ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗೋದು ಬಹುತೇಕ ಪಕ್ಕಾ ಆಗಿದೆ.

ಇನ್ನು, ಇದೇ ವಿಚಾರವಾಗಿ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ನಿವೃತ್ತ ಪೊಲೀಸ್​​​ ಅಧಿಕಾರಿ ಎಸ್​​.ಕೆ ಉಮೇಶ್​​ ಅವರು ಈಗಾಗಲೇ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಕೋರ್ಟ್​ಗೆ ಒಪ್ಪಿಸಿದ್ದಾರೆ. ಈ ತನಿಖೆಗೆ ಸಂಬಂಧಪಟ್ಟಂತೆ ಇನ್ನೂ ಹಲವು ವಿಚಾರದ ಬಗ್ಗೆ, ಸಾಕ್ಷಿದಾರರ ಹೇಳಿಕೆಗಳನ್ನು ಪತ್ತೆ ಹಚ್ಚುತ್ತಾರೆ ಎಂದರೆ ಮತ್ತೆ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಬೇಕಾಗುತ್ತದೆ. ಈ ಕೇಸ್​ನಲ್ಲಿ ಆರೋಪಿಗಳ ಪಾತ್ರವನ್ನು ಏನಿದೆ ಅಂತ ಒಂದು ಹಂತವನ್ನು ರಚನೆ ಮಾಡುತ್ತಾರೆ. ಚಾರ್ಜ್​ ಶೀಟ್​ನಲ್ಲಿ ಈ ಕೇಸ್​ಗೆ ಸಂಬಂಧಪಟ್ಟ ವಿಚಾರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಕೇಸ್​ನಲ್ಲಿ ಆರೋಪಿಗಳು ಹತ್ಯೆಗೆ ಏನೆಲ್ಲಾ ವಸ್ತುಗಳನ್ನು ಬಳಸಿದ್ದಾರೆ ಎಂಬುವುದರ ಬಗ್ಗೆ ಪೊಲೀಸರು ಕಲೆ ಹಾಕುತ್ತಾರೆ. ಪೊಲೀಸರು ಕೊಟ್ಟ ಚಾರ್ಜ್​ ಶೀಟ್​ನಲ್ಲಿ ಆರೋಪಿಗಳ ಬಗ್ಗೆ ಎಲ್ಲಾದರೂ ಕೊಲೆಗೆ ಇವರೇ ಮುಖ್ಯ ಕಾರಣ ಅಂತ ಉಲ್ಲೇಖ ಮಾಡಿದ್ರೆ ಸೆಷನ್ಸ್ ಕೋರ್ಟ್​ನಲ್ಲಿ ಬೆಲ್​ ಸಿಗೋದು ಬಹತೇಕ ಡೌಟ್​ ಆಗಿರುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದರ್ಶನ್​ಗೆ ಬೇಲ್​ ಸಿಗುತ್ತಾ? ಇಲ್ವಾ? ನಿವೃತ್ತ ಪೊಲೀಸ್​​​ ಅಧಿಕಾರಿಯಿಂದ ಸ್ಫೋಟಕ ವಿಷ್ಯ ಬಯಲು

https://newsfirstlive.com/wp-content/uploads/2024/07/darshan-and-umesh.jpg

Load More