ದರ್ಶನ್ ಜೈಲಲ್ಲಿ, ದೇವಸ್ಥಾನಗಳನ್ನ ಸುತ್ತುತ್ತಿರುವ ಪತ್ನಿ
ನಿನ್ನೆ ಅಸ್ಸಾಂನ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ
ವಿಜಯಲಕ್ಷ್ಮಿ ಕಾಮಾಕ್ಯ ದೇವಿಯ ಮೊರೆ ಹೋಗಿದ್ದೇಕೆ?
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಪ್ರಕರಣದಿಂದ ದರ್ಶನ್ ಅವರನ್ನು ಹೊರಗೆ ತರಲು ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟಕ್ಕಾಗಿ ಪ್ರಯತ್ನ ಮಾಡ್ತಿದ್ದಾರೆ. ಪತಿ ದರ್ಶನ್ ತಂದುಕೊಂಡಿರುವ ಸಂಕಷ್ಟಗಳು ಆದಷ್ಟು ಬೇಗ ದೂರ ಆಗಲಿ ಎಂದು ಶಕ್ತಿ ದೇವತೆಗಳ ಮೊರೆ ಹೋಗಿದ್ದಾರೆ. ಅದರಂತೆ ಅಸ್ಸಾಂನ ಕಾಮಾಕ್ಯ ದೇವಿ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ!
ದೇವಿ ಮುಂದೆ ಕೈಯೊಡ್ಡಿದ ವಿಜಯಲಕ್ಷ್ಮಿ!
ನಿನ್ನೆ ಅಸ್ಸಾಂನ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಿಯ ಪ್ರಸಾದ ತಂದಿರುವ ವಿಜಯಲಕ್ಷ್ಮೀ ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿಜಯಲಕ್ಷ್ಮಿ ಅವರು ದೇವಾಲಯದ ಎದುರು ನಿಂತಿರುವ ಫೋಟೋ ನೋಡಿ ಖುಷ್ ಆಗಿದ್ದಾರೆ. ಅತ್ತಿಗೆ ಸಿಹಿ ಸುದ್ದಿ ಕೊಡ್ತಿದ್ದ ಹಾಗೆ ಕಾಣ್ತಿದೆ. ಆದಷ್ಟು ಬೇಗ ಒಳ್ಳೆಯ ಸುದ್ದಿ ಸಿಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡ್ತಿದ್ದಾರೆ. ಕಾಮಾಕ್ಯ ದೇವಿಯ ಮುಂದೆ ವಿಜಯಲಕ್ಷ್ಮಿ ಕೊಟ್ಟ ಸಂದೇಶ ಏನು? ಬದಲಾಗುತ್ತಾ ಆರೋಪಿ ದರ್ಶನ್ ಬದುಕು? ಏನಿದರ ಮುನ್ಸೂಚನೆ?
ಇದನ್ನೂ ಓದಿ: ಖಾಸಗಿ ವಿಡಿಯೋ, ಫೋಟೋ ಇಟ್ಕೊಂಡು ದರ್ಶನ್ಗೆ ಬ್ಲ್ಯಾಕ್ಮೇಲ್ -ಪವಿತ್ರಗೌಡಳ ತಂತ್ರ ಬಿಚ್ಚಿಟ್ಟ ವಿಜಯಲಕ್ಷ್ಮೀ
ಪ್ರಸಾದದ ಸೀಕ್ರೆಟ್
ಅಂದ್ಹಾಗೆ ಕೆಂಪು ವಸ್ತ್ರದ ಪ್ರಸಾದಕ್ಕಾಗಿ ದೇವಿ ಮುಂದೆ ವಿಜಯಲಕ್ಷ್ಮಿ ಕೈಯೊಡ್ಡಿದ್ದಾರೆ. ಕಾಮಾಕ್ಯ ಸಿಂಧೂರ /ಕಾಮಾಕ್ಯ ಕುಂಕುಮ ಪವರ್ ಫುಲ್ ಪ್ರಸಾದ. ಈ ಕುಂಕುಮವನ್ನ ಪೂಜನೀಯವಾಗಿ ಮಹಿಳೆಯರು ಹಣೆಗಿಡುತ್ತಾರೆ. ಕಾಮಾಕ್ಯ ದೇವಿ ಸನ್ನಿಧಿಯ ಕಲ್ಲಿನ ಕುಂಕುಮ ಪ್ರಸಾದ ಸಿಕ್ಕರೆ ಅದೃಷ್ಟ. ವೈವಾಹಿಕ ಸಂಬಂಧದ ವ್ಯತ್ಯಾಸಗಳು ದೂರವಾಗುತ್ತವೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಈ ದೇಗುಲದೆದುರು ಹಲವರು ಮದುವೆಯಾಗ್ತಾರೆ.
2011ರಲ್ಲಿ ದರ್ಶನ್ ಜೈಲಿಗೆ ಹೋಗಲು ಕಾರಣ ವೈವಾಹಿಕ ಸಂಬಂಧದಲ್ಲಿನ ಬಿರುಕು. ಇದೀಗ ದರ್ಶನ್ ಮತ್ತೆ ಗೆಳತಿಯ ವಿಚಾರಕ್ಕೆ ಕೊಲೆ ಕೇಸಲ್ಲಿ ಜೈಲಿಗೆ ಹೋಗಿದ್ದಾರೆ. ವಿವಾಹವಾದ ನಂತರ ಸಂಬಂಧಗಳಿಂದಲೇ ಸಮಸ್ಯೆಗಳು ಬರುತ್ತಿವೆ. ಇದೇ ಕಾರಣಕ್ಕೆ ಶಕ್ತಿ ದೇವತೆ ಮೊರೆ ಹೋದ್ರಾ ಅನ್ನೋ ಪ್ರಶ್ನೆ ಇದೆ.
ಇದನ್ನೂ ಓದಿ: ‘ನನ್ನ ಫೋನ್ ಸ್ವಿಚ್ ಆಫ್ ಆಗುತ್ತೆ’ ವಿಜಯಲಕ್ಷ್ಮೀಗೆ ದರ್ಶನ್ ಅರೆಸ್ಟ್ ಆದ ವಿಚಾರ ಗೊತ್ತಾಗಿದ್ದು ಹೇಗೆ..?
ದೇವಿ ಪೀಠದ ಮಹಿಮೆ
ಈ ದೇಗುಲವು ಹೆಣ್ಮಕ್ಕಳನ್ನು ಗೌರವದಿಂದ ಕಾಣುವಂತೆ ಮಾಡುತ್ತದೆ. ದೇವಿಯ ವಿಗ್ರಹ ಇಲ್ಲದ ಈ ಜಾಗದಲ್ಲಿ ಸಂತಾನ ಶಕ್ತಿಯ ಸೃಷ್ಟಿಯ ಶಕ್ತಿ ಕೂಡ ಇದೆ. ಸಂತಾನ ಶಕ್ತಿಯ ಸೃಷ್ಟಿಯ ಮಹಿಮೆಯನ್ನ ಸಾರುತ್ತದೆ. ಇಂತಹ ಶಕ್ತಿ ದೇವಿಯ ಮೊರೆ ಹೋಗಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ.
ಇದನ್ನೂ ಓದಿ: ಪವಿತ್ರಾ ಗೌಡ ಬಂಡವಾಳ ಬಿಚ್ಚಿಟ್ಟ ದರ್ಶನ್ ಪತ್ನಿ; ನ್ಯೂಸ್ಫಸ್ಟ್ನಲ್ಲಿ ಹೇಳಿಕೆಯ Exclusive ಡಿಟೇಲ್ಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ