newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕೊನೆಗೂ ವಿಚಾರಣೆಗೆ ಬಂದ ದರ್ಶನ್ ಆಪ್ತ ಮೋಹನ್ ರಾಜ್‌!

Share :

Published July 5, 2024 at 4:38pm

Update July 5, 2024 at 4:45pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ 17 ಆರೋಪಿಗಳು ಜೈಲು ಪಾಲು

  BBMP ಮಾಜಿ ಉಪಮೇಯರ್ ಮೋಹನ್​ರಾಜ್ ವಿಚಾರಣೆಗೆ ಹಾಜರ್

  ಹಣ ಕೊಟ್ಟ ಆರೋಪದಲ್ಲಿ ಮೋಹನ್​ರಾಜ್‌ ಅವರಿಗೆ ದೊಡ್ಡ ಸಂಕಷ್ಟ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​​ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೇ, 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಟ ದರ್ಶನ್​ ಜೈಲು ಪಾಲಾದ ದಿನದಿಂದ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ, ಹೊಸ ಟ್ವಿಸ್ಟ್ ಸಿಗುತ್ತಿದೆ. ಇದೀಗ ದರ್ಶನ್ ಅವರಿಗೆ 40 ಲಕ್ಷ ರೂಪಾಯಿ ಹಣ ಕೊಟ್ಟ ಆರೋಪ ಎದುರಿಸುತ್ತಿದ್ದ ಮೋಹನ್ ರಾಜ್ ಅವರು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ಚಿತ್ರರ್ದುಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ಬಗ್ಗೆ ಪೊಲೀಸ್​ ಅಧಿಕಾರಿಗಳು ಎಲ್ಲ ರೀತಿಯ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಈ ಕೊಲೆ ಕೇಸ್​ ಅನ್ನು ಮುಚ್ಚಿ ಹಾಕಲು ನಟ ದರ್ಶನ್​ಗೆ ಮೋಹನ್​ ರಾಜ್​ ಎಂಬುವವರು ಹಣ ನೀಡಿದ್ದರು ಅನ್ನೋ ಮಾಹಿತಿ ಕೇಳಿ ಬಂದಿದೆ. ಇದೀಗ ಹಣ ನೀಡಿದ್ದಕ್ಕೆ ಮಾಜಿ ಉಪಮೇಯರ್ ಮೋಹನ್​ರಾಜ್ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.

ಇದನ್ನೂ ಓದಿ: ಕೊಲೆಗೂ ಮುನ್ನ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ರಂತೆ.. ದರ್ಶನ್​ ಬರೋವರೆಗೂ ಏನೆಲ್ಲಾ ಮಾಡಿದ್ರು? 

ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧಪಟ್ಟಂತೆ ಮೋಹನ್​ ರಾಜ್​ ಅವರಿಗೆ ನೋಟಿಸ್ ಕೊಡಲಾಗಿದೆ. ಈ ಬೆನ್ನಲ್ಲೇ ಮೋಹನ್ ರಾಜ್ ಅವರು ವಿಚಾರಣೆಗಾಗಿ ಬಸವೇಶ್ವರ ನಗರ ಠಾಣೆಗೆ ಬಂದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶಕ್ಕಾಗಿ ನಟ ದರ್ಶನ್​ಗೆ ಮೋಹನ್​ ರಾಜ್​ ಅವರು 40 ಲಕ್ಷ ರೂಪಾಯಿ ಹಣ ನೀಡಿದ್ದರು. ಹೀಗಾಗಿ ಮೋಹನ್​ ರಾಜ್​ ಅವರು ಪೊಲೀಸರು ನೋಟಿಸ್​ ಕೊಟ್ಟ ಬೆನ್ನಲ್ಲೇ ವಿಚಾರಣೆಗೆ ಬಂದಿದ್ದಾರೆ.

ಯಾರು ಈ ಮೋಹನ್​ರಾಜ್? 

2019ರಿಂದ ನಟ ದರ್ಶನ್ ಹಾಗೂ ಮಾಜಿ ಮೇಯರ್ ರಾಮ್ ಮೋಹನ್ ರಾಜ್ ಗೆಳತನ ಇತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಮ್ ಮೋಹನ್ ರಾಜ್ ಅವರು ದರ್ಶನ್ ಜೊತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ರಾಮ್ ಮೋಹನ್ ರಾಜ್ ಹಾಗೂ ದರ್ಶನ್ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣೆ ಪ್ರಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆಗಾಗ ಬಿಬಿಎಂಪಿ ಮಾಜಿ ಉಪಮೇಯರ್ ತಮ್ಮ ವಾರ್ಡ್​ನ ಹಲವು ಕಾರ್ಯಕ್ರಮಗಳಿಗೂ ದರ್ಶನ್​ರನ್ನು ಅತಿಥಿಯಾಗಿ ಆಹ್ವಾನಿಸುತ್ತಿದ್ದರು. ಇದೇ ವರ್ಷ ಫೆಬ್ರವರಿ 20ರಂದು ತಮ್ಮ ವಾರ್ಡ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರ ಬಗ್ಗೆ ಹಾಡಿ ಹೊಗಳಿದ್ದರು. ನಮ್ಮೆಲ್ಲ ಒಂದು ದಿನದ ಆಯಸ್ಸು ‌ನಿಮಗೆ ನೀಡಬೇಕು ಅಂತ ಹೇಳಿದ್ದರಂತೆ ರಾಮ್ ಮೋಹನ್ ರಾಜ್. ರೇಣುಕಾಸ್ವಾಮಿ ಕೊಲೆ ಕೇಸ್​ ನಂತರ ದರ್ಶನ್​ಗೆ ಪ್ಲಾನ್ ಆಫ್ ಆಕ್ಷನ್ ಹೇಳಿ ಕೊಟ್ಟಿದ್ದೇ ರಾಮ್ ಮೋಹನ್ ರಾಜ್ ಎನ್ನುವ ಆರೋಪ ಇದೆ.

ಮೋಹನ್ ರಾಜ್ ಅವರು ಕೊಲೆಯಾದ ದಿನದಂದು ನಟ ದರ್ಶನ್ ಅವರನ್ನು ದಿನವಿಡೀ ತಮ್ಮ ವಾಹನದಲ್ಲಿ ಕೋರಿಸಿಕೊಂಡು ಓಡಾಡಿದ್ದರಂತೆ. ಅಷ್ಟೇ ಅಲ್ಲದೇ ರೇಣುಕಾಸ್ವಾಮಿಯನ್ನು ನಾವೇ ಕೊಲೆ ಮಾಡಿರೋದಾಗಿ ಎಂದು ಹೇಳಿದ್ದ ಆರೋಪಿಗಳಿಗೆ ಹಣ ನೀಡಲು ದರ್ಶನ್​ಗೆ 40 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎಂಬ ಆರೋಪ ಇದೆ. ದರ್ಶನ್ ಹಾಗೂ ರಾಮ್ ಮೋಹನ್ ರಾಜ್ ಸ್ನೇಹ ಶುರುವಾಗಲು‌ ಶಾಸಕ ಸತೀಶ್ ರೆಡ್ಡಿ ಅವರೇ ಮುಖ್ಯ ಕಾರಣವಂತೆ. ‌ಹಿಂದಿನಿಂದಲೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರಿಗೆ ದರ್ಶನ್ ಆಪ್ತರಾಗಿದ್ದರು. ತಮ್ಮ ನಾಯಕರ ಸ್ನೇಹಿತ ಆಗಿದ್ದರಿಂದ ಜೊತೆಯಲ್ಲೇ ರಾಮ್ ಮೋಹನ್ ರಾಜ್ ಇದ್ದರು. ಈ ಬಗ್ಗೆ ಹೆಚ್ಚಿನ‌ ಮಾಹಿತಿಗಾಗಿ ತನಿಖೆಗೆ ಹಾಜರಾಗುವಂತೆ ಮೋಹನ್ ರಾಜ್​ ಅವರಿಗೆ ನೋಟಿಸ್ ಕೊಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕೊನೆಗೂ ವಿಚಾರಣೆಗೆ ಬಂದ ದರ್ಶನ್ ಆಪ್ತ ಮೋಹನ್ ರಾಜ್‌!

https://newsfirstlive.com/wp-content/uploads/2024/07/darshan-mohan.jpg

Load More