newsfirstkannada.com

ರೇಣುಕಾ ಶವದ ಮೇಲಿದ್ದ ಚಿನ್ನವನ್ನೂ ಬಿಡದ ದರ್ಶನ್​ ಸಹಚರರು; ಹೇಯ ಕೃತ್ಯದ ಇಂಚಿಂಚು ಮಾಹಿತಿ ಇಲ್ಲಿದೆ

Share :

Published June 16, 2024 at 9:51pm

  ₹10 ಲಕ್ಷ.. ಸರ, ಉಂಗುರ, ಕಡಗದ ಜೊತೆ ಕಾಲ್ಕಿತ್ತಿದ್ದ ಐನಾತಿ 'ಹೆಂಡ್ತಿ'!

  ರೇಣುಕಾ ಕಿಡ್ನ್ಯಾಪ್​ ಮಾಡಿದ ರಾಘು ಮತ್ತವನ ಹೆಂಡ್ತಿ ಸಖತ್​ ಖತರ್ನಾಕ್​​

  ಚಿತ್ರದುರ್ಗದಲ್ಲಿ ಸ್ಥಳ ಮಹಜರಿಗೆ ಹೋಗಿದ್ದಾಗಲೂ ರಘು ಹೆಂಡ್ತಿಯಿಂದ ಕಳ್ಳಾಟ

ನಟ ದರ್ಶನ್ ಗ್ಯಾಂಗ್‌ ಅಟ್ಟಹಾಸಕ್ಕೆ ರೇಣುಕಾಸ್ವಾಮಿ ಉಸಿರು ಚೆಲ್ಲಿದ್ದಾನೆ. ನೆತ್ತರು ಮೆತ್ತಿದ್ದ ಡೆಡ್‌ಬಾಡಿಯನ್ನು ಎಸೆಯಲು ಹೋದ ಪಾಪಿಗಳು ಅಲ್ಲಿ ಮತ್ತೊಂದು ಹೇಯ ಕೃತ್ಯ ಎಸಗಿದ್ದಾರೆಂಬ ಆಘಾತಕಾರಿ ವಿಚಾರ ಬಯಲಾಗಿದೆ. ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ರೇಣುಕಾ ಡೆಡ್‌ಬಾಡಿಯ ಮೇಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿ ಅವುಗಳನ್ನು ಬಿಚ್ಚಿಕೊಂಡಿರೋ ಹೇಯ ಕೃತ್ಯದ ವಿಚಾರ ಬಯಲಾಗಿದೆ. ಆ ಪಾಪಿ ರಾಘವೇಂದ್ರನ ಮತ್ತವನ ಪತ್ನಿಯ ಮೋಸದ ಕಥೆಗಳೂ ತೆರೆದುಕೊಳ್ತಿವೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನ ತನಿಖೆಯಲ್ಲಿ ಸ್ಫೋಟಗೊಂಡಿರೋ ಚಿನ್ನದ ಕಳ್ಳರ ಕಹಾನಿ ಇಲ್ಲಿದೆ ನೋಡಿ.

ಕ್ರೌರ್ಯದ ಮದವೇರಿಸಿಕೊಂಡು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೆಡವಿ ಬಡಿದು ಕೊಂದ ಆರೋಪ ಹೊತ್ತಿರೋ ದರ್ಶನ್ ಗ್ಯಾಂಗ್‌ ಮೇಲೆ ಮತ್ತೊಂದು ಬೆಚ್ಚಿ ಬೀಳೀಸೋ ಆರೋಪ ಕೇಳಿ ಬಂದಿದೆ. ರೇಣುಕಾಸ್ವಾಮಿ ಅಂಗಲಾಚಿದ್ರೂ ಬಿಡದೆ ಮರ್ಮಾಂಗದ ಸಮೇತ ದೇಹದ ಒಂದು ಭಾಗವನ್ನೂ ಬಿಡದೇ ಥಳಿಸಿದ್ದ ದರ್ಶನ್ ಗ್ಯಾಂಗ್ ಕ್ರಿಮಿನಲ್‌ಗಳು ಡೆಡ್‌ಬಾಡಿಯನ್ನ ಮೋರಿಗೆ ಎಸೆದು ಸಾಕ್ಷಿ ನಾಶಕ್ಕೆ ಪ್ರಯತ್ನಿಸಿ ಏನೂ ಗೊತ್ತಿಲ್ಲವೆಂಬಂತೆ ತಮ್ಮ ತಮ್ಮ ಮನೆ ಸೇರಿದ್ದರು. ಆರೋಪಿಗಳೇ ಹೇಳ್ಕೊಂಡಿರುವಂತೆ ನಟ ದರ್ಶನ್ ಸ್ವಾಮಿಗೆ ಮಾರಣಾಂತಿಕವಾಗಿ ಬಡಿದು ಮೂರ್ಛೆ ಹೋಗುವ ಸ್ಥಿತಿಗೆ ತಂದು ಆತನ ದೇಹದಿಂದ ನೆತ್ತರು ಚಿಮ್ಮಿ ಉಸಿರು ನಿಲ್ತಿದ್ದಂತೆ ಗೆಳತಿ ಪವಿತ್ರಾಳ ಜೊತೆ ಕಾಲ್ಕಿತ್ತಿದ್ದ. ಇತ್ತ ಡೆಡ್‌ಬಾಡಿ ಸಾಗಿಸೋಕೆ ಸಹಚರರಿಗೆ ಹೇಳಿ ಮನೆಯತ್ತ ಹೋಗಿದ್ದ. ಆದ್ರೆ ಡೆಡ್‌ಬಾಡಿ ಸಾಗಿಸಲು ಹೋದ ಪಾಪಿಗಳು ಅಲ್ಲಿ ಮತ್ತೊಂದು ವಿಕೃತಿ ಮೆರೆದಿದ್ದಾರೆ. ಕ್ರೌರ್ಯದ ಮದವೇರಿದ್ದ ಕಿರಾತಕರು ಡೆಡ್‌ಬಾಡಿ ಮೇಲಿದ್ದ ಚಿನ್ನಾಭರಣಗಳನ್ನೂ ಕಿತ್ಕೊಂಡು ಡೆಡ್‌ಬಾಡಿಯನ್ನ ಅನಾಥವಾಗಿ ಎಸೆದು ಬಂದಿದ್ದರೆಂಬ ಶಾಕಿಂಗ್ ವಿಚಾರ ಬಯಲಾಗಿದೆ.

ಇದನ್ನೂ ಓದಿ: ಇವರನ್ನು ಸಪೋರ್ಟ್ ಮಾಡುವವರು ಗೂಬೆಗಳ ಹಾಗೇ ಕಾಣಿಸುತ್ತಾರೆ; ಸುದೀಪ್​​ ಹೀಗೆ ಹೇಳಿದ್ದು ಯಾರಿಗೆ? 

ಕೊಲೆ ಮಾಡಿದ ಪಾಪಿಗಳಿಗೆ ಭಯವೇ ಇರ್ಲಿಲ್ವಾ? ಒಂದು ಹೆಣ ಬೀಳಿಸಿಬಿಟ್ವಿ ಎಂಬ ಪಾಪಪ್ರಜ್ಞೆ, ಆತಂಕ, ಮುಂದೇನಾಗುತ್ತೋ ಎಂಬ ಭೀತಿಯೇ ಇರ್ಲಿಲ್ಲಾ? ನಮ್ಮ ಡಿ ಬಾಸ್ ಇದ್ದಾನೆ ನೋಡ್ಕೋತಾನೆ ಬಿಡು ಗುರು ಎಂಬ ಭ್ರಮೆಯಲ್ಲೇ ಇದ್ರಾ? ಇಂಥಾದ್ದೊಂದು ಪ್ರಶ್ನೆ, ಅನುಮಾನ ಹುಟ್ಟುವಂತೆ ಮಾಡಿರೋದು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸ್ಫೋಟಗೊಂಡಿರೋ ಅದೊಂದು ಶಾಕಿಂಗ್ ವಿಚಾರ.

ಯಾವಾಗ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾನ ಕೊಂದು ಮುಗಿಸಿದ್ರೋ ಲಕ್ಷ ಲಕ್ಷ ಡೀಲ್ ಮಾಡ್ಕೊಂಡು ಡೆಡ್‌ಬಾಡಿ ಎಸೆಯೋಕೆ ಮುಂದಾದರು. ಆ ಡೆಡ್‌ಬಾಡಿಯನ್ನ ಎಸೆಯಲು ಹೋದ ಗ್ಯಾಂಗ್‌ನಲ್ಲಿ ರಾಘವೇಂದ್ರ ಇದ್ದ. ಆ ರಾಘವೇಂದ್ರ ತನ್ನ ಗ್ಯಾಂಗ್ ಜೊತೆ ಡೆಡ್‌ಬಾಡಿ ಎಸೆಯೋ ವೇಳೆ ಶವವಾಗಿ ಮಲಗಿದ್ದ ರೇಣಕಾಸ್ವಾಮಿಯ ಮೈಮೇಲಿದ್ದ ಚಿನ್ನವನ್ನೂ ಬಿಟ್ಟಿಲ್ಲ. ರೇಣುಕಾಸ್ವಾಮಿಯ ಮೈಮೇಲಿದ್ದ ಚಿನ್ನದ ಉಂಗುರ, ಸರ, ಬೆಳ್ಳಿ ಕಡಗ, ವಾಚ್‌ಗಳನ್ನು ಬಿಚ್ಚಿಕೊಂಡು ತನ್ನ ಪತ್ನಿಗೆ ನೀಡಿದ್ನಂತೆ. ವಿಚಾರಣೆ ವೇಳೆ ಈ ಸತ್ಯ ಹೊರಬಿದ್ದಿದೆ.

ರೇಣುಕಾಸ್ವಾಮಿ ಮತ್ತು ಪತ್ನಿ ಸಹನಾಳ ಮದುವೆಗೆ ನೆನಪಾಗಿದ್ದ ಚಿನ್ನಾಭರಣಗಳನ್ನು ಆತ ಧರಿಸಿಕೊಂಡಿದ್ನಂತೆ. ಸರ, ಉಂಗುರ ಮತ್ತು ವಾಚ್‌ ಮದುವೆಯಲ್ಲಿ ಮಾಡಿಸಿಕೊಂಡಿದ್ದ ಆಭರಣಗಳಂತೆ. ಆ ಆಭರಣಗಳನ್ನೂ ಬಿಚ್ಚಿಕೊಂಡು ಡೆಡ್‌ಬಾಡಿಯನ್ನು ಮೋರಿಗೆ ಎಸೆದಿರೋ ಪಾಪಿಗಳ ಹೇಯ ಕೃತ್ಯ ಬಯಲಾಗಿದೆ.

ರೇಣುಕಾ ಶವದ ಮೇಲಿನ ಚಿನ್ನವನ್ನೂ ಬಿಡದ ದರ್ಶನ್​ ಸಹಚರರು!
₹10 ಲಕ್ಷ.. ಸರ, ಉಂಗುರ, ಕಡಗದ ಜೊತೆ ಕಾಲ್ಕಿತ್ತಿದ್ದ ಐನಾತಿ ‘ಹೆಂಡ್ತಿ’!
ಕಿಡ್ನ್ಯಾಪ್​ ಮಾಡಿದ ರಾಘು ಮತ್ತವನ ಹೆಂಡ್ತಿ ಸಖತ್​ ಖತರ್ನಾಕ್​​!
ಚಿತ್ರದುರ್ಗದ ರೇಣಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದಾಗ ಆತನ ದೇಹದ ಮೇಲೆ ಚಿನ್ನಾಭರಣಗಳಿದ್ವಂತೆ. ಚಿನ್ನದ ಉಂಗುರ, ಸರ, ಬೆಳ್ಳಿಯ ಕಡಗ, ವಾಚ್‌ಗಳನ್ನು ರೇಣುಕಾಸ್ವಾಮಿ ಧರಿಸಿದ್ನಂತೆ. ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಗ್ಯಾಂಗ್‌ನಿಂದ ಅವನು ಹತ್ಯೆಯಾದ ಸಂದರ್ಭದಲ್ಲಿ ಆತನ ಮೈಮೇಲೆ ಚಿನ್ನಾಭರಣ ಇದ್ವಂತೆ. ಆದ್ರೆ ಸಾಯುವಂತೆ ಬಡಿದು ಕೊಂದ ಬಳಿಕ ಡೆಡ್‌ಬಾಡಿಯನ್ನು ಮೋರಿಗೆ ಎಸೆಯಲು ಹೋದಾಗ ರಾಘವೇಂದ್ರನ ಕಣ್ಣಿಗೆ ಚಿನ್ನಾಭರಣಗಳು ಬಿದ್ವಂತೆ.

ಇದನ್ನೂ ಓದಿ: VIDEO: ‘ಆ ಹೆಣ್ಣಿಗೆ, ಹುಟ್ಟಬೇಕಿರುವ ಮಗುವಿಗೆ ನ್ಯಾಯ ಸಿಗಬೇಕು’- ಕಿಚ್ಚ ಸುದೀಪ್‌  

ಅರೆರೆ… ಹೆಂಗಿದ್ರೂ ಈತನನ್ನ ಕೊಂದುಬಿಟ್ವಿ, ಮೋರಿಗೆ ಎಸೆದು ಹೋಗೋಕೆ ಬಂದಿದ್ದೀವಿ. ಇವನ ಮೈಮೇಲಿರೋ ಚಿನ್ನಾಭರಣಗಳನ್ನು ಹಾಗೆ ಬಿಟ್ರೆ ಬೇರೆ ಯಾರ ಕೈಗಾದ್ರೂ ಸಿಕ್ಕಿ ಬಿಡುತ್ವೆ. ತಿನ್ನೋದಾದ್ರೆ ನಾವೇ ತಿಂದು ಬಿಡೋಣ ಎಂದುಕೊಂಡ ರಾಘವೇಂದ್ರ ಸತ್ತು ಮಲಗಿದ್ದ ರೇಣುಕಾಸ್ವಾಮಿಯ ಮೈಮೇಲೆ ಕೈ ಹಾಕಿದ್ದನಂತೆ. ರೇಣುಕಾಸ್ವಾಮಿ ಹಾಕಿದ್ದ ಉಂಗುರು, ಸರ, ಬೆಳ್ಳಿ ಕಡಗವನ್ನು ಬಿಚ್ಚಿಕೊಂಡು ಜೇಬಲ್ಲಿ ಇಟ್ಕೊಂಡನಂತೆ. ಅಷ್ಟೇ ಅಲ್ಲ.. ರೇಣುಕಾ ಕಟ್ಟಿಕೊಂಡಿದ್ದ ವಾಚನ್ನೂ ಬಿಡದೆ ಕಿತ್ತಿಟ್ಟಿಕೊಂಡ ರಾಘವೇಂದ್ರ ಶವದ ಎದುರೇ ತನ್ನ ನೀಚ ಬುದ್ಧಿ ತೋರ್ಸಿದ್ದನಂತೆ.

ಇನ್ನೂ ವಿಚಿತ್ರ ಏನ್ ಗೊತ್ತಾ? ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆತಂದಿದ್ದ ರಾಘವೇಂದ್ರ ಪಟ್ಟಣಗೆರೆ ಶೆಡ್‌ನಲ್ಲಿ ಆ ನಡುರಾತ್ರಿ ಹೊಸ ವರಸೆ ತಕ್ಕೊಂಡು ಕೂತಿದ್ನಂತೆ. ತಾನು ಕಿಡ್ನಾಪ್ ಮಾಡಿ ಕರ್ಕೊಂಡು ಬಂದಿದ್ದ ರೇಣುಕಾಸ್ವಾಮಿಯ ಹೆಣ ಬೀಳ್ತಿದ್ದಂತೆ ರಾಘವೇಂದ್ರನ ತೊಡೆ ನಡುಗಲು ಶುರುವಾಗಿತ್ತಂತೆ. ರೇಣುಕಾ ಹತ್ಯೆಯ ಬಳಿಕ ಭಯದಲ್ಲಿ ಮುಳುಗಿದ್ದ ರಾಘವೇಂದ್ರ ಶೆಡ್‌ನಿಂದಲೇ ಪರಾರಿಯಾಗಿದ್ನಂತೆ. ತಗ್ಲಾಕ್ಕೊಂಡ್ರೆ ಬದುಕೇ ಬರ್ಬಾದ್ ಆಗುತ್ತೆ ಅನ್ಕೊಂಡು ಯಾರಿಗೂ ಹೇಳದೇ ಕೇಳದೆ ನಾಪತ್ತೆಯಾಗಿದ್ನಂತೆ. ರಘು ಎಲ್ಲೋ ಎಲ್ಲೋದ ಹುಡುಕಾಡಿದ ನಟ ದರ್ಶನನ ಗ್ಯಾಂಗ್‌ಗೆ ಶಾಕ್ ಎದುರಾಗಿತ್ತು. ರಾಘವೇಂದ್ರ ಪರಾರಿಯಾಗಿದ್ದಾನೆ ಅನ್ನೋದು ಗೊತ್ತಾಗ್ತಿದ್ದಂತೆ ಹುಡುಕಾಟ ಆರಂಭಿಸಿದ್ರಂತೆ.

ಸ್ವಲ್ಪ ಹೊತ್ತಿನ ಬಳಿಕ ದರ್ಶನ್‌ ಗ್ಯಾಂಗ್‌ಗೆ ರಾಘವೇಂದ್ರ ಫೋನ್ ಸಂಪರ್ಕಕ್ಕೆ ಸಿಕ್ಕಿದ್ದನಂತೆ. ಏನೂ ಆಗೋಲ್ಲ.. ಎಲ್ಲಾ ಡಿ ಬಾಸ್ ನೋಡ್ಕೋತಾರೆ ತಲೆ ಕೆಡಿಸ್ಕೋಬೇಡ ಅಂತ ಅಭಯ ನೀಡಿದ್ದ ದರ್ಶನ್ ಸಹಚರರರು. 10 ಲಕ್ಷ ರೂಪಾಯಿ ಆಫರ್‌ ಅನ್ನೂ ರಾಘವೇಂದ್ರನ ಮುಂದಿಟ್ಟಿದ್ರಂತೆ. ಡಿಬಾಸ್ ನೋಡ್ಕೋತಾರೆ ಎಂಬ ಅಭಯ 10 ಲಕ್ಷದ ಆಮಿಷದ ಆಸೆಗೆ ಬಿದ್ದ ರಾಘವೇಂದ್ರ ಅಲ್ಲೊಂದು ಭಯದಲ್ಲೂ ಒಂದು ಖತರ್ನಾಕ್ ಪ್ಲಾನ್ ಮಾಡಿದ್ನಂತೆ. ಶೆಡ್‌ಗೆ ವಾಪಸ್ ಬರೋ ಮುನ್ನವೇ ಚಿತ್ರದುರ್ಗಕ್ಕೆ ಫೋನ್ ಮಾಡಿದ್ದ. ಪತ್ನಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ನಂತೆ.

ಗಂಡನ ಹುಕುಂನಂತೆ ರಾಘವೇಂದ್ರನ ಪತ್ನಿ ಬೆಂಗಳೂರಿಗೆ ಬಂದು ಇಲ್ಲೊಂದು ಲಾಡ್ಜ್​ನಲ್ಲಿ ತಂಗಿದ್ದಳು. ಇತ್ತ ರಾಘವೇಂದ್ರ ಶೆಡ್‌ಗೆ ಬಂದು ಡೆಡ್‌ಬಾಡಿಯನ್ನು ಎಸೆಯೋದಕ್ಕೆ ಗ್ಯಾಂಗ್ ಕರ್ಕೊಂಡು ಹೊರಟನಂತೆ. ಇನ್ನೇನು ರೇಣುಕಾಸ್ವಾಮಿಯ ಶವವನ್ನು ಮೋರಿಗೆ ಎಸೆಯೋದ್ರಲ್ಲಿ ಚಿನ್ನಾಭರಣಗಳ ಮೇಲೆ ರಾಘವೇಂದ್ರನ ಕಣ್ಣು ಬಿದ್ದಿತ್ತು. ಹಿಂದೆ ಮುಂದೆ ಯೋಚಿಸದೆ ಮೈಮೇಲಿದ್ದ ಚಿನ್ನಾಭರಣಗಳನ್ನು ಬಿಚ್ಚಿಕೊಂಡ ರಾಘವೇಂದ್ರ ಆ ಒಡವೆಗಳನ್ನ ಪತ್ನಿಗೆ ಕೊಟ್ಟಿದ್ನಂತೆ. ಅಲ್ಲದೆ,, ಡಿ ಬಾಸ್ ಸಹಚರರು ನೀಡಿದ್ದ 10 ಲಕ್ಷ ರೂಪಾಯಿಯನ್ನೂ ಹೆಂಡ್ತಿಯ ಕೈಗಿಟ್ಟಿದ್ನಂತೆ.

ಆಭರಣ.. ₹10 ಲಕ್ಷದ ಜೊತೆ ಚಿತ್ರದುರ್ಗಕ್ಕೆ ರಘು ಪತ್ನಿ ಪರಾರಿ!
ಸ್ಥಳ ಮಹಜರಿಗೆ ಹೋಗಿದ್ದಾಗಲೂ ರಘು ಹೆಂಡ್ತಿಯಿಂದ ಕಳ್ಳಾಟ!
ಹತ್ಯೆಯಾದ ರೇಣುಕಾಸ್ವಾಮಿಯ ಮೈಮೇಲಿದ್ದ ಚಿನ್ನಾಭರಣಗಳನ್ನು ಬಿಚ್ಚಿಕೊಂಡಿದ್ದ ರಘು ತನ್ನ ಪತ್ನಿಗೆ ನೀಡಿದ್ದನೆಂಬ ಮಾಹಿತಿ ಸಿಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದರು. ರಘು ಸಮೇತ ಹಲವಾರು ಆರೋಪಿಗಳನ್ನು ಕರೆದುಕೊಂಡು ಚಿತ್ರದುರ್ಗಕ್ಕೆ ಹೋಗಿ ಸ್ಥಳ ಮಹಜರಿಗೆ ಮುಂದಾಗಿದ್ರು. ಈ ವೇಳೆ ಆ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳೋಕೆ ಪೊಲೀಸರು ಹರಸಾಹಸ ಮಾಡಿದ್ದಾರೆ. ಯಾಕಂದ್ರೆ ಪೊಲೀಸರು ಸ್ಥಳ ಮಹಜರಿಗೆ ಬರ್ತಿರೋದು ತಿಳಿಯುತ್ತಿದ್ದಂತೆ ರಘು ಪತ್ನಿ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಳಂತೆ. ಆಕೆಗಾಗಿ ಪೊಲೀಸರು 11 ಗಂಟೆ ಹುಡುಕಾಡಿದ್ರಂತೆ. ಅಲ್ಲದೆ, ಚಿನ್ನಾಭರಣಗಳನ್ನು ಗಿರವಿ ಅಂಗಡಿಗೇನಾದ್ರೂ ಮಾರಿಬಿಟ್ಟಿದ್ದಾಳಾ ಎಂಬ ಗುಮಾನಿಯೊಂದಿಗೆ ಹಲವಾರು ಗಿರವಿ ಅಂಗಡಿಗಳಲ್ಲೂ ತಲಾಶ್ ಮಾಡಿದ್ರಂತೆ.

ಚಿನ್ನಾಭರಣಗಳ ಜೊತೆ ಪರಾರಿಯಾಗಿದ್ದ ರಾಘವೇಂದ್ರನ ಪತ್ನಿಗೆ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಲೊಕೇಷನ್ ಆಧರಿಸಿ ಆಕೆಯಿದ್ದ ಜಾಗವನ್ನು ಪತ್ತೆ ಮಾಡಿದ್ರು. ಆಕೆ ಮನೆಗೆ ಬರ್ತಿದ್ದಂತೆ ನಗದು ಮತ್ತು ಚಿನ್ನಾಭರಣಗಳನ್ನು ಸೀಜ್ ಮಾಡಿದ್ದಾರೆಂಬು ಮಾಹಿತಿ ಸಿಕ್ಕಿದೆ. ಈ ಬೆನ್ನಲ್ಲೇ ಚಿತ್ರದುರ್ಗ ಡಿಬಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದ ಈ ರಾಘವೇಂದ್ರ ಮತ್ತವನ ಹೆಂಡ್ತಿಯ ಖತರ್ನಾಕ್ ಕೆಲಸಗಳ ಬಗ್ಗೆಯೂ ಶಾಕಿಂಗ್ ವಿಚಾರಗಳು ಬಯಲಾಗ್ತಿವೆ. ರಾಘವೇಂದ್ರ ಮತ್ತವನ ಪತ್ನಿ ಖತರ್ನಾಕ್ ಗಂಡ-ಹೆಂಡ್ತಿ ಎನ್ನಲಾಗಿದೆ.

ಚೀಟಿಂಗ್ ಕೇಸ್.. ದೋಖಾ.. ಫ್ಯಾನ್ಸ್‌ಗಳಿಂದ ಹಣ ವಸೂಲಿ!
ರಘು ಮತ್ತವನ ಪತ್ನಿಯ ಮೇಲಿದೆ ಮೋಸದ ಆರೋಪ!
ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್​ ಮಾಡುವಲ್ಲಿ ಮಾಸ್ಟರ್‌ಮೈಂಡ್ ಆಗಿದ್ದ ರಘು ಅಲಿಯಾಸ್ ರಾಘವೇಂದ್ರ ಹಾಗೂ ಆತನ ಪತ್ನಿ ಇಬ್ಬರೂ ಭಲೇ ಖತರ್ನಾಕ್​ಗಳು ಎನ್ನಲಾಗಿದೆ. ಚಿತ್ರದುರ್ಗದಲ್ಲಿ ರಘು ಮೇಲೆ ಚೀಟಿಂಗ್​ ಕೇಸ್​ ಇದ್ಯಂತೆ ಜೊತೆಗೆ ಅವನ ಪತ್ನಿ ಮೇಲೂ ದುಡ್ಡಿಗೆ ಮೋಸ ಮಾಡಿರೋ ಆರೋಪವಿದೆಯಂತೆ. ಇನ್ನು, ದರ್ಶನ್​ ಪರಿಚಯವನ್ನೇ ಬಂಡವಾಳ ಮಾಡಿಕೊಂಡಿದ್ದ ರಘು.. ಡಿ ಬಾಸ್​ ಜೊತೆಗೆ ಫೋಟೋ ತೆಗೆಸುತ್ತೇನೆ ಅಂತಾ ಸಾಕಷ್ಟು ಜನರ ಬಳಿ ಹಣಪಡೆದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಕಂಬಿ ಹಿಂದೆ ದರ್ಶನ್.. ಮಾಧ್ಯಮ, ಪೊಲೀಸರ ಕಾರ್ಯಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ; ಏನಂದ್ರು? 

ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು.. ಈ ರಾಘವೇಂದ್ರ ದರ್ಶನ್ ಜೊತೆಗಿನ ಫೋಟೋಗಳನ್ನ ತೋರಿಸಿ ಅಮಾಯಕ ಯುವಕರಿಗೆ ದರ್ಶನ್ ಬಳಿ ಕರ್ಕೊಂಡು ಹೋಗುವ ಆಮಿಷ ತೋರಿಸ್ತಿದ್ನಂತೆ. ಆಗ ದರ್ಶನ್ ಜೊತೆಗಿನ ಫೋಟೋ ಆಸೆಗೆ ಅಮಾಯಕ ಯುವಕರು ರಾಘವೇಂದ್ರನ ಜೊತೆ ಹೋಗ್ತಿದ್ರಂತೆ. ರಾಘವೇಂದ್ರನಿಗೆ ಹಣ ಕೊಟ್ಟು ಜೊತೆಗೆ ಬಾಡಿಗೆ ಕಾರು ಊಟ ತಿಂಡಿ ಮದ್ಯ ಎಲ್ಲ ವ್ಯವಸ್ಥೆ ಮಾಡಿದ್ರೆ ಆಗ ದರ್ಶನ್ ಭೇಟಿಗೆ ಯುವಕರನ್ನ ಕರ್ಕೊಂಡು ಬರ್ತಿದ್ನಂತೆ.

ವಾರಗಟ್ಟಲ್ಲೇ ಕಾಯಿಸಿ ದರ್ಶನ್ ಸಿಕ್ಕರೆ ಭೇಟಿ.. ಇಲ್ಲವಾದ್ರೆ ಮುಂದಿನ ಬಾರಿ ಭೇಟಿ ಮಾಡಿಸೋದಾಗಿ ವಾಪಸ್ ಕರೆದುಕೊಂಡು ಬರ್ತಿದ್ನಂತೆ. ಈ ರಘುವನ್ನ ನಂಬಿ ಚಿತ್ರದುರ್ಗದ ಅದೆಷ್ಟು ಯುವಕ ಹಣ ಕಳೆದುಕೊಂಡಿರುವ ಆರೋಪ ಕೂಡ ಇದೆ. ಇದಷ್ಟೆ ಅಲ್ಲ ದರ್ಶನ್ ಸಂಘದ ಅಧ್ಯಕ್ಷ ದರ್ಶನ್ ಹುಟ್ಟುಹಬ್ಬ ,ಗಣೇಶ್ ಹಬ್ಬ, ಜಾತ್ರೆ ಸಮಾರಂಭ ಆಯೋಜಿಸಿ, ಸ್ಥಳೀಯ ಜನಪ್ರತಿನಿಧಿಗಳೂ ಆಟೋ ಚಾಲಕರಿಂದ ಹಣ ವಸೂಲಿ ಮಾಡ್ತಿದ್ನಂತೆ. ಹೀಗೆ ದೋಖಾ ಮಾಡೋದನ್ನೇ ಕಸುಬು ಮಾಡ್ಕೊಂಡಿದ್ದ ರಾಘವೇಂದ್ರ ಈಗ ತನ್ನ ಬಾಸ್ ಜೊತೆ ಲಾಕ್ ಆಗಿದ್ದಾನೆ.. ಪರಮಕ್ರೂರ ಕೃತ್ಯ ಎಸಗಿ ತನ್ನ ಬದುಕಿಗೆ ತಾನೇ ಚಪ್ಪಡಿ ಎಳ್ಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾ ಶವದ ಮೇಲಿದ್ದ ಚಿನ್ನವನ್ನೂ ಬಿಡದ ದರ್ಶನ್​ ಸಹಚರರು; ಹೇಯ ಕೃತ್ಯದ ಇಂಚಿಂಚು ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2024/06/DARSHAN_2_AIDE.jpg

Load More