newsfirstkannada.com

ವಿಶ್ವಕಪ್​ನಲ್ಲಿ ಅತೀ ದೊಡ್ಡ ಸಿಕ್ಸರ್ ಬಾರಿಸಿ ದಾಖಲೆ ಬರೆದ ಮಿಚೆಲ್.. ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ..?

Share :

16-11-2023

  ಅಯ್ಯರ್ ದಾಖಲೆ ಮುರಿದ ನ್ಯೂಜಿಲೆಂಡ್ ಆಟಗಾರ

  ನಿನ್ನೆ ನಡೆದ ಸೆಮಿಫೈನಲ್​ನಲ್ಲಿ ಬಿಗೆಸ್ಟ್ ಸಿಕ್ಸರ್​​ ದಾಖಲು

  ನ್ಯೂಜಿಲೆಂಡ್ ಬಗ್ಗು ಬಡಿದು ಫೈನಲ್​​ಗೆ ಭಾರತ ಎಂಟ್ರಿ

ನಿನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ ಹಲವು ದಾಖಲೆಗಳಿಗೆ ಸಾಕ್ಷಿ ಆಯಿತು. ನ್ಯೂಜಿಲೆಂಡ್ ತಂಡದ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಡೇರಿಲ್ ಮಿಚೆಲ್ ಅವರು ಅತಿದೊಡ್ಡ ಸಿಕ್ಸರ್ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

ರವೀಂದ್ರ ಜಡೇಜಾ ಎಸೆದ 27ನೇ ಓವರ್​​ನಲ್ಲಿ ಬರೋಬ್ಬರಿ 107 ಮೀಟರ್​ ದೂರ ಸಿಕ್ಸರ್ ಬಾರಿಸುವ ಮೂಲಕ ಹೊಸ ದಾಖಲೆ ಬರೆದರು. ಜಡೇಜಾ ಎಸೆದ ಟಾಸ್ಡ್​-ಅಪ್ ಬಾಲ್​​ಗೆ ಸಿಕ್ಸ್ ಹೊಡೆದು ಈ ಸಾಧನೆ ಮಾಡಿದರು. ಈ ಮೂಲಕ 2023ರ ವಿಶ್ವಕಪ್​ನಲ್ಲಿ ಹೆಚ್ಚು ದೂರಕ್ಕೆ ಸಿಕ್ಸರ್ ಬಾರಿಸಿದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದ ಆಟಗಾರ ಶ್ರೇಯಸ್ ಅಯ್ಯರ್ 106 ಮೀಟರ್​ ದೂರಕ್ಕೆ ಸಿಕ್ಸರ್ ಬಾರಿಸಿದ್ದರು. ಅಯ್ಯರ್ ಹೆಸರಲ್ಲಿದ್ದ ಸಿಕ್ಸರ್​​ ದಾಖಲೆಯನ್ನು ಮಿಚೆಲ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ತಂಡದ ಮ್ಯಾಕ್ಸ್​ವೆಲ್ 104 ಮೀಟರ್ ದೂರಕ್ಕೆ ಸಿಕ್ಸರ್ ಬಾರಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ 104 ಮೀಟರ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಅಯ್ಯರ್ 101 ಮೀಟರ್ ದೂರ ಬಾರಿಸಿದ ಸಿಕ್ಸರ್ ದಾಖಲೆಯಾಗಿ ಉಳಿದಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ನಲ್ಲಿ ಅತೀ ದೊಡ್ಡ ಸಿಕ್ಸರ್ ಬಾರಿಸಿ ದಾಖಲೆ ಬರೆದ ಮಿಚೆಲ್.. ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ..?

https://newsfirstlive.com/wp-content/uploads/2023/11/Daryl-Mitchell.jpg

Load More