ದುಬಾರಿ ದಶಪಥ ಟೋಲ್ಗೆ ವಾಹನ ಸವಾರರು ಫುಲ್ ಶಾಕ್
ವಿರೋಧದ ನಡುವೆಯೂ ಶುಲ್ಕ ಸಂಗ್ರಹಕ್ಕೆ NHAI ತಯಾರಿ..!
ಮಂಡ್ಯದ ಗಣಂಗೂರು ಟೋಲ್ನಲ್ಲಿ ಶುಲ್ಕ ಸಂಗ್ರಹಿಸಲು ಸಿದ್ಧತೆ
ಮಂಡ್ಯ: ದಶಪಥ ಹೆದ್ದಾರಿಯಲ್ಲಿ ವಾಹನಗಳು ಸಂಚಾರ ಮಾಡುವುದು ಮತ್ತಷ್ಟು ದುಬಾರಿಯಾಗಿದ್ದು ಸವಾರರ ಜೇಬಿಗೆ ಕತ್ತರಿ ಹಾಕಲು ತಯಾರಿ ನಡೆದಿದೆ. ಇಂದು ದಶಪಥ ಹೆದ್ದಾರಿಯ 2ನೇ ಟೋಲ್ ಆರಂಭವಾಗಿದ್ದು ವಿರೋಧದ ನಡುವೆಯೂ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು 2 ಟೋಲ್ನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ 2ನೇ ಟೋಲ್ ಪ್ರಾರಂಭವಾಗಿದೆ. ಈ ಟೋಲ್ನಲ್ಲಿ ವಾಹನ ಸವಾರರಿಂದ ಶುಲ್ಕ ಸಂಗ್ರಹಿಸಲು NHAI ಸಿದ್ಧತೆ ನಡೆಸಿಕೊಂಡಿದೆ. ಇದಕ್ಕೆ ಮಂಡ್ಯ ಭಾಗದ ಶಾಸಕರು ಹಾಗೂ ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ.
ವಾಹನ ಸವಾರರು ಹೇಳುವುದೇನು?
NHAI ನಡೆಗೆ ಮಂಡ್ಯ ಶಾಸಕರು, ವಾಹನ ಸವಾರರು ಸೇರಿದಂತೆ ಸ್ಥಳೀಯರು ಕಿಡಿ ಕಾರಿದ್ದಾರೆ. ಈಗ ತಾನೆ ರಾಮನಗರದ ಕಣಮಿಣಕಿ ಟೋಲ್ ಆರಂಭ ಮಾಡಲಾಗಿದೆ. ಈಗಾಗಲೇ ಇಲ್ಲಿ ಶುಲ್ಕ ಪಾವತಿ ಮಾಡಲಾಗುತ್ತಿದೆ. ದಶಪಥ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ರೂ ಒಂದು ಟೋಲ್ನ ಶುಲ್ಕ ಹೊರೆ ಬೀಳುತ್ತಿದೆ. ಈ ಹೊತ್ತಿನಲ್ಲಿ 2 ಟೋಲ್ ಶುರು ಮಾಡಿ ವಸೂಲಿ ಮಾಡುವುದು ಸರಿಯಲ್ಲ ಎಂದು ಸವಾರರು ಹೇಳುತ್ತಿದ್ದಾರೆ. ಹೀಗಾಗಿ ಇಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ