ಫೋನ್ ನಂಬರ್, ಆಧಾರ್ ನಂಬರ್, ಪಾಸ್‌ಪೋರ್ಟ್ ವಿವರ ಮಾರಾಟ!
ಕೊರೊನಾ RTPR, ಱಪಿಡ್, ಸ್ಯಾಂಪಲ್ ಟೆಸ್ಟ್‌ಗೆ ನೀವೇನಾದ್ರು ಒಳಗಾಗಿದ್ರಾ?
ಕೊನೆಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸರ್ವರ್ ಹ್ಯಾಕ್
ನವದೆಹಲಿ: ಕೊರೊನಾ ಅನ್ನೋ ಸಾಂಕ್ರಾಮಿಕ ರೋಗ ಜೀವ ಹಿಂಡುತ್ತಿದ್ದಾಗ ಇಡೀ ದೇಶವೇ ಸಂಕಷ್ಟಕ್ಕೆ ಗುರಿಯಾಗಿತ್ತು. ಆಗ RTPR, ಱಪಿಡ್, ಸ್ಯಾಂಪಲ್ ಟೆಸ್ಟ್‌ಗೆ ನೀವೇನಾದ್ರು ಒಳಗಾಗಿದ್ರಾ? ಅಥವಾ ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡಿದ್ದೀರಾ? ಹಾಗಿದ್ರೆ ನೀವು ನಿಮ್ಮ ಫೋನ್ ನಂಬರ್, ಆಧಾರ್ ನಂಬರ್, ಪಾಸ್‌ಪೋರ್ಟ್ ವಿವರ, ಮನೆ ವಿಳಾಸದ ಮಾಹಿತಿಯನ್ನು ಕೊಟ್ಟಿರ್ತೀರಾ. ನಿಮ್ಮ ಈ ಎಲ್ಲಾ ಡೇಟಾ ಈಗ ಆನ್‌ಲೈನ್‌ನಲ್ಲಿ ಮಾರಾಟಕ್ಕಿದೆ.
ಆಶ್ಚರ್ಯ, ಆಘಾತದ ಸುದ್ದಿಯಾದ್ರೂ ಇದು ನಿಜ. ನೀವು ಕೊರೊನಾ ಸ್ಯಾಂಪಲ್ ಟೆಸ್ಟ್‌ಗೆ ಒಳಗಾಗಿದ್ರಾ ಹಾಗಿದ್ರೆ ನಿಮ್ಮ ಎಲ್ಲ ಡೇಟಾ ಈಗ ಆನ್‌ಲೈನ್‌ನಲ್ಲಿ ಮಾರಾಟಕ್ಕಿದೆ. ಇದು ದೇಶದ ಅತಿ ದೊಡ್ಡ ಡಾಟಾ ಸೋರಿಕೆಯಾಗಿದೆ. ದೇಶದ 81.5 ಕೋಟಿ ಜನರ ವೈಯಕ್ತಿಕ ಮಾಹಿತಿಯ ಡೇಟಾ ಸೋರಿಕೆಯಾಗಿದೆ. ಭಾರತೀಯರ ಹೆಸರು, ಆಧಾರ್ ನಂಬರ್, ಪಾಸ್ ಪೋರ್ಟ್ ವಿವರ, ಪೋನ್ ನಂಬರ್, ಮನೆ ವಿಳಾಸದ ಮಹತ್ವದ ಮಾಹಿತಿಗಳೇ ಈಗ ಆನ್‌ಲೈನ್‌ನಲ್ಲಿ ಮಾರಾಟಕ್ಕಿದೆ.
ICMR ಸರ್ವರ್ ಹ್ಯಾಕ್ ಮಾಡಿದ ಹ್ಯಾಕರ್ಸ್!
ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲೇ ಹೋದರೂ RTPR, ಸ್ಯಾಂಪಲ್ ಟೆಸ್ಟ್ ಕಡ್ಡಾಯವಾಗಿತ್ತು. ಕೋವಿಡ್ ನೆಗೆಟಿವ್ ಟೆಸ್ಟ್ ರಿಪೋರ್ಟ್‌ಗಳನ್ನ ತೋರಿಸಲು ಕೇಂದ್ರ ಸರ್ಕಾರವೇ ನಿರ್ದೇಶನ ನೀಡಿತ್ತು. ಈ ವೇಳೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಂದ್ರೆ ICMRಗೆ ಕೋಟ್ಯಾಂತರ ಮಂದಿ ಭಾರತೀಯರು ತಮ್ಮ ಮಾಹಿತಿಯನ್ನು ನೀಡಿದ್ದರು. ICMR ಭಾರತೀಯರ ಆ ಮಹತ್ವದ ಮಾಹಿತಿಗಳನ್ನು ತನ್ನ ಸರ್ವರ್‌ನಲ್ಲಿ ದಾಖಲಿಸಿತ್ತು.
ಹೌದು.. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸರ್ವರ್ ಅನ್ನೇ ಹ್ಯಾಕರ್ಸ್‌ಗಳೇ ಹ್ಯಾಕ್ ಮಾಡಿದ್ದಾರೆ. ಐಸಿಎಂಆರ್ ಸರ್ವರ್‌ನಿಂದಲೇ ದೇಶದ 81.5 ಕೋಟಿ ಜನರ ಡೇಟಾ ಕಳವು ಮಾಡಲಾಗಿದೆ. ಇದು ಇಡೀ ದೇಶಕ್ಕೆ ಆಘಾತಕಾರಿಯಾದ ಸುದ್ದಿಯಾಗಿದೆ. ಸದ್ಯದಲ್ಲೇ ಈ ಡೇಟಾ ಸೋರಿಕೆ ಬಗ್ಗೆ ICMR ಸಿಬಿಐಗೆ ದೂರು ನೀಡುವ ಸಾಧ್ಯತೆ ಇದೆ. ಐಸಿಎಂಆರ್ ದೂರು ನೀಡಿದ ಬಳಿಕ ಸಿಬಿಐ ತನಿಖೆ ನಡೆಸಲಿದೆ.
ದೇಶದ ಜನರ ಡೇಟಾ ಮಾರಾಟಕ್ಕೆ!
81.5 ಕೋಟಿ ಭಾರತೀಯರ ಹೆಸರು, ಆಧಾರ್ ನಂಬರ್, ಪಾಸ್ ಪೋರ್ಟ್ ವಿವರ, ಪೋನ್ ನಂಬರ್, ಮನೆ ವಿಳಾಸದಂತ ಮಹತ್ವದ ಮಾಹಿತಿ ಸೋರಿಕೆಯಾಗಿದೆ. ಥ್ರೆಟ್ ಆಕ್ಟರ್ ಹೆಸರಿನ ಆನ್‌ಲೈನ್ ಹ್ಯಾಂಡಲ್‌ನಲ್ಲಿ ದೇಶದ ಜನರ ಮಹತ್ವದ ಡೇಟಾ ಮಾರಾಟಕ್ಕಿದೆ. ಕಳೆದ ವರ್ಷವೇ ಬರೋಬ್ಬರಿ 6 ಸಾವಿರ ಬಾರಿ ಐಸಿಎಂಆರ್ ಸರ್ವರ್ ಹ್ಯಾಕ್‌ಗೆ ವಿಫಲ ಯತ್ನ ನಡೆದಿತ್ತು. ಈಗ ಐಸಿಎಂಆರ್ ಸರ್ವರ್ ಹ್ಯಾಕ್ ಮಾಡುವಲ್ಲಿ ಹ್ಯಾಕರ್ ಸಕ್ಸಸ್ ಹಾಕಿದ್ದಾರೆ. ಈ ಮಹತ್ವದ ಮಾಹಿತಿಯನ್ನು ದುಡ್ಡಿಗಾಗಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಹ್ಯಾಕರ್ ವಿರುದ್ಧ ಐಸಿಎಂಆರ್ ಯಾವ ರೀತಿಯ ದೂರು ಕೊಡುತ್ತೆ. ಈ ಡೇಟಾ ಸೋರಿಕೆ ಪ್ರಕರಣ ಮುಂದೇನಾಗುತ್ತೋ ಅನ್ನೋ ಚಿಂತೆ ಕಾಡತೊಡಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ