ಸಿಬ್ಬಂದಿಯ ಲೈಸನ್ಸ್ ಕ್ಯಾನ್ಸಲ್ ಮಾಡುವಂತೆ ಒತ್ತಾಯ..!
ಪಡಿತರ ನೀಡುವ ಸಿಬ್ಬಂದಿ ಕಳ್ಳಾಟ ಕ್ಯಾಮೆರಾದಲ್ಲಿ ಸೆರೆ
250ಕ್ಕೂ ಅಧಿಕ ಕಾರ್ಡ್ಗಳನ್ನ ಹೊಂದಿರುವ 4 ಗ್ರಾಮಗಳು
ದಾವಣಗೆರೆ: ಅನ್ನಭಾಗ್ಯ ಯೋಜನೆಯಡಿ ಪಡಿತರ ನೀಡುತ್ತಿದ್ದ ಸಿಬ್ಬಂದಿ ಪ್ರತಿ ಕಾರ್ಡ್ಗೆ 1 ಕೆ.ಜಿ ಅಕ್ಕಿ ಕದಿಯುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪ ಎನ್ನುವರು ಫಲಾನುವಿಗಳಿಗೆ ಗೊತ್ತಿಲ್ಲದಂತೆ ಅಕ್ಕಿಯನ್ನು ಕದಿಯುದ್ದ ಸಿಬ್ಬಂದಿ. ಇವರು ಗ್ರಾಮದ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ಹೊಂದಿದ್ದಾರೆ. ಇದರಡಿ ಮಾವಿನಹೊಳೆ, ಮರಳಹಟ್ಟಿ, ದಂಡಿಗನಹಳ್ಳಿ ಮತ್ತು ಗಂಡಗನ ಹಂಕಲು ಗ್ರಾಮಗಳ 250 ಕ್ಕೂ ಅಧಿಕ ಕಾರ್ಡ್ಗಳಿವೆ. ಈ ಗ್ರಾಮಗಳಿಂದ ಬರುವ ಫಲಾನುಭವಿಗಳಿಗೆ ಗೊತ್ತಿಲ್ಲದಂತೆ ಸಿಬ್ಬಂದಿ ಪ್ರತಿ ಕಾರ್ಡಿಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದನು ಎನ್ನಲಾಗಿದೆ. ಸದ್ಯ ಸಿಬ್ಬಂದಿ ಮಾಡುತ್ತಿದ್ದ ಕಳ್ಳಾಟವನ್ನು ಹನಮಂತ ನಾಯ್ಕ್ ಎಂಬ ಯುವಕ ವಿಡಿಯೋ ಮಾಡಿದ್ದಾನೆ.
ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಇದನ್ನ ಕುರಿತು ನೀನೇನು ಕೇಳಬೇಡ. ಬೇಕಾದರೇ ಹೆಚ್ಚಿಗೆ ಅಕ್ಕಿ ತೆಗೆದುಕೊಂಡು ಹೋಗು ಎಂದು ಯುವಕನಿಗೆ ಸೂಚಿಸಿದ್ದಾನೆ. ತಾಲೂಕಿನಾದ್ಯಂತ ಅನೇಕ ಕಡೆ ಇಂತಹ ಸಮಸ್ಯೆ ನಡೆಯುತ್ತಿವೆ. ಹೀಗಾಗಿ ಕಡಿಮೆ ಅಕ್ಕಿ ನಿಡುವ ಸಿಬ್ಬಂದಿಯ ಲೈಸನ್ಸ್ ಅನ್ನು ಕ್ಯಾನ್ಸಲ್ ಮಾಡುವಂತೆ ಜನರು ಒತ್ತಾಯಿಸಿದ್ದಾರೆ. ಜನರ ಒತ್ತಾಯದ ಮೇರೆಗೆ ಈ ಬಗ್ಗೆ ಆಹಾರ ಇಲಾಖೆ, ಆಂತರಿಕ ತನಿಖೆಗೆ ಸೂಚನೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ