ಪಕ್ಕದ ಊರಿನ ಎಮ್ಮೆಗಳ ಜೊತೆ ನಂಟು ಬೆಳೆಸಿಕೊಂಡಿದ್ದ ಕೋಣ
ಪ್ರತಿ ಸಾರಿ ಎಮ್ಮೆಗಳ ಬಳಿ ಬಂದಾಗ ಹೊಡೆದು ಓಡಿಸುತ್ತಿದ್ದ ವ್ಯಕ್ತಿ..!
ನಿನ್ನೆ ಮನಸೋ ಇಚ್ಚೆ ದಾಳಿ ಮಾಡಿ ವ್ಯಕ್ತಿಯನ್ನ ಬಲಿ ಪಡೆದ ಕೋಣ
ದಾವಣಗೆರೆ: ಎಮ್ಮೆಗಳ ಜೊತೆ ಸೇರಲು ಬಿಡುತ್ತಿಲ್ಲವೆಂದು ದೇವರ ಕೋಣವೊಂದು ವ್ಯಕ್ತಿಗೆ ಗುದ್ದಿ ಸಾಯಿಸಿದ ಘಟನೆ ಚನ್ನಗಿರಿ ತಾಲೂಕಿನ ಎನ್. ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎನ್.ಬಸವನಹಳ್ಳಿ ಗ್ರಾಮದ ನಿವಾಸಿ ನೀರಗಂಟಿ ಜಯಣ್ಣ (48) ಮೃತಪಟ್ಟವರು. ಬಸವನಹಳ್ಳಿಯ ಪಕ್ಕದ ಊರು ಆದ ಲಿಂಗದಹಳ್ಳಿ ಗ್ರಾಮದ ದೇವರಿಗೆ ಕೋಣವನ್ನು ಬಿಡಲಾಗಿತ್ತು. ಈ ಕೋಣ ಯಾವಗಲೂ ಬಸವನಹಳ್ಳಿಯ ಎಮ್ಮೆಗಳ ಜೊತೆಯೇ ಸೇರಿ ದಾಂಧಲೆ ಮಾಡಿ ಸಮಸ್ಯೆ ಸೃಷ್ಠಿ ಮಾಡುತ್ತಿತ್ತು. ಹೀಗಾಗಿ ಸಾಕಷ್ಟು ಬಾರಿ ಊರಿನ ನೀರಗಂಟಿಯಾದ ಜಯಣ್ಣ ದೊಣ್ಣೆಯಿಂದ ಹೊಡೆದು ಕೋಣವನ್ನು ಓಡಿಸುತಿದ್ದರು. ಈ ರೀತಿ ದೊಣ್ಣೆ ಹಿಡಿದು ಓಡಿಸುವಾಗ ಕೋಣ ದಾಳಿ ಮಾಡಲು ಬಂದ್ರೆ ಜಯಣ್ಣ ಪ್ರತಿ ಸಾರಿ ತಪ್ಪಿಸಿಕೊಳ್ಳುತ್ತಿದ್ದರು.
ಆದ್ರೆ ನಿನ್ನೆ ಸಂಜೆ ಅದೇ ರೀತಿ ಕೋಣವನ್ನು ಹೊಡೆದು ಓಡಿಸಲು ಮುಂದಾಗಿದ್ದಾರೆ. ಆಗ ಕೋಪಗೊಂಡ ಕೋಣ ಜಯಣ್ಣನ ಮೇಲೆ ಮನಸೋ ಇಚ್ಚೆ ದಾಳಿ ಮಾಡಿದೆ. ಈ ವೇಳೆ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಎಲ್ಲೆಂದರಲ್ಲಿ ಕೋಣ ಆತನಿಗೆ ಗುದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಸಾಯಿಸಿದ ದೇವರ ಕೋಣವನ್ನು ಗ್ರಾಮಸ್ಥರು ಈಗಾಗಲೇ ಕಟ್ಟಿ ಹಾಕಿದ್ದಾರೆ. ಈ ಹಿಂದೆಯೇ ಕೋಣದ ಗಲಾಟೆ ಬಗ್ಗೆ ಲಿಂಗದಹಳ್ಳಿ ಗ್ರಾಮ ಪಂಚಾಯತ್ಗೆ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಈ ಬಗ್ಗೆ ಗ್ರಾಮಸ್ಥರು, ಪೊಲೀಸರು ಕ್ರಮ ಕೈಗೊಳ್ಳದಿದ್ದಕ್ಕೆ ಇಂತಹದೊಂದು ಅನಾಹುತ ನಡೆದು ಹೋಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ