ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್ಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂದಿ
ನ್ಯೂಸ್ಫಸ್ಟ್ ಚಾನೆಲ್ನಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು
ಜನರಿಗೆ ಅನ್ನಭಾಗ್ಯದಡಿ ಅಕ್ಕಿ ಕಡಿಮೆ ಕೊಡದಂತೆ ಖಡಕ್ ಸೂಚನೆ
ದಾವಣಗೆರೆ: ಚನ್ನಗಿರಿ ತಾಲೂಕಿನ ಮಾವಿನಹೊಳೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಕಾರ್ಡ್ಗೆ 1 ಕೆ.ಜಿ ಅಕ್ಕಿ ಕದಿಯುತ್ತಿದ್ದ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅನ್ನಭಾಗ್ಯ ಅಕ್ಕಿ ಕದಿಯುತ್ತಿರುವ ಬಗ್ಗೆ ನ್ಯೂಸ್ಫಸ್ಟ್ ಚಾನೆಲ್ ಸುದ್ದಿ ಬಿತ್ತರಿಸಿತ್ತು. ಈ ಬಗ್ಗೆ ಗಮನಿಸಿದ್ದ ಆಹಾರ ಇಲಾಖೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ.
ಗ್ರಾಮದ ನ್ಯಾಯಬೆಲೆ ಅಂಗಡಿಯ ಸಿದ್ದಪ್ಪ ಅಮಾನತುಗೊಂಡ ಸಿಬ್ಬಂದಿ. ಇವರು ಫಲಾನುವಿಗಳಿಗೆ ಗೊತ್ತಿಲ್ಲದಂತೆ ಪ್ರತಿ ಕಾರ್ಡ್ನಿಂದ ಒಂದು ಕೆಜಿ ಅಕ್ಕಿ ಕದಿಯುತ್ತಿದ್ದನು. ಇವರ ಲೈಸನ್ಸ್ ಅಡಿ ಮಾವಿನಹೊಳೆ, ಮರಳಹಟ್ಟಿ, ದಂಡಿಗನಹಳ್ಳಿ ಮತ್ತು ಗಂಡಗನ ಹಂಕಲು ಗ್ರಾಮಗಳ 250 ಕ್ಕೂ ಅಧಿಕ ಕಾರ್ಡ್ಗಳಿವೆ. ಸದ್ಯ ಸಿಬ್ಬಂದಿ ಮಾಡುತ್ತಿದ್ದ ಕಳ್ಳಾಟವನ್ನು ಯುವಕನೊಬ್ಬ ವಿಡಿಯೋ ಮಾಡಿದ್ದನು. ಹೀಗಾಗಿ ಸಿಬ್ಬಂದಿಯ ಲೈಸೆನ್ಸ್ ಕ್ಯಾನ್ಸ್ಲ್ ಮಾಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದರು.
ಇದನ್ನು ಓದಿ: ಅನ್ನಭಾಗ್ಯಕ್ಕೆ ಸಿಬ್ಬಂದಿಯಿಂದ ಕನ್ನ.. ಪ್ರತಿ ಕಾರ್ಡ್ನಿಂದ ಎಷ್ಟು ಕೆಜಿ ಅಕ್ಕಿ ಕದಿಯುತ್ತಿದ್ದ ಗೊತ್ತಾ..?
ಈ ಬಗ್ಗೆ ಸ್ಥಳೀಯ ಶಾಸಕ ಬಸವರಾಜ್ ಶಿವಗಂಗಾ ಅವರ ಗಮನಕ್ಕೂ ತರಲಾಗಿತ್ತು. ಹೀಗಾಗಿ ಸಿಬ್ಬಂದಿಯ ಕಳ್ಳಾಟದಿಂದ ಎಚ್ಚೆತ್ತುಕೊಂಡ ಆಹಾರ ಇಲಾಖೆ ಅವರನ್ನು ಅಮಾನತುಗೊಳಿಸಿದೆ. ಸರ್ಕಾರದಿಂದ ನೀಡುವ ಅನ್ನಭಾಗ್ಯದಡಿ ಅಕ್ಕಿಯನ್ನ ಕಡಿಮೆ ಕೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ