newsfirstkannada.com

ಪತ್ನಿ, ಮಗುವನ್ನ ಕೊಲೆ ಮಾಡಿ ಪ್ರಾಣ ಕಳ್ಕೊಂಡ್ರಾ?; ದಾವಣಗೆರೆ ಕುಟುಂಬ ಅಮೆರಿಕದಲ್ಲಿ ಸಾವನ್ನಪ್ಪಿದ ಕೇಸ್‌ಗೆ ಟ್ವಿಸ್ಟ್

Share :

20-08-2023

  ಮನೆ ಬಾಗಿಲು ಲಾಕ್​ ಮಾಡಿಕೊಂಡ ಸಾವನ್ನಪ್ಪಿದರ ಹಿಂದೆ ಅನುಮಾನ

  ಡೆತ್​ನೋಟ್​ ಮಾಹಿತಿ ಬಹಿರಂಗ ಪಡಿಸದ ಅಮೆರಿಕಾ ಪೊಲೀಸರು!

  ಭಾರತಕ್ಕೆ ಮೃತದೇಹ ತರಿಸಿಕೊಡಲು ಸರ್ಕಾರಕ್ಕೆ ಮೊರೆಯಿಟ್ಟ ಕುಟುಂಬ

ದಾವಣಗೆರೆ: ಒಂದೇ ಕುಟುಂಬದ ಮೂವರು ಅಮೆರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪತಿಯೇ ತನ್ನ ಹೆಂಡತಿ, ಮಗುವನ್ನ ಗುಂಡಿಕ್ಕಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರೋ ಘಟನೆ ಬೆಳಕಿಗೆ ಬಂದಿತ್ತು.

ದಾವಣಗೆರೆ ಮೂಲದ ಯೋಗೇಶ್ ಹೊನ್ನಾಳ (37), ಪತ್ನಿ ಪ್ರತಿಭಾ ಹೊನ್ನಾಳ್ (35), ಮಗು ಯಶ್ ಹೊನ್ನಾಳ್ (6) ಮೃತ ಪಟ್ಟವರು. ಯೋಗೇಶ್ ಕುಟುಂಬ ಅಮೆರಿಕಾದಲ್ಲಿ ನೆಲಸಿದ್ದು ವೃತ್ತಿಯಲ್ಲಿ ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್  ಆಗಿದ್ದರು. ಆದರೆ ಪತಿಯೇ ತನ್ನ ಪತ್ನಿ, ಮಗುವನ್ನು ಗುಂಡಕ್ಕಿ ಹತ್ಯೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತನ್ನವರನ್ನೇ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಯಾಕೆ ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಅಮೆರಿಕಾದಲ್ಲಿ ಭಾರತೀಯ ದಂಪತಿ ಮತ್ತು ಮಗು ಅನುಮಾನಾಸ್ಪದ ಸಾವು; ಅಸಲಿಗೆ ಆಗಿದ್ದೇನು?

ಆ.18 ರಂದು ಪಕ್ಕದ ಮನೆಯವರ ಮಾಹಿತಿ ಪಡೆದು ಅಲ್ಲಿನ ಪೊಲೀಸರು ಯೋಗೇಶ್ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಆದರೆ ಬಾಗಿಲನ್ನು ತೆರೆಯದಿದ್ದಾಗ ಬಾಗಿಲು ಮುರಿದು ಪೊಲೀಸರು ಒಳಗೆ ಹೋಗಿದ್ದಾಗ ಮೂವರು ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಬಗ್ಗೆ ಮಾಹಿತಿ ಬಹಿರಂಗ ಪಡಿಸಲು ಬಾಲ್ಟಿಮೋರ್​ನ ಪೊಲೀಸರು ಹಿಂದೇಟು ಹಾಕಿದ್ದಾರೆ. ಅಲ್ಲದೇ ಮೃತರ ಕುಟುಂಬಸ್ಥರು ಸಾವಿಗೆ ನಿಖರ ಕಾರಣ ಏನು ಹೇಳಿ, ಮೂವರ ಮೃತದೇಹ ತಾಯ್ನಾಡಿಗೆ ತರಿಸುವಂತೆ ಒತ್ತಾಯ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪತ್ನಿ, ಮಗುವನ್ನ ಕೊಲೆ ಮಾಡಿ ಪ್ರಾಣ ಕಳ್ಕೊಂಡ್ರಾ?; ದಾವಣಗೆರೆ ಕುಟುಂಬ ಅಮೆರಿಕದಲ್ಲಿ ಸಾವನ್ನಪ್ಪಿದ ಕೇಸ್‌ಗೆ ಟ್ವಿಸ್ಟ್

https://newsfirstlive.com/wp-content/uploads/2023/08/america-2.jpg

Load More