Advertisment

ಪತಿಗೆ ನಿದ್ರೆ ಮಾತ್ರೆ ಹಾಕಿ ಪ್ರಿಯಕರನ ಜೊತೆ ದೈಹಿಕ ಸಂಬಂಧ -ಕೊನೆಗೂ ಬಯಲಾಯ್ತು ಸಾವಿನ ರಹಸ್ಯ

author-image
Ganesh
Updated On
ಪತಿಗೆ ನಿದ್ರೆ ಮಾತ್ರೆ ಹಾಕಿ ಪ್ರಿಯಕರನ ಜೊತೆ ದೈಹಿಕ ಸಂಬಂಧ -ಕೊನೆಗೂ ಬಯಲಾಯ್ತು ಸಾವಿನ ರಹಸ್ಯ
Advertisment
  • ವರ್ಷದ ಹಿಂದೆ ಮೃತಪಟ್ಟ ಇಲಿಯಾಸ್ ಕೊಲೆ ರಹಸ್ಯ ಬಯಲು
  • ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿ ಎಂದು ಪತ್ನಿಯಿಂದ ಪ್ಲಾನ್
  • ವರ್ಷದ ಬಳಿಕ ಪ್ರಕರಣ ಬೇಧಿಸಿದ ದಾವಣಗೆರೆ ಪೊಲೀಸರು

ದಾವಣಗೆರೆ: ಕಳೆದ ಒಂದು ವರ್ಷದ ಹಿಂದೆ ಬಸವಾಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಒಂದರ ರಹಸ್ಯವನ್ನು ಪೊಲೀಸರು ಬಯಲು ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.

Advertisment

ಒಂದು ವರ್ಷದ ಹಿಂದೆ ಸತ್ತ ವ್ಯಕ್ತಿಯ ಕೊಲೆಯ ರಹಸ್ಯವನ್ನು ಬೇಧಿಸಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪತ್ನಿ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರೋದು ಗೊತ್ತಾಗಿದೆ. ಇದೀಗ ಪೊಲೀಸರು ಆರೋಪಿಗಳನ್ನು ಹೆಡೆಮುರಿಕಟ್ಟಿ ಜೈಲಿಗೆ ಅಟ್ಟಿದ್ದಾರೆ.

ಇದನ್ನೂ ಓದಿ:ಜಾಮೀನು ಸಿಗುವ ನಿರೀಕ್ಷೆಯಲ್ಲಿ ದರ್ಶನ್​.. ಐಟಿ ಇಲಾಖೆಯಿಂದ ಬಿಗ್ ಶಾಕ್ ಎದುರಾಗುತ್ತಾ?

ಕೊಲೆ ರಹಸ್ಯ!
2023 ಫೆಬ್ರವರಿಯಲ್ಲಿ ಇಲಿಯಾಸ್ ಅಹಮ್ಮದ್ ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಪತಿಯನ್ನು ಕೊಲ್ಲಿಸಿದ್ದ ಪತ್ನಿ ಆಯೇಷಾ, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು. ನನ್ನ ಪತಿ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ನಾಟಕವಾಡಿದ್ದಳು. 2023ರ ಫೆಬ್ರವರಿಯಲ್ಲಿ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಅನುಮಾನಗೊಂಡ ಪೊಲೀಸರು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. DNA ಪರೀಕ್ಷೆಯಲ್ಲಿ ಮೃತ ಇಲಿಯಾಸ್ ಅಹಮ್ಮದ್ ಎಂದು ದೃಢಪಟ್ಟಿತ್ತು. ನಂತರ ಪೊಲೀಸರು ಇಲಿಯಾಸ್ ಸಾವಿನ ಜಾಡು ಹಿಡಿದು ಹೊರಟಿದ್ದರು.

Advertisment

ಮತ್ತೊಂದು ಕಡೆ ಇಲಿಯಾಸ್ ಸಾವಿನ ಬಗ್ಗೆ ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಪೋಷಕರ ಆರೋಪದಂತೆ ಇಲಿಯಾಸ್ ಪತ್ನಿ ಆಯೇಷಾಳನ್ನು ವಿಚಾರಣೆಗೆ ಕರೆದುಕೊಂಡು ಬಂದಿದ್ದರು. ವಿಚಾರಣೆ ವೇಳೆ ಇದು ಪೂರ್ವನಿಯೋಜಿತ ಕೊಲೆ ಎನ್ನುವುದು ಬಯಲಿಗೆ ಬಂದಿತ್ತು. ಪ್ರಿಯಕರ ಮಂಜುನಾಥ್​, ಆಯೇಷಾ ಕೊಲೆ ಸೇರಿ ಕೊಲೆ ಮಾಡಿರುವುದು ಸಾಬೀತಾಗಿದೆ.

ಇದನ್ನೂ ಓದಿ:ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಬಿಗ್ ಶಾಕ್; ಎಸ್ಐಟಿ ಅಧಿಕಾರಿಗಳು ಮಾಡಿದ್ದೇನು?

ಕರಿಮಣಿ ಮಾಲಿಕನ ಕೊಲೆ!

ಆಯೇಷಾ ತನ್ನ ಪತಿ ಇಲಿಯಾಸ್​ಗೆ ನಿದ್ದೆ ಮಾತ್ರೆ ಹಾಕಿ ಮಂಜುನಾಥ್ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದಳು. ಕೊನೆಗೆ ಒಂದು ದಿನ ಪತಿಯನ್ನ ಕೊಂದರೆ ಅಕ್ರಮ ಸಂಬಂಧಕ್ಕೆ ಅಡ್ಡಿ ಇರುವುದಿಲ್ಲ ಅಂತ ಪ್ಲಾನ್ ಮಾಡಿದ್ದಾಳೆ. ಅಂತೆಯೇ ಒಂದು ದಿನ ಇಲಿಯಾಸ್​ನನ್ನು ಮಂಜುನಾಥ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದ. ಇಲಿಯಾಸ್​ಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಮಂಜುನಾಥ್ ಕುಡಿಸಿದ್ದ. ಕೊನೆಗೆ ಬಲವಂತವಾಗಿ ಚಾನಲ್‌ನಲ್ಲಿ ಈಜಾಡಲು ಕರೆದುಕೊಂಡು ಹೋಗಿದ್ದ. ಅಲ್ಲಿ ಕೊಲೆ ಮಾಡಿದ್ದಾನೆ ಅನ್ನೋದು ವಿಚಾರಣೆ ವೇಳೆ ಸಾಬೀತಾಗಿದೆ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

Advertisment

ಇದನ್ನೂ ಓದಿ:ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ Oneplus​ 13.. ರಿಲೀಸ್​​ಗೂ ಮುನ್ನವೇ ಸೋರಿಕೆಯಾದ ಅಚ್ಚರಿ ಮಾಹಿತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment