newsfirstkannada.com

×

ಮದುವೆ ಬೇಡ, ಮಕ್ಕಳು ಬೇಡ.. ಸನ್ಯಾಸತ್ವ ದೀಕ್ಷೆ ಪಡೆದ ಇಬ್ಬರು ಯುವತಿಯರು; ಕಾರಣವೇನು?

Share :

Published October 21, 2024 at 4:33pm

Update October 21, 2024 at 4:38pm

    ಹಣ, ಆಸ್ತಿ, ಗಂಡ, ಮಕ್ಕಳು, ತಂದೆ-ತಾಯಿ ಯಾರು ಬೇಡ

    ಮಾನಸಿ ಕುಮಾರಿ, ಭಕ್ತಿ ಕುಮಾರಿ ಜೈನ ದೀಕ್ಷೆ ಪಡೆಯಲು ನಿರ್ಧಾರ

    ಸನ್ಯಾಸತ್ವದಲ್ಲಿ ದುಡ್ಡು ಇರಲ್ಲ.. ಎರಡು ಜೊತೆ ಬಟ್ಟೆ ಇರುತ್ತೆ ಅಷ್ಟೇ!

ದಾವಣಗೆರೆ: ಹಣ, ಆಸ್ತಿ, ಗಂಡ, ಮಕ್ಕಳು, ತಂದೆ-ತಾಯಿ ಯಾರು ಬೇಡ. ನಮಗೆ ಅಹಿಂಸಾ ಪರಮಧರ್ಮವೇ ಬೇಕು ಅಂತ ಮದುವೆಯ ವಯಸ್ಸಲ್ಲಿ ಇಬ್ಬರು ಯುವತಿಯರು ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.
ಮಾನಸಿ ಕುಮಾರಿ, ಭಕ್ತಿ ಕುಮಾರಿ ಈ ಇಬ್ಬರು ಜೈನ ದೀಕ್ಷೆ ಪಡೆಯಲು ನಿರ್ಧಾರ ಮಾಡಿದ್ದಾರೆ.

ದಾವಣಗೆರೆಯ ಮಾನಸಿ ಕುಮಾರಿ MA ಸೈಕಾಲಜಿ ಮಾಡಿದ್ರೆ, ಗೋಕಾಕ್​ನ ಭಕ್ತಿ ಕುಮಾರಿ ಬಿಎ, ಎಲ್​ಎಲ್​ಬಿ ಮಾಡಿದ್ದಾರೆ. ಸದ್ಯ ಇಬ್ಬರೂ 26 ನೇ ವಯಸ್ಸಿಗೆ ಲೌಕಿಕ ಜೀವನ ತೊರೆದು ಅಲೌಕಿಕ ಜೀವನ ಕಡೆ ಮುಖ ಮಾಡಿದ್ದಾರೆ.

ಮಾನಸಿ ಕುಮಾರಿ, ಜೈನ ದೀಕ್ಷೆ ಸ್ವೀಕಾರ ಮಾಡುತ್ತಿರುವ ಯುವತಿ

ನನ್ನ ಸ್ವಂತಕ್ಕೆ ಸನ್ಯಾಸತ್ವ ಸ್ವೀಕಾರ! 
ನಾನು ಜೈನ ಸನ್ಯಾಸಿ ಆಗುತ್ತಾ ಇದ್ದೀನಿ. ಅಹಿಂಸಾ ಪರಮಧರ್ಮ ಅಂತ ಮಹಾವೀರ ಭಗವಾನ್ ಹೇಳಿದ್ದಾರೆ. ಹಣ, ಸಂಪತ್ತು ಏನೇ ಇರಲಿ. ಸುಖ, ಸಂತೋಷ ಇರೋದಿಲ್ಲ. ಸನ್ಯಾಸತ್ವದಲ್ಲಿ ದುಡ್ಡು ಇರಲ್ಲ. ಎರಡು ಜೊತೆ ಬಟ್ಟೆ ಇರುತ್ತೆ ಅಷ್ಟೇ. ಆಂತರಿಕ ಸುಖ ಈ ಧರ್ಮದಲ್ಲಿ ಇದೆ. ಮದುವೆ ಆದ ಮೇಲೆ ನಮ್ಮ ಸ್ವಂತಕ್ಕೋಸ್ಕರ ನಾವು ಏನು ಮಾಡಲ್ಲ. ಗಂಡ, ಮಕ್ಕಳು, ತಂದೆ-ತಾಯಿಗೋಸ್ಕರ ಜೀವನ ಮಾಡುತ್ತೇವೆ. ಸ್ವಂತಕ್ಕೆ ಶೇಕಡಾ 1ರಷ್ಟು ಇರೋದಿಲ್ಲ. ಸನ್ಯಾಸತ್ವದಲ್ಲಿ ಸ್ವಂತದ ಲಾಭ ಹೆಚ್ಚಾಗಿರುತ್ತದೆ. ಜೊತೆಗೆ ಬೇರೆಯವರಿಗೂ ಸಹಾಯ ಮಾಡುತ್ತೇವೆ. ಮನೆಯಲ್ಲಿ ಇದ್ದರೆ ಸ್ವಂತಕ್ಕೆ ಏನೂ ಲಾಭ ಸಿಗೋದಿಲ್ಲ. ಅಹಿಂಸಾ ಜೀವನವನ್ನು ನಾನು ಅನುಭವಿಸಲು ಹೋದೆ ನನಗೆ ಇಷ್ಟ ಆಯ್ತು. ಅದಕ್ಕೆ ನಾನು ಸನ್ಯಾಸತ್ವ ಸ್ವೀಕರಿಸುವ ನಿರ್ಧಾರ ಮಾಡಿದೆ.

– ಮಾನಸಿ ಕುಮಾರಿ, ಸನ್ಯಾಸ ದೀಕ್ಷಿ ಸ್ವೀಕರಿಸುತ್ತಿರುವವರು 

ನವೆಂಬರ್​ 17ಕ್ಕೆ ಜಾರ್ಖಂಡ್​ನಲ್ಲಿ ಮಾನಸಿ ಕುಮಾರಿ, ಭಕ್ತಿ ಕುಮಾರಿ ಅವರ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಪರಮಪೂಜ್ಯ ಆಚಾರ್ಯ ಶ್ರೀ ಮುಕ್ತಿ ಪ್ರಭು ಸುರೀಶ್ವರ್ ಜೀ ಮಹಾರಾಜರ ಹಾಗೂ ಪರಮ ಪೂಜ್ಯ ಸಾಧವಿ ಶ್ರೀ ಪೂರ್ಣಪ್ರಜ್ಞ ಶ್ರೀ ಜಿ ಮಹಾರಾಜ ಸಾಹೇಬ ಸಮ್ಮುಖದಲ್ಲಿ ರುಜುಬಾಲಿಕಾ ತೀರ್ಥಕ್ಷೇತ್ರದಲ್ಲಿ ಜೈನ ಸನ್ಯಾಸತ್ವ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: PHOTOS: ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಪಾರು ಸೀರಿಯಲ್​ ನಟಿ ಮಾನ್ಸಿ ಜೋಶಿ; ಹುಡುಗ ಯಾರು? 

ಮಾನಸಿ ಕುಮಾರಿ, ಭಕ್ತಿ ಕುಮಾರಿ ಜೈನ ದೀಕ್ಷೆ ಪಡೆಯುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು. ಸಂಭ್ರಮದಲ್ಲಿ ಭಾಗಿಯಾದ ಇಬ್ಬರ ಕುಟುಂಬಸ್ಥರು ಅಭಿನಂದನೆ ತಿಳಿಸಿದರು. ಎರಡು ಕುಟುಂಬದವರು ಸಂಬಂಧಿಕರಿಗೆ ಔತಣ ಕೂಟ ಏರ್ಪಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮದುವೆ ಬೇಡ, ಮಕ್ಕಳು ಬೇಡ.. ಸನ್ಯಾಸತ್ವ ದೀಕ್ಷೆ ಪಡೆದ ಇಬ್ಬರು ಯುವತಿಯರು; ಕಾರಣವೇನು?

https://newsfirstlive.com/wp-content/uploads/2024/10/davanagere-1.jpg

Load More