newsfirstkannada.com

WATCH: ಪ್ರಸನ್ನಾನಂದಪುರಿ ಶ್ರೀಗಳ ವಿರುದ್ಧ ಕೇಳಿ ಬಂತು ಗಂಭೀರ ಆರೋಪ; ವೈರಲ್​ ಆದ ಆಡಿಯೋದಲ್ಲೇನಿದೆ?

Share :

Published September 4, 2023 at 6:35am

Update September 4, 2023 at 6:45am

    ಆ ಆಡಿಯೋ 2017ರಲ್ಲಿ ಮಾತಾಡಿದ್ದು ಎಂದ ಬ್ರಹ್ಮಾನಂದ ಶ್ರೀ

    ಸ್ವಾಮೀಜಿಯ ಈ ರೀತಿಯ ನಡೆ ಸಮುದಾಯಕ್ಕೆ ಮಾರಕ ಆಗಿದ್ಯಾ?

    ಕಿರಿಯ ಸ್ವಾಮೀಜಿಗೆ ವಾಲ್ಮೀಕಿ ಸ್ವಾಮೀಜಿ ಹಾಕಿದ್ದಾರಾ ಧಮ್ಕಿ..?

ದಾವಣಗೆರೆ: ಸ್ವಾಮೀಜಿಗಳು ಅಂದ್ರೆ ಭಕ್ತರಿಗೆ ಸನ್ಮಾರ್ಗ ತೋರಿಸುವ ದಾರಿದೀಪ. ಸದ್ಯ ವಾಲ್ಮೀಕಿ ಮಠದ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ. ಅವರು ಬಳಸಿರುವ ಭಾಷೆ, ದ್ವೇಷದ ಮಾತುಗಳು ಪೀಠಾಧಿಪತಿಗಳ ವಿರುದ್ಧ ಬೊಟ್ಟು ಮಾಡುವಂತಿದೆ. ಸ್ವಾಮೀಜಿಗಳು ನಡೆದಾಡುವ ದೇವರೆಂದೇ ತಿಳಿದಿರುವ ಭಕ್ತಗಣ ಅನುಮಾನದಿಂದ ನೋಡುವಂತಾಗಿದೆ. ಭಾರತೀಯ ಪರಂಪರೆಯಲ್ಲಿ ಸ್ವಾಮೀಜಿಗಳಿಗೆ ಪವಿತ್ರ ಸ್ಥಾನವಿದೆ. ಸರ್ವಸಂಗ ಪರಿತ್ಯಾಗಿಗಳಾದ ಸ್ವಾಮೀಜಿಗಳು ಸರಳ, ಮೃದು ಸ್ವಭಾವದ ಸಾತ್ವಿಕ ಜೀವನ. ಮನುಕುಲದ ಉದ್ಧಾರಕ್ಕೆ ಜಾತಿ, ಮತ, ಪಂಥಗಳನ್ನು ಮೀರಿ ಅಧ್ಯಾತ್ಮ ಜೀವಿಯಾಗಿ ಬಾಳುತ್ತಾರೆ. ಭಕ್ತಿಯ ಬೀಜಗಳನ್ನು ಬಿತ್ತಿ ಸಮಾಜಕ್ಕೆ ಬೆಳಕು ಚೆಲ್ಲುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಸ್ವಾಮೀಜಿಗಳ ಬದುಕು ಭಕ್ತಿಯ ಹಳಿ ತಪ್ಪಿದಂತಿದೆ. ಸ್ವಾರ್ಥ, ಸ್ವಜನಪಕ್ಷಪಾತ, ದ್ವೇಷ, ಮತ್ಸರ ಮೇಳೈಸಿದಂತಿದೆ.

ಕಿರಿಯ ಶ್ರೀಗಳಿಗೆ ಧಮ್ಕಿ ಹಾಕಿದ್ರಾ ವಾಲ್ಮೀಕಿ ಮಠದ ಸ್ವಾಮೀಜಿ?
ಪ್ರಸನ್ನಾನಂದಪುರಿ ಶ್ರೀಗಳದ್ದು ಎನ್ನಲಾದ ಆಡಿಯೋ ವೈರಲ್!

ವಾಲ್ಮೀಕಿ ಸಮುದಾಯದ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯ ತುಂಗಭದ್ರೆಯ ತಟದಲ್ಲಿ ಸ್ವಾಪಿತವಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ತನ್ನದೇ ಆದ ಪರಂಪರೆ ಇದೆ. ಸದ್ಯ ಈ ಪೀಠಕ್ಕೆ ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠಾಧ್ಯಕ್ಷರಾಗಿದ್ದಾರೆ. ಆದ್ರೆ ಸ್ವಾಮೀಜಿ ಇತ್ತೀಚೆಗೆ ತಮ್ಮ ವಿವಾದಿತ ಮಾತುಗಳಿಂದಲೇ ಸುದ್ದಿಯಾಗ್ತಿದ್ದಾರೆ. ಸದ್ಯ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳ ನಡುವೆ ಮಾತುಕತೆ ನಡೆದಿದ್ದು ಅಶ್ಲೀಲ ಮಾತುಗಳು ಆಡಿಯೋದಲ್ಲಿ ಕೇಳಿಸಿವೆ. ಭಕ್ತಿಯ ಪ್ರವಚನಗಳ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡುತ್ತಾ ಸಾಮಾನ್ಯರಲ್ಲೇ ಸಾಮಾನ್ಯರಂತೆ ಬದುಕಿದ ಪರಂಪರೆ ವಾಲ್ಮೀಕಿ ಪೀಠದ ಸ್ವಾಮೀಜಿಗಳದ್ದು. ಆದರೆ ಇಲ್ಲಿ ಪ್ರಸನ್ನಾನಂದ ಸ್ವಾಮೀಜಿ ಮಾತುಗಳನ್ನು ಕೇಳಿ, ಮಾಜಿ ಸಚಿವ ಶ್ರೀರಾಮುಲು ಬಗ್ಗೆಯೂ ಮಾತನಾಡಿರುವ ಸ್ವಾಮೀಜಿ ಅಯೋಗ್ಯ, ಉಗ್ರವಾದಿ, ಬಟ್ಟೆ ಬಿಚ್ಚಿಸ್ತೀನಿ ಅನ್ನೋ ಮಾತುಗಳನ್ನು ಆಡಿದ್ದಾರೆ.

ಇನ್ನು ಆಡಿಯೋ ಬಗ್ಗೆ ನ್ಯೂಸ್ ಫಸ್ಟ್​​ಗೆ ಪ್ರತಿಕ್ರಿಯೆ ನೀಡಿದ ಕಿರಿಯ ಬ್ರಹ್ಮಾನಂದ ಸ್ವಾಮೀಜಿ ಅವರ ಮೇಲೆ ಯಾವುದೇ ವೈಯುಕ್ತಿಕ ದ್ವೇಷ ಇಲ್ಲ. ಸ್ವಾಮೀಜಿ ಮಾಡುತ್ತಿರುವ ಕೆಲವು ಕಾರ್ಯಗಳು ಸಮುದಾಯಕ್ಕೆ ಮಾರಕವಾಗಿವೆ. ನಾನು ಗೃಹಸ್ಥಾಶ್ರಮದಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ವೈರಲ್ ಆಗಿರೋ ವಿಡಿಯೋ ಈಗಿನಿದ್ದಲ್ಲ. 2017ರದ್ದು, ಮಠದ ಟ್ರಸ್ಟ್ ಆರೋಪಕ್ಕೆ ಸಾಕ್ಷ್ಯ ಕೇಳಿದ್ದಕ್ಕೆ ಕಳುಹಿಸಿದ್ದ ಆಡಿಯೋ ಈಗ ವೈರಲ್ ಆಗಿದೆ ಅಂತ ಹೇಳಿದ್ದಾರೆ. ಈ ಆಡಿಯೋ ಬಗ್ಗೆ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ಮಠಾಧಿಪತಿಗಳು ಭಕ್ತರಿಗೆ ಸನ್ಮಾರ್ಗ ತೋರಿಸುವ ದಾರಿದೀಪ. ಅಂಧಕಾರವನ್ನು ತೊಲಗಿಸಿ ವಿಶ್ವಪ್ರೇಮತ್ವ ಸಾರುವ ಸ್ವಾಮೀಜಿಗಳ ಇಂತಹ ನಡೆ ಭಕ್ತರ ಮನಸ್ಸನ್ನ ಘಾಸಿ ಮಾಡ್ತಿರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಪ್ರಸನ್ನಾನಂದಪುರಿ ಶ್ರೀಗಳ ವಿರುದ್ಧ ಕೇಳಿ ಬಂತು ಗಂಭೀರ ಆರೋಪ; ವೈರಲ್​ ಆದ ಆಡಿಯೋದಲ್ಲೇನಿದೆ?

https://newsfirstlive.com/wp-content/uploads/2023/09/valmiki-1.jpg

Load More