ನೋಡ್ತಾ ನೋಡ್ತಾ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯ ಕಿಡ್ನಾಪ್
ಬಳ್ಳಾರಿ ಮೂಲದ ವಿದ್ಯಾರ್ಥಿ ದಾವಣಗೆರೆ ವಿವಿಯಲ್ಲಿ ಎಂ.ಎ. ವ್ಯಾಸಂಗ
ವಿವಿಯಲ್ಲಿ ಮಗಳನ್ನು ಕಿಡ್ನಾಪ್ ಮಾಡಲು ತಂದೆ-ತಾಯಿ ಬಂದಿದ್ದೇಕೆ?
ಅದೊಂದು ಸಿನಿಮಾ ಸೀನ್ ಥರಾ ಇದೆ. ಆ ಸಿನಿಮಾ ಸೀನ್ ಅದ್ಯಾವ ಪುಣ್ಯಾತ್ಮ ಶೂಟ್ ಮಾಡಿದ್ನೋ ಗೊತ್ತಿಲ್ಲ. ಆ ವಿಡಿಯೋದಲ್ಲಿ ಪೋಷಕರೇ ಮಗಳನ್ನ ಕಿಡ್ನ್ಯಾಪ್ ಮಾಡುವ ಹಾಗೂ ನಂತರ ಆ ಯುವತಿಯನ್ನ ಸ್ಥಳೀಯರೇ ರಕ್ಷಿಸುವುದು ಇದೆ. ಇದು ಮೇಲ್ನೋಟಕ್ಕೆ ಕಾಣಿಸೋ ವಿಚಾರಗಳು. ಆದ್ರೆ, ಆ ವಿಡಿಯೋ ದಾಚೆಗೆ ದೊಡ್ಡ ಹಿಸ್ಟರಿಯೇ ಇದೆ.
ಇದು ದಾವಣಗೆರೆ ವಿಶ್ವವಿದ್ಯಾಲಯದ ಆವರಣ. ಯುವತಿಯನ್ನ ನಾಲ್ಕೈದು ಮಂದಿ ಬಲವಂತವಾಗಿ ಕಾರಿಗೆ ಹತ್ತಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಅರ್ಥಾತ್ ಕಿಡ್ನ್ಯಾಪ್ ಮಾಡ್ತಿದ್ದಾರೆ. ಈ ವೇಳೆ ಯುವತಿಯ ಆಕ್ರಂದನ ಮುಗಿಲು ಮುಟ್ಟಿದೆ. ಕಿಡ್ನ್ಯಾಪ್ ಮಾಡಲು ಯತ್ನಿಸುತ್ತಿರೋರು ಕೂಡ ಶತಾಯಗತಾಯ ಟ್ರೈ ಮಾಡ್ತಿದ್ದಾರೆ. ಕೊನೆಗೆ ಯುವತಿಯನ್ನ ಕಾರಿಗೆ ಹತ್ತಿಸಿಕೊಂಡು ಇನ್ನೇನು ಹೋಗಬೇಕು ಎಂದು ಸಿದ್ಧವಾಗಿದ್ದರು.
ಸಿನಿಮಾ ಸ್ಟೈಲ್‌ನಲ್ಲಿ ಯುವತಿಯ ಕಿಡ್ನಾಪ್‌ಗೆ ಯತ್ನ#Davanagere #DavangereUniversity #Kidnapping #NewsFirstKannada pic.twitter.com/gVsSuFlFPr
— NewsFirst Kannada (@NewsFirstKan) September 8, 2023
ಆದ್ರೆ ಅಷ್ಟರಲ್ಲಿ ಅಲ್ಲಿದ್ದವರ ಪೈಕಿ ಒಬ್ಬರು ಕಾರಿನ ಮುಂದೆ ಬಂದು ನಿಂತುಕೊಂಡರು. ಆಗ ಕಿಡ್ನ್ಯಾಪ್ ಮಾಡಿದ್ದವರ ಎದೆ ಝಲ್ ಎಂದಿತು. ನೋಡ್ತಾ ನೋಡ್ತಾ ಕಾಲೇಜು ಆವರಣದಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲ ಸುತ್ತುವರೆದರು. ಇಷ್ಟೆಲ್ಲಾ ಆದ್ಮೇಲೆ, ಕಾರಿನ ಒಳಗಿದ್ದ ಯುವತಿ ಹೊರಗೆ ಬಂದಳು. ಆಕೆಯೇ ಹೊರಗೆ ಬಂದ್ಮೇಲೆ ಅಪಹರಣಕಾರರಿಗೆ ಭಯ ಆಗ್ದೆ ಇರುತ್ತಾ? ಅವರು ಕೂಡ ಹೊರಗೆ ಬಂದರು.
ಇದೊಂದು ಕೌಟುಂಬಿಕ ಕಲಹ ಅನ್ನೋದು ಕನ್ಫರ್ಮ್
ಅಪ್ಪ-ಅಮ್ಮ ಮತ್ತು ಮಗಳು ಎಂದಾಗ, ಇದು ಕೌಟುಂಬಿಕ ಕಲಹ ಅನ್ನೋದು ಕನ್ಫರ್ಮ್. ಹಾಗಾದ್ರೆ, ಅದೇನೂ ಅನ್ನೋದು ಕುತೂಹಲ. ಅಂದ್ಹಾಗೇ, ಇವರದ್ದು ಬಳ್ಳಾರಿ ಮೂಲದ ಕುಟುಂಬ. ಈ ಯುವತಿ ಬಳ್ಳಾರಿಯಿಂದ ಬಂದು ದಾವಣಗೆರೆ ವಿವಿಯಲ್ಲಿ ಎಂ.ಎ. ವ್ಯಾಸಂಗ ಮಾಡುತ್ತಿದ್ದಾಳೆ. ಕುಟುಂಬದವರಿಂದ ಒಂದು ಅಂತರ ಕಾಯ್ದಕೊಂಡಿದ್ದು, ಎಜುಕೇಷನ್ ಬಗ್ಗೆ ಹೆಚ್ಚು ಆಸಕ್ತಿವಹಿಸಿದ್ದಾಳೆ. ಯುವತಿ ಇಷ್ಟೇಲ್ಲ ಮಾಡೋದಕ್ಕೆ ಕಾರಣ ಯುವತಿಗೆ ಬಾಲ್ಯ ವಿವಾಹ ಮಾಡಲಾಗಿದೆಯಂತೆ.
ಈ ಯುವತಿಯೇ ಹೇಳಿರುವಂತೆ, ಪೋಷಕರು ಬಾಲ್ಯ ವಿವಾಹ ಮಾಡಿದ್ದರಂತೆ. ಈಗ ಆ ಪುರುಷನಿಗೆ ಬೇರೊಂದು ಮಹಿಳೆಯ ಜೊತೆ ಸಂಬಂಧ ಇದೆಯಂತೆ. ಹೀಗಾಗಿ, ನಾನು ಅವರ ಜೊತೆ ಇರೋದಿಲ್ಲ ಅನ್ನೋದು ಯುವತಿಯ ಗಂಭೀರ ಆರೋಪವಾಗಿದೆ. ಆದರೆ ಪೋಷಕರದ್ದು ಇನ್ನೊಂದು ವಾದ.
ಈ ಬಗ್ಗೆ ಕಾಲೇಜಿನ ವಿ.ಸಿ. ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.
ವಿವಿಯಲ್ಲಿ ಇಂತಹ ಘಟನೆ ವಿದ್ಯಾರ್ಥಿನಿಯ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆಯಲ್ಲ. ವಿಶೇಷವಾಗಿ ಇಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಆಡಳಿತ ವರ್ಗದ ಕೆಲಸವಾಗಿದೆ. ಆ ಕಾರ್ಯವನ್ನು ನಮ್ಮ ಆಡಳಿತ ಮಂಡಳಿ ಮಾಡಿದೆ. ವಿದ್ಯಾರ್ಥಿನಿಯರ ಪೋಷಕರೆಂದು ಹೇಳಿಕೊಂಡು ಬಂದು ಗೂಂಡಾಗಿರಿ ಮಾಡಿದ್ದಾರೋ ಅದು ತಪ್ಪು. ನಮ್ಮ ಸಿಬ್ಬಂದಿ ಅವರಿಗೆ ಏನು ಹೇಳಬೇಕು ಅದನ್ನು ಹೇಳಿದ್ದಾರೆ. ಇನ್ನು ಮುಂದೆ ದಾವಣಗೆರೆ ವಿವಿಯಲ್ಲಿ ಇಂತಹದೊಂದು ಘಟನೆ ನಡೆಯಲು ಬಿಡೋದಿಲ್ಲ.
ಚಂದ್ರಶೇಖರ್, ದಾವಣಗರೆ ವಿವಿ ಕುಲಪತಿ
ಪೋಷಕರು ಬಲವಂತವಾಗಿ ಮನೆಗೆ ಬರುವಂತೆ ಕರೆಯುತ್ತಿದ್ದಾರೆ. ಇದು ನನಗೆ ಇಷ್ಟವಿಲ್ಲ. ಹೀಗಾಗಿ ನನ್ನ ಸಹಾಯಕ್ಕೆ ನೀವು ಬರಬೇಕು ಎಂದು ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ಮುಖ್ಯಸ್ಥರಿಗೆ ತಿಳಿಸಿದ್ದರಂತೆ.
ವಿದ್ಯಾರ್ಥಿನಿಯ ಪೋಷಕರು ಅವಳನ್ನು ಮನೆಗೆ ಕರೆದುಕೊಂಡು ಹೋಗಲು ಒತ್ತಡ ತಂದಿದ್ದಾರೆ. ಅವಾಗ ವಿದ್ಯಾರ್ಥಿನಿಯು ಕುಲಸಚಿವರನ್ನು ಭೇಟಿ ಮಾಡಿ ರಕ್ಷಣೆ ಕೇಳಿದ್ದಾರೆ. ಹೀಗಾಗಿ ನಾವು ಆ ವಿದ್ಯಾರ್ಥಿನಿಯನ್ನ ಪೋಷಕರಿಗೆ ಒಪ್ಪಿಸಲ್ಲ. ಪೋಷಕರು ಒತ್ತಡ ಹಾಕಿದರೆ ಪೊಲೀಸರಿಗೆ ಮಾಹಿತಿ ತಿಳಿಸಲಾಗುವುದು.
ಚಂದ್ರಶೇಖರ್, ದಾವಣಗರೆ ವಿವಿ ಕುಲಪತಿ
ವಿವಿ ವತಿಯಿಂದಲೇ ಈ ಕೇಸ್ ಹ್ಯಾಂಡಲ್ ಮಾಡಲಾಗಿದೆ. ಸದ್ಯ ವಿದ್ಯಾರ್ಥಿನಿ ವಿವಿಯ ವಸತಿ ನಿಲಯದಲ್ಲಿ ಸುರಕ್ಷಿತವಾಗಿದ್ದಾರೆ. ಇಂತಹ ಘಟನೆಗಳು ವಿವಿಯ ಆವರಣದಲ್ಲಿ ನಡೆದದ್ದು ನಿಜಕ್ಕೂ ದುರದೃಷ್ಟಕರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ