newsfirstkannada.com

2027ರ ವಿಶ್ವಕಪ್​ನಲ್ಲಿ ಆಡುವ ಸುಳಿವು ನೀಡಿದ ಡೇವಿಡ್​ ವಾರ್ನರ್​! ಪಕ್ಕನಾ?

Share :

21-11-2023

    2027ರಲ್ಲಿ ನಡೆಯಲಿದೆ ವಿಶ್ವಕಪ್ ಪಂದ್ಯಾಟ

    ವಾರ್ನರ್​​ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುದ್ದಿ

    ಕುತೂಹಲ ಕೆರಳಿಸಿದೆ ವಾರ್ನರ್​ ಕೊಟ್ಟ ಉತ್ತರ

ಮುಂಬರುವ ವಿಶ್ವಕಪ್​ 2027ರಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದೀಗ ಡೇವಿಡ್​ ವಾರ್ನರ್​ ​2027ರಲ್ಲಿ ನಡೆಯುವ ವಿಶ್ವಕಪ್​ನಲ್ಲಿ ತಂಡದ ಭಾಗವಾಗಿರಲಿದ್ದೇನೆ ಎಂಬ ಸುಳಿವು ನೀಡಿದ್ದಾರೆ.

ಡೇವಿಡ್​ ವಾರ್ನರ್​ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದು ಹರಿದಾಡುತ್ತಿದ್ದು, ಆಸೀಸ್​ನ ಆರಂಭಿಕ ಬ್ಯಾಟ್ಸ್​ಮನ್​ ಜೀವನವು 1527 ರನ್​ಗೆ ಕೊನೆಗೊಂಡಿದೆ ಎಂದು ಹರಿದಾಡಿತ್ತು. ಆದರೆ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಅವರು ‘ನನ್ನ ವೃತ್ತಿ ಜೀವನದ ಕೊನೆಗೊಂಡಿತ್ತು ಎಂದು ಯಾರು ಹೇಳಿದ್ರು?’ ಎಂದು ಪ್ರಶ್ನೆ ಮಾಡುವುದರ ಜೊತೆಗೆ ಮುಂಬರುವ ವಿಶ್ವಕಪ್​ನಲ್ಲಿ ಆಡುವ ಮುನ್ಸೂಚನೆ ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಡೇವಿಡ್​ ವಾರ್ನರ್​, 2024ರ ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್​ ಸರಣಿ ಆಡಿದ ಬಳಿಕ ರೆಡ್​-ಬಾಲ್​ ಆಟಕ್ಕೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಆದರೆ ಆಸೀಸ್​ ತಂಡ 6ನೇ ಬಾರಿಗೆ ವಿಶ್ವಕಪ್​ ಗೆದ್ದ ಬಳಿಕ ಡೇವಿಡ್​ ವಾರ್ನರ್​ ಮುಂಬರುವ ಏಕದಿನ ಪಂದ್ಯಗಳಲ್ಲಿ ಆಡುವ ಸುಳಿವು ನೀಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2027ರ ವಿಶ್ವಕಪ್​ನಲ್ಲಿ ಆಡುವ ಸುಳಿವು ನೀಡಿದ ಡೇವಿಡ್​ ವಾರ್ನರ್​! ಪಕ್ಕನಾ?

https://newsfirstlive.com/wp-content/uploads/2023/10/DEVID-WARNER.jpg

Load More