newsfirstkannada.com

ವಿಶ್ವಕಪ್​ನಲ್ಲಿ ಹೀನಾಯ​ ಸೋಲು.. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ RCB ಆಟಗಾರ..!

Share :

02-11-2023

    ಏಕದಿನ ಪಂದ್ಯಗಳಲ್ಲಿ 94 ವಿಕೆಟ್ ಪಡೆದಿರುವ ಡೆವಿಡ್ ವಿಲ್ಲೆ

    ವಿಶ್ವಕಪ್ ಮುಗಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ ಗುಡ್​ಬೈ

    ವಿವಿಧ ಟಿ-20 ಲೀಗ್​ಗಳಲ್ಲಿ ಆಡುವುದಾಗಿ ವಿಲ್ಲೇ ಹೇಳಿಕೆ

2023ರ ಏಕದಿನ ವಿಶ್ವಕಪ್​​ನಲ್ಲಿ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನ ನೀಡ್ತಿದೆ. ಇದರ ನಡುವೆಯೇ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲೆ ವಿಶ್ವಕಪ್ ಮುಕ್ತಾಯದ ಬಳಿಕ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್ ಆಟಗಾರರ ನೂತನ ಸೆಂಟ್ರಲ್ ಕಾಂಟ್ರ್ಯಾಕ್ಟ್ ಲಿಸ್ಟಿಂದ ವಿಲ್ಲೆ ಹೆಸರನ್ನ ಕೈಬಿಡಲಾಗಿತ್ತು. ಇದಾದ ಒಂದು ವಾರದ ಬಳಿಕ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಆದರೆ ವಿವಿಧ ಟಿ-20 ಲೀಗ್​ಗಳಲ್ಲಿ ಆಡುವುದಾಗಿ ಡೇವಿಡ್ ವಿಲ್ಲೆ ಹೇಳಿದ್ದಾರೆ.

ಈ ಬಾರಿಯ ವಿಶ್ವಕಪ್​​ನಲ್ಲಿ ವಿಲ್ಲೇ, ಬ್ಯಾಟಿಂಗ್​ನಲ್ಲಿ 42 ರನ್​ಗಳ ಕಾಣಿಕೆಯನ್ನು ತಂಡಕ್ಕೆ ನೀಡಿದ್ದಾರೆ. ಹಾಗೆ ಐದು ವಿಕೆಟ್​ಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 33 ವರ್ಷದ ವಿಲ್ಲೇ, 2015ರಿಂದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದಾರೆ. ಏಕದಿನ, ಟಿ-20 ಪಂದ್ಯಗಳನ್ನು 2015ರಿಂದ ಆರಂಭಿಸಿದ್ದಾರೆ.

ಇಂಗ್ಲೆಂಡ್​ ಪರ 70 ಏಕದಿನ ಪಂದ್ಯಗಳನ್ನು ಆಡಿರುವ ಅವರು 625 ರನ್​ಗಳಿಸಿ, 94 ವಿಕೆಟ್ ಪಡೆದುಕೊಂಡಿದ್ದಾರೆ. ಅದೇ ರೀತಿ ಟಿ-20ಯಲ್ಲಿ 43 ಪಂದ್ಯಗಳನ್ನು ಆಡಿ 226 ರನ್​ಗಳಿಸಿ 51 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಡಿವಿಡ್ ವಿಲ್ಲೆ ಅವರು ಐಪಿಎಲ್ ಕೂಡ ಆಡುತ್ತಿದ್ದಾರೆ. ಕಳೆದ ವರ್ಷ ಬೆಂಗಳೂರು ರಾಯಲ್ ಚಾಲೆಂಜರ್ಸ್​ ಅವರನ್ನು ಎರಡು ಕೋಟಿ ನೀಡಿ ಖರೀದಿ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್​ನಲ್ಲಿ ಹೀನಾಯ​ ಸೋಲು.. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ RCB ಆಟಗಾರ..!

https://newsfirstlive.com/wp-content/uploads/2023/11/Devid-wille.jpg

Load More