newsfirstkannada.com

ಸುರಂಗದೊಳಗಿರೋ 40 ಕಾರ್ಮಿಕರಿಗೆ ಊಟ, ಆಕ್ಸಿಜನ್ ಪೂರೈಕೆ; ರಕ್ಷಿಸಲು ಹಗಲು, ರಾತ್ರಿ ಹರಸಾಹಸ

Share :

13-11-2023

  NDRF ಮತ್ತು SDRF ತಂಡದಿಂದ 40 ಕಾರ್ಮಿಕರ ರಕ್ಷಣಾ ಕಾರ್ಯ

  ಕಾರ್ಮಿಕರು ಸಿಲುಕಿರೋ 60 ಮೀಟರ್ ಸಮೀಪಕ್ಕೆ ತಲುಪಿದ ಸಿಬ್ಬಂದಿ

  ಸುರಂಗದಲ್ಲಿರೋ ಕಾರ್ಮಿಕರಿಗೆ ಆಮ್ಲಜನಕ, ಅಗತ್ಯ ಆಹಾರ ಪೂರೈಕೆ

ಉತ್ತರಕಾಶಿ: ಉತ್ತರಾಖಂಡ್‌ನಲ್ಲಿ ನಿರ್ಮಾಣ ಹಂತದ ಸುರಂಗದೊಳಗೆ ಭೂಕುಸಿತ ಸಂಭವಿಸಿದೆ. ಈ ಅನಾಹುತದ ಪರಿಣಾಮ ಕಳೆದ 24 ಗಂಟೆಯಿಂದಲೂ 40 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದಾರೆ. ನಿನ್ನೆಯಿಂದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.

ಉತ್ತರಕಾಶಿಯ ಸುರಂಗ ಕಾಮಗಾರಿ ನಡೆಯುತ್ತಿದ್ದ ಪ್ರದೇಶಕ್ಕೆ NDRF ಮತ್ತು SDRF ತಂಡ ಆಗಮಿಸಿದೆ. ಹಿರಿಯ ಅಧಿಕಾರಿಗಳು ಭೂಕುಸಿತದಲ್ಲಿ ಸಿಲುಕಿರುವ 40 ಕಾರ್ಮಿಕರು ಸುರಕ್ಷಿತರಾಗಿದ್ದಾರೆ ಅನ್ನೋ ಮಾಹಿತಿ ನೀಡಿದ್ದಾರೆ. ಟನಲ್‌ನಲ್ಲಿ ಸಿಲುಕಿಕೊಂಡವರಿಗೆ ಯಾವುದೇ ತೊಂದರೆಯಾಗಿಲ್ಲ. 40 ಕಾರ್ಮಿಕರಿಗೆ ಅಗತ್ಯವಾದ ಆಮ್ಲಜನಕ ಹಾಗೂ ಆಹಾರವನ್ನು ಪೂರೈಸಲಾಗುತ್ತಿದೆ ಎಂದಿದ್ದಾರೆ. ಹಗಲು, ರಾತ್ರಿ ಕಾರ್ಮಿಕರನ್ನು ರಕ್ಷಿಸೋ ಕಾರ್ಯಾಚರಣೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಕಾರ್ಮಿಕರು ಸಿಲುಕಿರೋ 60 ಮೀಟರ್ ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ತಲುಪಿದ್ದಾರೆ. ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಉತ್ತರಕಾಶಿಯ ಬ್ರಹ್ಮಖಾಲ್​-ಯಮುನೋತ್ರಿ ಹೆದ್ದಾರಿಯಲ್ಲಿ ದಾಂಡಲ್​ವರೆಗಿನ ಸುರಂಗ ಮಾರ್ಗ ಕಾಮಗಾರಿ ಇದಾಗಿದೆ. 4.5 ಕಿಮೀ ಸುರಂಗ ಮಾರ್ಗವನ್ನು ನವಯುಗ ಕಂಪನಿಯು ನಿರ್ಮಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುರಂಗದೊಳಗಿರೋ 40 ಕಾರ್ಮಿಕರಿಗೆ ಊಟ, ಆಕ್ಸಿಜನ್ ಪೂರೈಕೆ; ರಕ್ಷಿಸಲು ಹಗಲು, ರಾತ್ರಿ ಹರಸಾಹಸ

https://newsfirstlive.com/wp-content/uploads/2023/11/Uttarakashi-Tunnel.jpg

Load More