ದೀಪಾವಳಿ ಮುಗಿಯುತ್ತಿದ್ದಂತೆ JDS-BJP ಶಾಸಕರು ಕಾಂಗ್ರೆಸ್ ಸೇರ್ತಾರಾ?
ಚುನಾವಣೆಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಷ್ಟೇ ಅಂತ DCM ಲೇವಡಿ
ಆಪರೇಷನ್ ಹಸ್ತದಿಂದ ಭಯ ಬಿದ್ದಿರುವ ಕಮಲ-ದಳಕ್ಕೆ ಶಾಕಿಂಗ್ ಗ್ಯಾರಂಟಿ
ರಾಜ್ಯದಲ್ಲಿ ಆಪರೇಷನ್ ಪಾಲಿಟಿಕ್ಸ್ ಜೋರಾಗಿದೆ. ಮಾಜಿ ಸಿಎಂ ಹೆಚ್ಡಿಕೆ, ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಆಪರೇಷನ್ ಹಸ್ತ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ಕಿಡಿ ಕಾರಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್ಗೆ ಭಯ ಏಕೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಗುಪ್ತ ವರದಿಯೊಂದರ ರಹಸ್ಯ ಬಿಚ್ಚಿಟ್ಟಿದ್ದಾರೆ. ಬಾಂಬೆ ದಾಳಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದು, ನವೆಂಬರ್ 15ರ ರಹಸ್ಯ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕಂಪನವೇ ಸೃಷ್ಟಿಸಿದೆ.
ಬಿಜೆಪಿಗೆ ಒಬ್ಬ ಎಂಎಲ್ಎನಾ ತಗೊಳ್ಳೋಕೆ ಆಗಲ್ಲ. ನವೆಂಬರ್ 15ರ ನಂತರ ನೋಡ್ತಾಯಿರಿ.. ಹೀಗೆ ಡೆಲ್ಲಿ ಅಂಗಳದಲ್ಲಿ ಬಹುದಿನಗಳ ಬಳಿಕ ಕಾಣಿಸಿದ ಡಿಸಿಎಂ ಡಿಕೆ ಶಿವಕುಮಾರ್ ಉರುಳಿಸಿದ ಸಸ್ಪೆನ್ಸ್ ದಾಳ ಇದು. ಈ ದಾಳದ ಹಿಂದೆ ಬಲಿಷ್ಠ ಲೆಕ್ಕಾಚಾರಗಳು ಅಡಕವಾಗಿವೆ. ಕಳೆದ 5 ತಿಂಗಳಿಂದ ಆಪರೇಷನ್ ಸುತ್ತವೇ ಪಾಲಿಟಿಕ್ಸ್ ಪ್ರದಕ್ಷಿಣೆ ಹಾಕ್ತಿದೆ. ಇದಕ್ಕೆ ಲೋಕಸಭಾ ಎಲೆಕ್ಷನ್ ದಿನಗಳೇ ಮುಹೂರ್ತವಾಗಿ ಪರಿಗಣನೆ ಆಗಿದೆ.
ಲೋಕಸಭೆ ಎಲೆಕ್ಷನ್ಗೂ ಮುನ್ನವೇ ಆಪರೇಷನ್ ಸುನಾಮಿ!
ಬಿಜೆಪಿ ಲೋಕಸಭೆಯ ಲೆಕ್ಕ ಹಾಕ್ತಿದ್ರೆ, ಕಾಂಗ್ರೆಸ್ ನವೆಂಬರ್ 15ನೇ ತಾರೀಖಿನ ಬಳಿಕವೇ ಚೆಕ್ಮೇಟ್ ಇಟ್ಟಿದೆ. ದೀಪಾವಳಿ ಮುಗಿದ ನಂತರ ಹಲವು ಜೆಡಿಎಸ್-ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಡಿಸಿಎಂ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೀಪಾವಳಿ ನಂತರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳ ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಆಪರೇಷನ್ ಹಸ್ತದ ಭಯಬಿದ್ದಿರುವ ಕಮಲ-ದಳಕ್ಕೆ ಶಾಕಿಂಗ್ ಕಾದಿದೆ ಅಂತ ಸುಳಿವು ನೀಡಿದ್ದಾರೆ.
ಪಕ್ಷಕ್ಕೆ ಯಾರೋ ಬರ್ತಾರೆ ಅಂದಿರಲ್ಲ. ಅದಕ್ಕೆ ಡೇಟ್ ಡೇಟ್ ಒಂದಿದೆ, ಅಡ್ಮಿಷನ್ ಡೇಟ್ ನವೆಂಬರ್ 15ಕ್ಕೆ.
ಡಿ.ಕೆ.ಶಿವಕುಮಾರ್, ಡಿಸಿಎಂ
ನಮ್ಮ ಒಬ್ಬ ಶಾಸಕರನ್ನೂ ಸೆಳೆಯಲು ಸಾಧ್ಯವಿಲ್ಲ!
ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಆಪರೇಷನ್ ಮೀಟಿಂಗ್ಗೆ ಕೌಂಟರ್ ಕೊಟ್ಟ ಕಾಂಗ್ರೆಸ್ ಕ್ಯಾಪ್ಟನ್, ನಮ್ಮ ಒಬ್ಬ ಶಾಸಕರನ್ನೂ ಅವರಿಗೆ ಕರೆದುಕೊಳ್ಳಲು ಆಗಲ್ಲ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಬಗ್ಗೆ ತೀರ್ಮಾನ ಮಾಡಲು ಆಗಿಲ್ಲ. ಚುನಾವಣೆಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನವಷ್ಟೇ ಅಂತ ಲೇವಡಿ ಮಾಡಿದ್ದಾರೆ.
‘ಒಬ್ಬ ಎಂಎಲ್ಎ ಹೋಗಲ್ಲ’
ಒಬ್ಬ ಎಂಎಲ್ಎಯನ್ನು ಅವರು ಕರೆದುಕೊಳ್ಳೋಕೆ ಆಗಲ್ಲ. ಅವರು ಮಾಡಿದರು ಅದು ವಿಫಲವಾಗುತ್ತದೆ. ಎಲೆಕ್ಷನ್ಗೂ ಮೊದಲೇ ಗೊಂದಲ ಸೃಷ್ಟಿ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಪಕ್ಷದ ನಾಯಕತ್ವದ ಬಗ್ಗೆ ತೀರ್ಮಾನ ಮಾಡೋಕೆ ಆಗಿಲ್ಲ. ಅವರ ಪರಿಸ್ಥಿತಿ ಚೆನ್ನಾಗಿಲ್ಲ.
ಡಿ.ಕೆ.ಶಿವಕುಮಾರ್, ಡಿಸಿಎಂ
ಇನ್ನು, ಬಿಜೆಪಿಯವರಿಗೆ ಅಸ್ಥಿತ್ವದಲ್ಲಿಲ್ಲದ ಪರಿಸ್ಥಿತಿ ಎದುರಾಗಿದೆ ಅಂತ ವ್ಯಂಗ್ಯವಾಡಿದ ಡಿಕೆಶಿ, ಎಲ್ಲ ಮೂಮೆಂಟ್ ಗೊತ್ತಿದೆ, ನಿರುದ್ಯೋಗಿಗಳು ಚಪಲಕ್ಕೆ ಮಾಡ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.
136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್ಗೇಕೆ ಭಯ?
ಡಿ.ಕೆ ಶಿವಕುಮಾರ್ ಹೇಳಿದ ಮೂಮೆಂಟ್ಸ್ ಬೆಂಗಳೂರಲ್ಲ. ಮತ್ತೊಮ್ಮೆ ಮುಂಬೈನಲ್ಲಿ ನಡೀತಿದೆ ಅನ್ನೋದು ಗುಪ್ತಚರ ವರದಿ ಸರ್ಕಾರಕ್ಕೆ ಸಿಕ್ಕಿದೆಯಂತೆ. ಹೀಗಾಗಿ ಆಪರೇಷನ್ ಕಮಲ ತಡೆಯಲು ಈ ಯತ್ನ ಸಾಗಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ. 136 ಸ್ಪಷ್ಟ ಬಹುಮತ ಇದ್ರೂ ಕಾಂಗ್ರೆಸ್ನವರಿಗೇಕೆ ಭಯ ಪ್ರಶ್ನಿಸಿದ್ದಾರೆ.
ನವೆಂಬರ್ 15ರ ಗುಮ್ಮ ತೋರಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, 50ಕ್ಕೂ ಹೆಚ್ಚು ಹಾಲಿ ಮಾಜಿಗಳು ಹಸ್ತದ ಮನೆಯ ಗೃಹ ಪ್ರವೇಶ ಮಾಡಲಿದ್ದಾರೆ ಅಂತ ಹೇಳಿದ್ದಾರೆ. ಡಿಸಿಎಂ ಆಡಿದ ಇದೇ ಮಾತು ಕಮಲ-ದಳ ಮೈತ್ರಿ ಕೂಟದ ಅಧಿಕಾರದ ಕನಸಿಗೆ ಕೊಳ್ಳಿ ಇಡುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ