‘ಅವನು ಅಶ್ವತ್ಥ್ ನಾರಾಯಣ ಅಲ್ಲ.. ನವರಂಗಿ ನಾರಾಯಣ’
‘ಕಳ್ಳರನ್ನ ರಕ್ಷಣೆ ಮಾಡೋ ವಿಚಾರದಲ್ಲಿ ಡಾಕ್ಟರೇಟ್ ಪಡೆಯಲಿ’
ಅಶ್ವತ್ಥ್ ನಾರಾಯಣ ಮೆಂಟಲ್ ಟೆನ್ಷನ್‌ನಲ್ಲಿದ್ದಾರೆ ಎಂದ ಡಿಕೆಶಿ
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ನಾಯಕರ ವಾಕ್ಸಮರ ಜೋರಾಗಿದೆ. ಗುತ್ತಿಗೆದಾರರ ಕಮಿಷನ್ ಆರೋಪದಲ್ಲಿ ಡಿಕೆಶಿ ವಿರುದ್ಧ ಅಶ್ವತ್ಥ್ ನಾರಾಯಣ, ಗೋಪಾಲಯ್ಯ, ಸಿ.ಟಿ ರವಿ ಸೇರಿದಂತೆ ಸಾಲು, ಸಾಲು ಕೇಸರಿ ಲೀಡರ್ಸ್ ವಾಗ್ದಾಳಿ ನಡೆಸಿದ್ದರು. ಇಂದು ಗುತ್ತಿಗೆದಾರರ ಸಂಘದ ಸದಸ್ಯರು ಸುದ್ದಿಗೋಷ್ಟಿ ನಡೆಸಿದ್ದು ಯೂ ಟರ್ನ್ ಹೊಡೆದಿದ್ದಾರೆ. ಡಿಸಿಎಂ ವಿರುದ್ಧ ನಾನು ಭಾವುಕನಾಗಿ ಹೇಳಿಕೆ ಕೊಟ್ಟೆ. ನಾನು ಡಿಕೆ ಶಿವಕುಮಾರ್ ಬಳಿ ಕ್ಷಮೆ ಕೇಳುತ್ತೇನೆ. ಅಜ್ಜಯ್ಯನ ಮೇಲೆ ಆಣೆ ಮಾಡಲೆಂಬ ಹೇಳಿಕೆ ಹಿಂಪಡೆಯುತ್ತೇನೆ ಅನ್ನೋ ಹೇಳಿಕೆ ನೀಡಿದ್ದಾರೆ.
ಗುತ್ತಿಗೆದಾರರು ಈ ರೀತಿ ಯು ಟರ್ನ್ ಹೊಡೆಯುತ್ತಿದ್ದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ. ನಾನು ಗುತ್ತಿಗೆದಾರರ ಬಗ್ಗೆ ಮಾತನಾಡೋದಿಲ್ಲ. ಅವರನ್ನ ಬಿಡಿ, ಅವರು ಕಷ್ಟದಲ್ಲಿದ್ದಾರೆ. ಆದರೆ ಅವರನ್ನು ಬಳಸಿಕೊಂಡರಲ್ಲ ಅವರದ್ದೇ ಇದೆಲ್ಲಾ ತಂತ್ರ ಎಂದು ಹೇಳಿದರು.
‘ನವರಂಗಿ ನಾರಾಯಣರ ಬಗ್ಗೆಯೆಲ್ಲ ಮಾತಾಡಬೇಕಿದೆ’
ಗುತ್ತಿಗೆದಾರರನ್ನು ಬಳಸಿಕೊಂಡ ನವರಂಗಿ ನಾರಾಯಣ, ಅದ್ಯಾವುದೋ ರವಿ, ಮಹಾಲಕ್ಷ್ಮಿ ಲೇಔಟ್ ಗೋಪಾಲಸ್ವಾಮಿ ಇವರ ಬಗ್ಗೆಯೆಲ್ಲ ಮಾತಾಡಬೇಕಿದೆ ಮಾತನಾಡುತ್ತೇನೆ. ನನ್ನ ಬಳಿ ಒಬ್ಬೊಬ್ಬರಾಗಿಯೇ ಬರುತ್ತಿದ್ದಾರೆ. ಮೊನ್ನೆಯಷ್ಟೇ ಬಿಜೆಪಿ ಶಾಸಕ ಮುನಿರತ್ನ ಅವರು ಬಂದು ಏನೇನೋ ಹೇಳಿಕೊಂಡರು. ಚಿಕ್ಕಪೇಟೆ ಶಾಸಕರು ಬಂದು ಅವರದ್ದು ಏನೇನೂ ಮಾತನಾಡಿದ್ರು ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ಕಾಲು ಎಳೆದಿದ್ದಾರೆ.
ಇನ್ನು, ನಮ್ಮ ಅಜ್ಜಯ್ಯನ ಸಹವಾಸ ಇವರಿಗೆಲ್ಲ ಗೊತ್ತಿಲ್ಲ. ದಾಖಲೆಗಳ ಬಿಡುಗಡೆ ವಿಷಯ ಈಗ ಬೇಡ. ನವರಂಗಿದೂ ಗೊತ್ತಿದೆ, ಸಾಮ್ರಾಟನದ್ದೂ ನನಗೆ ಗೊತ್ತಿದೆ. ಒಂದೇ ದಿನ ಎಲ್ಲಾ ದಾಖಲೆ ಬಿಡುಗಡೆ ಮಾಡೋದು ಬೇಡ. ಒಂದೇ ದಿನ ಆತಂಕಕ್ಕೆ ಒಳಗಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ