ಡಿಸಿಎಂ ಡಿಕೆಶಿ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ದಿಢೀರ್ ಭೇಟಿ
ಬ್ರ್ಯಾಂಡ್ ಬೆಂಗಳೂರು ಬಗ್ಗೆ ಉಭಯ ನಾಯಕರಿಂದ ಮಹತ್ವದ ಚರ್ಚೆ
ಬೆಂಗಳೂರು ಅಭಿವೃದ್ಧಿಗಾಗಿ ಡಿಕೆಶಿಗೆ ಸಲಹೆ ಕೊಟ್ಟ ಬಸವರಾಜ್ ಬೊಮ್ಮಾಯಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಸಲಹೆ ಪಡೆಯುವ ಉದ್ದೇಶಕ್ಕಾಗಿ ಈಗಾಗಲೇ ‘ಬ್ರ್ಯಾಂಡ್ ಬೆಂಗಳೂರು ಪೋರ್ಟಲ್’ ರೂಪಿಸಲಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಖುದ್ದು ಬ್ರ್ಯಾಂಡ್ ಬೆಂಗಳೂರು ಪೋರ್ಟಲ್ಗೆ ಚಾಲನೆ ನೀಡಿದ್ದಾರೆ.
ಪೋರ್ಟಲ್ ಸ್ಥಾಪನೆ ಉದ್ದೇಶ ದೇಶ ಮತ್ತು ವಿದೇಶದ ಮೂಲೆ ಮೂಲೆಗಳಲ್ಲಿರೋ ಕನ್ನಡಿಗರು ಬೆಂಗಳೂರು ಅಭಿವೃದ್ಧಿ ಸಂಬಂಧ ಸಲಹೆ ನೀಡಬಹುದು. ಅದಕ್ಕಾಗಿ ಜೂನ್ 30ನೇ ತಾರೀಕಿನವರೆಗೂ ಅವಕಾಶ ನೀಡಲಾಗಿದೆ. ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಸಲಹೆ ಕೊಡಬಹುದು.
ಇನ್ನ, ಡಿಸಿಎಂ ಡಿ.ಕೆ ಶಿವಕುಮಾರ್ ಈಗಾಗಲೇ ಬೆಂಗಳೂರು ಸರ್ವಪಕ್ಷ ಶಾಸಕರ ಸಭೆ ನಡೆಸಿದ್ದರು. ಜತೆಗೆ ನಗರದ ಎಲ್ಲಾ ವರ್ಗಗಳ ಬ್ರ್ಯಾಂಡ್ ಅಂಬಾಸಿಡರ್‌ಗಳ ಜತೆ ಕೂಡ ಚರ್ಚಿಸಿದ್ದರು. ಹಾಗೆಯೇ ಈಗ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಬೆಂಗಳೂರಿನ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಹಲವು ಸಲಹೆಗಳನ್ನು ಬೊಮ್ಮಾಯಿ ಡಿ.ಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ