ಕಾಂಗ್ರೆಸ್‌ಗೆ ಬರುವಂತೆ ಮತ್ತೊಮ್ಮೆ ಆಫರ್ ನೀಡಿರೋದು ನಿಜ
ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಬಿಜೆಪಿ ಶಾಸಕರೂ ಬಂದಿದ್ದರು
ನಿನಗೂ ಅಧಿಕಾರದ ಅವಕಾಶ ಸಿಗಲಿದೆ ಅನ್ನೋ ಆಫರ್ ಕೊಟ್ಟಿದ್ದಾರೆ
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಯುತ್ತಾ? ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡರು ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಆಪರೇಷನ್ ಹಸ್ತದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ಬಿಗ್ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಜೆಡಿಎಸ್ ಹಿರಿಯ ನಾಯಕ ಜಿ.ಟಿ ದೇವೇಗೌಡರನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು. ಈ ಬಗ್ಗೆ ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯಿಸಿರುವ ಜಿ.ಟಿ ದೇವೇಗೌಡರು, ಹೌದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನ್ನನ್ನ ಭೇಟಿ ಮಾಡಿದ್ದು ನಿಜ. ಕಾಂಗ್ರೆಸ್‌ಗೆ ಬರುವಂತೆ ಮತ್ತೊಮ್ಮೆ ಆಫರ್ ನೀಡಿದ್ದಾರೆ ಎಂದು ಹೇಳಿದರು.
ಸದಾಶಿವನಗರದ ತಮ್ಮ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಂದಿದ್ದರು. ಅವರ ಜೊತೆಗೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ಪುಲಕೇಶಿ ನಗರ, ನೆಲಮಂಗಲ ಶಾಸಕರೂ ಬಂದಿದ್ದರು. ಈ ಭೇಟಿ ವೇಳೆ ಈಗಲೂ ಅವಕಾಶ ಇದೆ ಕಾಂಗ್ರೆಸ್ ಪಕ್ಷಕ್ಕೆ ಬರುವ ಮನಸು ಮಾಡಿ ಅಂತಾ ಹೇಳಿದ್ದಾರೆ ಎಂದು ಜಿ.ಟಿ ದೇವೇಗೌಡರು ತಿಳಿಸಿದ್ದಾರೆ.
ಭೇಟಿಯ ವೇಳೆ ಡಿಕೆ ಶಿವಕುಮಾರ್ ಅವರು ನೋಡು ನಮ್ಮದೇ ಸರ್ಕಾರ ಇದೆ. ನಿನಗೂ ಅಧಿಕಾರದ ಅವಕಾಶ ಸಿಗಲಿದೆ ಅಂತಾ ಹೇಳಿದರು. ಅದಕ್ಕೆ ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ಜನತಾದಳ ಪಕ್ಷವ್ನು ಕಟ್ಟುತ್ತಿದ್ದೇನೆ. ನಿಮ್ಮಲ್ಲೇ 135 ಜನ ಶಾಸಕರು ಇದ್ದಾರೆ. ನೀವು ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ ಬರಲ್ಲ ಅಂತ ಹೇಳಿದ್ದೇನೆ ಎಂದಿದ್ದಾರೆ.
ಜಿ.ಟಿ ದೇವೇಗೌಡರ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರುವ ವಿಚಾರವನ್ನು ನಿನಗೆ ಬಿಟ್ಟಿದ್ದೇನೆ. ನಾನು ಒತ್ತಾಯ ಮಾಡಲ್ಲ. ನಿನ್ನ ಇಷ್ಟ ನೋಡಪ್ಪ ಅಂತಾ ಹೇಳಿ ಹೋಗಿದ್ದಾರೆ ಎಂದು ಜಿ.ಟಿ ದೇವೇಗೌಡರು ನ್ಯೂಸ್ ಫಸ್ಟ್‌ಗೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ