‘ಸಾತನೂರು ಟೆಂಟಲ್ಲಿ ಬ್ಲೂ ಫಿಲ್ಮ್ ತೋರಿಸಿ ಜೀವನ ಮಾಡ್ತಿದ್ದವರು’
ನಿಮ್ಮ ಗೌರವ ಹಾಳಾಗ್ತಿದೆ ಕುಮಾರಣ್ಣ ಎಂದು ಎಚ್ಚರಿಸಿದ ಡಿಕೆಶಿ
ಬ್ಲೂ ಫಿಲ್ಮ್ ತೋರಿಸೋ ಕೆಲಸ ಮಾಡ್ತಿದ್ದೆ ಅಂದ್ರೆ ರಾಜಕೀಯಕ್ಕೆ ಗುಡ್‌ಬೈ!
ಬೆಂಗಳೂರು: ಸಾತನೂರು ಟೆಂಟಲ್ಲಿ ಬ್ಲೂ ಫಿಲ್ಮ್ ತೋರಿಸಿ ಜೀವನ ಮಾಡ್ತಿದ್ದವರು ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ರಾಜಕಾರಣದಲ್ಲಿ ನಾನು ಅಂತಹದೇನಾದ್ರು ಕೆಲಸ ಮಾಡಿದ್ರೆ ಇವತ್ತೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಬಿಡ್ತೀನಿ ಎಂದು ಹೆಚ್‌ಡಿಕೆಗೆ ಓಪನ್ ಚಾಲೆಂಜ್ ಸಹ ಹಾಕಿದ್ದಾರೆ.
ಸುದ್ದಿಗಾರರೊದಿಗೆ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಫಸ್ಟ್ರೇಷನ್ ಆಗಿದ್ದು, ಹತಾಶರಾಗಿ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಎಲೆಕ್ಷನ್‌ಗೆ ನಿಂತು ಸೋತಿದ್ದರು. ಆಗ್ಯಾಕೆ ಈ ರೀತಿ ಮಾತಾಡಲಿಲ್ಲ. ಅವರ ತಂದೆಯವರು ನನ್ನ ವಿರುದ್ಧ ಚುನಾವಣೆಗೆ ನಿಂತಿದ್ರಲ್ಲ ಯಾಕೆ ಮಾತನಾಡಿಲ್ಲ. ಒಬ್ಬ ರಾಜ್ಯದ ಮಾಜಿ ಮುಖ್ಯಮಂತ್ರಿಗೆ ಒಂದು ಘನತೆ, ಗೌರವ ಇರಬೇಕು ಎಂದು ತರಾಟೆ ತೆಗೆದುಕೊಂಡಿದ್ದಾರೆ.
ನೀವು ಏನೇನೋ ಮಾತಾಡ್ತಿದ್ದೀರಿ ಅಂದ್ರೆ, ನಿಮ್ಮ ಗೌರವ ಹಾಳಾಗ್ತಿದೆ ಕುಮಾರಣ್ಣ. ಇದರಿಂದ ನಿಮಗೆ ಏನು ಒಳ್ಳೇದು ಆಗೋದಿಲ್ಲ. ಜನ ನಿಮ್ಮನ್ನು ನೋಡಿ ನಗುತ್ತಾರೆ. ನಮ್ಮ ಕ್ಷೇತ್ರದ ಜನರನ್ನ ಕೇಳಿ, ನಿಮ್ಮ ಕಾರ್ಯಕರ್ತರನ್ನೇ ಕೇಳಿ. ಯಾರಾದ್ರು ಒಬ್ಬ ನಾನು ಬ್ಲೂ ಫಿಲ್ಮ್ ತೋರಿಸೋ ಕೆಲಸ ಮಾಡ್ತಿದ್ದೆ ಅಂದ್ರೆ ನಾನು ರಾಜಕೀಯದಿಂದಲೇ ನಿವೃತ್ತಿ ಆಗ್ತೀನಿ. ನೀವೇನು ಮಾಡ್ತೀರಿ ಆಗ ನಿಮ್ಮ ಸ್ಟ್ಯಾಂಡ್ ಏನು ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: VIDEO: ‘ಟೆಂಟಲ್ಲಿ ಬ್ಲೂ ಫಿಲ್ಮ್ ತೋರಿಸಿ ಜೀವನ ಮಾಡ್ತಿದ್ದ ಡಿ.ಕೆ ಶಿವಕುಮಾರ್’- ಹೆಚ್.ಡಿ ಕುಮಾರಸ್ವಾಮಿ
ಇದೇ ವೇಳೆ ಕರೆಂಟ್ ಕದ್ದ ಆರೋಪದಲ್ಲಿ ಕುಮಾರಸ್ವಾಮಿ ಅವರ ಫೋಟೋ ಬಳಸಿ ಪೋಸ್ಟರ್ ಹಾಕಿದ್ದು ಸರಿಯಲ್ಲ, ಅವರ ವರ್ತನೆ ತಪ್ಪು. ಕಾಂಗ್ರೆಸ್ ಕಾರ್ಯಕರ್ತರೇ ಹಾಕಿದ್ರೂ ತಪ್ಪು. ಅಂತಹ ಕೀಳು ರಾಜಕಾರಣಕ್ಕೆ ನಾನು ಪ್ರೋತ್ಸಾಹ ಕೊಡಲ್ಲ ಎಂದ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ