ಕಾಂಗ್ರೆಸ್ ಬಿಟ್ಟು ಹೋಗಿದ್ದ ಬಿಜೆಪಿ ಶಾಸಕರು ಮರಳಿ ಗೂಡಿನತ್ತ..
ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಬರುತ್ತಾರೆ ಎಂದ ಡಿಸಿಎಂ
ಸರ್ಕಾರದ ವಿರುದ್ಧ ಹೋರಾಟ ಮಾಡೋ ನಿಮ್ಮ ಲೀಡರ್ ಯಾರು?
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುಂಚೆ ರಾಜ್ಯದಲ್ಲಿ ಆಪರೇಷನ್ ರಾಜಕೀಯ ಜೋರಾಗೋ ಎಲ್ಲಾ ಲಕ್ಷಣಗಳು ಕಾಣ್ತಿದೆ. 2019ರಲ್ಲಿ ಕಾಂಗ್ರೆಸ್ ಬಿಟ್ಟು ಹೋಗಿದ್ದ ಬಿಜೆಪಿ ಶಾಸಕರು ಮರಳಿ ಗೂಡಿಗೆ ಬರುತ್ತಾರೆ ಎನ್ನಲಾಗ್ತಿದೆ. ಬಿಜೆಪಿ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಕಾಂಗ್ರೆಸ್ ನಾಯಕರಿಗೆ ಆತ್ಮವಿಶ್ವಾಸ ಹೆಚ್ಚಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ನಾಯಕರು ಆಪರೇಷನ್ ಹಸ್ತದ ಬಗ್ಗೆಯೇ ತಲೆ ಕೆಡಿಸಿಕೊಂಡಂತೆ ಕಾಣುತ್ತಿದೆ. ಈ ದಿಢೀರ್ ರಾಜಕೀಯ ಬೆಳವಣಿಗೆಗಳ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಬೇರೆಯವರ ಮನಸ್ಥಿತಿ ಬಗ್ಗೆ ಹೇಳಲಾಗಲ್ಲ’- ಬಿಜೆಪಿ ಶಾಸಕರ ಆಪರೇಷನ್‌ಗೆ ಅಶ್ವತ್ಥ್ ನಾರಾಯಣ್ ಹೊಸ ಟ್ವಿಸ್ಟ್!
ಬಿಜೆಪಿ ವಲಸೆ ಶಾಸಕರ ‘ಘರ್ ವಾಪ್ಸಿ’ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಯಾರಾದರೂ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಇಲ್ಲಿಗೆ ಬರುತ್ತಾರೆ. ಭಾರತಕ್ಕೆ ಒಳ್ಳೆಯದು ಮಾಡಬೇಕು ಅಂದ್ರೆ ಕಾಂಗ್ರೆಸ್ ಪಕ್ಷ ಸೇರಬಹುದು ಎಂದಿದ್ದಾರೆ. ಇನ್ನು, ಕರ್ನಾಟಕವೂ ಸೇರಿದಂತೆ ಬೇರೆ, ಬೇರೆ ರಾಜ್ಯ ರಾಜಕೀಯದಲ್ಲಿ ಏನಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಇವರು ಶಾಸಕರನ್ನು ಆಪರೇಷನ್ ಮಾಡಿದ್ದು ಸರೀನಾ? ಅವರದ್ದೆಲ್ಲಾ ಬಹಳ ಕರೆಕ್ಟ್. ನಾವು ಮಾಡಿದ್ರೆ ತಪ್ಪಾ? ಅವರವರ ಅನುಕೂಲಕ್ಕೆ ತಕ್ಕಂತೆ ಅವರು ತೀರ್ಮಾನ ಮಾಡಿಕೊಳ್ತಾರೆ. ಯಾವ ಯಾವ ಸಂದರ್ಭದಲ್ಲಿ ಯಾರೆಲ್ಲಾ ಏನೇನು ಮಾತಾಡೋಕೆ ಬಂದಿದ್ರು ಅಂತಾ ಬಿಚ್ಚಿಡಬೇಕಾ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಾರ್ಟಿ ಸಮುದ್ರ ಇದ್ದಂಗೆ. ಯಾರಾದ್ರೂ ಬರಬಹುದು ಪಕ್ಷಕ್ಕೆ ಬರಬಹುದು. ರಾಜಕೀಯ ಭವಿಷ್ಯಕ್ಕೆ, ಭಾರತದ ಒಳಿತಿಗೆ ಕಾಂಗ್ರೆಸ್ ಬೇಕು ಅಂತಾ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.@DKShivakumar @INCKarnataka#DKShivakumar #Congress #BJP #JDS #NewsFirstKannada pic.twitter.com/XkV1fdYaQg
— NewsFirst Kannada (@NewsFirstKan) August 19, 2023
‘ಹೋರಾಟಕ್ಕೂ ಮೊದಲು ನಾಯಕನ ಆಯ್ಕೆ ಮಾಡಿ’
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದ್ರೂ ಪ್ರತಿಭಟನೆ ಮಾಡಬಹುದು. ಯಾರೂ ಪ್ರತಿಭಟನೆ ಮಾಡಬೇಡಿ ಅಂತಾ ಹೇಳೋಕೆ ಆಗಲ್ಲ. ಮೊದಲು ಅವರ ನಾಯಕರು ಯಾರು ಅಂತಾ ತೀರ್ಮಾನ ಮಾಡಿಕೊಳ್ಳಲಿ. ನಂತರ ಪ್ರತಿಭಟನೆ ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ