newsfirstkannada.com

VIDEO: ಬಿಜೆಪಿ-ಜೆಡಿಎಸ್‌ಗೆ ವೋಟ್‌ ಹಾಕಿದ್ರೆ ‘ಗ್ಯಾರಂಟಿ’ ಯೋಜನೆಗಳು ರದ್ದು? ಕಾರ್ಯಕರ್ತರ ಜೊತೆ ಡಿಕೆಶಿ ಶಾಕಿಂಗ್ ಮಾತು

Share :

20-11-2023

    ಗ್ಯಾರಂಟಿ ರದ್ದಾಗುವ ಬಗ್ಗೆ ಪ್ರಚಾರಕ್ಕೆ ಮಾಡುವಂತೆ ಕಾರ್ಯಕರ್ತರಿಗೆ ಕರೆ

    ಮತದಾರರಿಗೆ ‘ಲೋಕ’ ಎಚ್ಚರಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

    ಟೀಕೆ ಮಾಡ್ತಿದ್ದವರೇ ಗ್ಯಾರಂಟಿ ಕೊಡ್ತಿದ್ದಾರೆ ಅಂತ ಲೇವಡಿ

ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರೋ ಯೋಜನೆಗಳೆಲ್ಲಾ ರದ್ದಾಗುತ್ತಾ? ಹೀಗಂತ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ದು. ಅರೇ ಯೋಜನೆ ಜಾರಿಯಾಗಿ ವರ್ಷವೂ ಆಗಿಲ್ಲ ಅಷ್ಟರಲ್ಲೇ ಹೀಗ್ಯಾಕೆ ಅಂದ್ರೂ ಅಂದ್ರಾ ಅದಕ್ಕೆ ಕಾರಣ ಲೋಕ ಕದನ. ರಾಜ್ಯ ಸರ್ಕಾರ. ಗ್ಯಾರಂಟಿ ಸರ್ಕಾರ ಅಂತಲೇ ದೇಶದಲ್ಲಿ ಫೇಮಸ್​ ಆಗಿದೆ. ರಾಜ್ಯ ಜನರಿಗೆ ಗ್ಯಾರಂಟಿಗಳ ಸರಮಾಲೆಯನ್ನೇ ಹಾಕಿ ಅಧಿಕಾರದ ಗದ್ದುಗೆ ಏರಿತ್ತು. ಆದ್ರೀಗ ಅದೇ ಗ್ಯಾರಂಟಿಗಳು ರದ್ದಾಗುತ್ತೆ ಎಂಬ ಅಚ್ಚರಿಯ ಹೇಳಿಕೆಯೊಂದು ಹೊರಬಿದ್ದಿದೆ.

ಬಿಜೆಪಿ-ಜೆಡಿಎಸ್‌ಗೆ ವೋಟ್‌ ಹಾಕಿದ್ರೆ ‘ಗ್ಯಾರಂಟಿ’ ರದ್ದು
ರಾಜ್ಯದ ಮತದಾರರಿಗೆ ಡಿಸಿಎಂ ಶಿವಕುಮಾರ್​ ಎಚ್ಚರಿಕೆ

ಹೀಗೆ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಈ ಮಾತನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್​ಗೆ ವೋಟ್​ ಹಾಕಿದ್ರೆ ಗ್ಯಾರಂಟಿ ಎಲ್ಲಾ ರದ್ದಾಗುತ್ತಂತೆ. ಹಾಗಂತ ಕಾಂಗ್ರೆಸ್​ ಸರ್ಕಾರ ಯೋಜನೆಗಳನ್ನ ರದ್ದು ಮಾಡ್ತಿಲ್ಲ. ಬದಲಿಗೆ ಲೋಕ ಕದನದಲ್ಲಿ ಬಿಜೆಪಿ- ಜೆಡಿಎಸ್​ ಗೆದ್ದರೆ ಗ್ಯಾರಂಟಿಗಳನ್ನು ಬಿಡಲ್ಲ ಅಂತ ಇಂದಿರಾ ಗಾಂಧಿ ಜನ್ಮದಿನಾಚರಣೆ ವೇಳೆ ಡಿಸಿಎಂ ಪರೋಕ್ಷವಾಗಿ ರಾಜ್ಯದ ಮತದಾರರಿಗೆ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಜನರ ಬಳಿ ಪ್ರಚಾರ ಮಾಡಬೇಕೆಂದು ಕಾಂಗ್ರೆಸ್​ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ನೀವೆಲ್ಲ ಏನು ಈಗ ಪ್ರಚಾರ ಮಾಡಬೇಕು ಅಂದ್ರೆ, ಬಿಜೆಪಿಗೆ ವೋಟ್​​ ಹಾಕಿದರೆ ಅವರು ಈ ಐದು ಗ್ಯಾರಂಟಿಗಳನ್ನು ವಿತ್​ಡ್ರಾ ಮಾಡುವಂತಹ ಪರಿಸ್ಥಿತಿ ಎದುರಾಗುತ್ತೆ ಎಂದು ನೀವು ಜನರಿಗೆ ತಿಳಿಸಬೇಕು. ನಾವು ಯಾವುದೇ ಕಾರಣಕ್ಕೂ ಜಾರಿಗೆ ತಂದ ಐದು ಗ್ಯಾರಂಟಿಗಳಿಂದ ಹಿಂದೆ ಸರಿಯುವ ಮಾತೇ ಇಲ್ಲ-ಡಿಸಿಎಂ ಡಿಕೆ ಶಿವಕುಮಾರ್​

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋ ಗಾದೆ ಮಾತು ಸದ್ಯ ರಾಜಕೀಯ ಪರಿಸ್ಥಿತಿಗೆ ಹೇಳಿ ಮಾಡಿಸಿದಂತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್​ ಕೈನಲ್ಲಿದ್ದ ದಾಳವನ್ನ ಇದೀಗ ಬಿಜೆಪಿ ಉರುಳಿಸುತ್ತಿದೆ. ಗ್ಯಾರಂಟಿಗಳ ಬಗ್ಗೆ ಸದಾ ಟೀಕೆ ಮಾಡಿ ಕಾಲೆಳೆಯುತ್ತಿದ್ದ ಕೇಸರಿ ಪಡೆ ಈಗ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದೆಯಂತೆ. ಗ್ಯಾರಂಟಿ ಬಂದ್ರೆ ರಾಜ್ಯ ದಿವಾಳಿ ಆಗುತ್ತೆ ಅಂತ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ ಅಂತ ಡಿಸಿಎಂ ಲೇವಡಿ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್​ ಕೈ ಹಿಡಿದಿದ್ದ ಗ್ಯಾರಂಟಿ ಅಸ್ತ್ರ ಲೋಕಾಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರವಾಗುತ್ತಾ? ಒಂದು ವೇಳೆ ಲೋಕಾ ಕದನದಲ್ಲಿ ಕೇಸರಿ ಪಡೆ ಜಯಭೇರಿ ಬಾರಿಸಿದ್ರೆ, ಗ್ಯಾರಂಟಿಗಳನ್ನ ರದ್ದು ಮಾಡ್ತಾರಾ? ಈ ಅಂತೆ ಕಂತೆಗಳ ಪ್ರಶ್ನೆಗಳಿಗೆ ಲೋಕಾ ಯುದ್ಧದ ಬಳಿಕವೇ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಿಜೆಪಿ-ಜೆಡಿಎಸ್‌ಗೆ ವೋಟ್‌ ಹಾಕಿದ್ರೆ ‘ಗ್ಯಾರಂಟಿ’ ಯೋಜನೆಗಳು ರದ್ದು? ಕಾರ್ಯಕರ್ತರ ಜೊತೆ ಡಿಕೆಶಿ ಶಾಕಿಂಗ್ ಮಾತು

https://newsfirstlive.com/wp-content/uploads/2023/11/Dk-Shivakumar-2.jpg

Load More