newsfirstkannada.com

ಬಿಜೆಪಿ ನಾಯಕರ ಜೊತೆ ಡಿ.ಕೆ ಶಿವಕುಮಾರ್ ರಹಸ್ಯ ಚರ್ಚೆ; ಆಪರೇಷನ್ ಹಸ್ತಕ್ಕೆ ಪೋಟೋ ಸಾಕ್ಷಿ ಬಿಡುಗಡೆ

Share :

03-09-2023

    ರಾಜ್ಯದಲ್ಲಿ ಸದ್ದಿಲ್ಲದೇ ನಡೆದಿದೆ ಮೆಗಾ ಆಪರೇಷನ್ ರಾಜಕೀಯ

    ಬಿಜೆಪಿ ನಾಯಕರ ಹೆಗಲ ಮೇಲೆ ಕೈ ಹಾಕಿದ ಡಿ.ಕೆ ಶಿವಕುಮಾರ್!

    ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗಲ್ಲ ಎಂದ ಬಿಜೆಪಿಗರು

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮತ್ತೊಂದು ಮೆಗಾ ಆಪರೇಷನ್ ರಾಜಕೀಯ ನಡೆಯೋ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಹಲವು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರೋದು ಪಕ್ಕಾ ಅನ್ನೋ ಮಾತನಾಡಿದ್ರು. ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದ ಬಿಜೆಪಿ ನಾಯಕರು ನೋ ಚಾನ್ಸ್‌ ಸಾಧ್ಯವೇ ಇಲ್ಲ. ನಮ್ಮ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಹೇಳುತ್ತಿದ್ದಾರೆ. ಈ ರಾಜಕೀಯ ಹಗ್ಗ-ಜಗ್ಗಾಟದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಸದ್ದಿಲ್ಲದೇ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಂತೆ ಕಾಣುತ್ತಿದೆ.

ಯಾರು, ಯಾರ ಸಂಪರ್ಕದಲ್ಲಿದ್ದಾರೆ ನೋಡೋಣ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರನ್ನು ಡೈರೆಕ್ಟಾಗಿ ಟಚ್ ಮಾಡಿದ್ದಾರೆ. ಇತ್ತೀಚೆಗೆ ಖುದ್ದು ಡಿಸಿಎಂ ಬಿಜೆಪಿ ಮಾಜಿ ಶಾಸಕರ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಆಪರೇಷನ್ ಹಸ್ತ ಬಿಸಿ, ಬಿಸಿ ಚರ್ಚೆ ಆಗುತ್ತಿರುವಾಗಲೇ ಡಿ.ಕೆ ಶಿವಕುಮಾರ್ ಜೊತೆ ಬಿಜೆಪಿ ನಾಯಕರು ಕಾಣಿಸಿಕೊಂಡಿರೋದು ಕುತೂಹಲ ಕೆರಳಿಸಿದೆ. ಈ ಕುರಿತ ಮಹತ್ವದ ಫೋಟೋಗಳು ಬಿಡುಗಡೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಗೆ ಯಾಕಿಂಥಾ ಸ್ಥಿತಿ ಬಂತು?; ನೋಟಿಸ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ರೆಬೆಲ್ ರೇಣುಕಾಚಾರ್ಯ

ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಬಿಜೆಪಿ ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಬಿ.ಸಿ ಪಾಟೀಲ್, ಮಾಜಿ ಶಾಸಕ ರಾಜುಗೌಡ ಡಿಕೆಶಿ ಜೊತೆ ಆತ್ಮೀಯವಾಗಿ ಮಾತನಾಡಿರೋ ಫೋಟೋ ಇದೀಗ ಬಯಲಾಗಿದೆ. ಅಂದ ಹಾಗೆ ಈ ಸೆನ್ಸೇಷನ್ ಫೋಟೋ ತೆಗೆದಿರೋದು ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಅವರ ಬರ್ತ್‌ ಡೇ ಪಾರ್ಟಿಯಲ್ಲಿ. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದೀಪ್ ಬರ್ತ್ ಡೇಗಾ ಗ್ರ್ಯಾಂಡ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲೇ ಡಿ.ಕೆ ಶಿವಕುಮಾರ್ ಅವರ ಜೊತೆ ಬಿಜೆಪಿ ನಾಯಕರಾದ ಬಿ.ಸಿ ಪಾಟೀಲ್ ಹಾಗೂ ರಾಜುಗೌಡ ಅವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಆಪರೇಷನ್ ಹಸ್ತದ ಚರ್ಚೆ ಬೆನ್ನಲ್ಲೇ ಡಿಸಿಎಂ ಹಾಗೂ ಬಿಜೆಪಿ ನಾಯಕರ ಈ ಭೇಟಿ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬಿಜೆಪಿ ನಾಯಕರ ಜೊತೆ ಡಿ.ಕೆ ಶಿವಕುಮಾರ್ ರಹಸ್ಯ ಚರ್ಚೆ; ಆಪರೇಷನ್ ಹಸ್ತಕ್ಕೆ ಪೋಟೋ ಸಾಕ್ಷಿ ಬಿಡುಗಡೆ

https://newsfirstlive.com/wp-content/uploads/2023/09/Dk-Shivakumar-2.jpg

Load More