newsfirstkannada.com

WATCH: ದ್ವೇಷ ಸಾಕು ಒಂದಾಗೋಣ.. ರಮೇಶ್ ಜಾರಕಿಹೊಳಿ ಕೈ ಕುಲುಕಿ ಡಿಕೆ ಶಿವಕುಮಾರ್ ಹೇಳಿದ್ದೇನು?

Share :

22-05-2023

    ಚುನಾವಣೆಯಲ್ಲಿದ್ದ ಕೋಪ ಕರಗಿದ ಮೇಲೆ

    ಎಲೆಕ್ಷನ್ ಹೋರಾಟವೇ ಬೇರೆ.. ಸ್ನೇಹವೇ ಬೇರೆ

    ಬೊಮ್ಮಾಯಿಯನ್ನು ತಬ್ಬಿಕೊಂಡ ಡಿಕೆ ಶಿವಕುಮಾರ್

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರು ಹೊಸ ಉತ್ಸಾಹದಲ್ಲಿದ್ದಾರೆ. ವಿಧಾನಸೌಧದಲ್ಲಿ ಇವತ್ತು ಆ ಜೋಶ್ ಡಬಲ್ ಆಗಿತ್ತು. ಅಧಿವೇಶನಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕರ ಜೊತೆ ಫೋಟೋಗೆ ಸಖತ್ ಪೋಸ್ ಕೊಟ್ಟಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸೋ ಸವಾಲು ಹಾಕಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಬ್ಬರು ಮುಖಾಮುಖಿಯಾಗಿದ್ದಾರೆ.

ವಿಧಾನಸಭಾ ವಿಶೇಷ ಅಧಿವೇಶನದ ಹಿನ್ನೆಲೆ ಇವತ್ತು ನೂತನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಚುನಾವಣೆಯಲ್ಲಿ ಜಿದ್ದಾಜಿದ್ದಿನ ರಾಜಕೀಯದಲ್ಲಿ ಭಾಗಿಯಾಗಿದ್ದ ಶಾಸಕರೆಲ್ಲಾ ಇವತ್ತು ಹೊಸ ಉತ್ಸಾಹದಲ್ಲಿ ವಿಧಾನಸೌಧದತ್ತ ಹೆಜ್ಜೆ ಹಾಕಿದರು. ನೂತನ ಶಾಸಕರಿಗೆ ಐಡಿ ಕಾರ್ಡ್‌ ಮಾಡುವ ಉದ್ದೇಶದಿಂದ ವಿಧಾಸಭೆಯ ಮೊಗಸಾಲೆಯಲ್ಲಿ ಫೋಟೋ ಶೂಟ್ ಕೂಡ ನಡೆಯಿತು.

ಅಧಿವೇಶನಕ್ಕೆ ಆಗಮಿಸಿದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿರೋಧ ಪಕ್ಷ ನಾಯಕರು ಕೂತಿದ್ದ ಮೊಗಸಾಲೆಗೆ ಎಂಟ್ರಿ ಕೊಟ್ರು. ಬಿಜೆಪಿ ನಾಯಕರ ಜೊತೆ ಖುಷಿ, ಖುಷಿಯಾಗಿ ಮಾತನಾಡಿದ ಡಿಕೆಶಿ, ಒಬ್ಬೊಬ್ಬರನ್ನೇ ಕರೆದು ಫೋಟೋಗೆ ಪೋಸ್‌ ಕೊಟ್ಟರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಡಿಕೆ ತಬ್ಬಿಕೊಂಡು ಮಾತನಾಡಿಸಿದರು. ಡಿಕೆ ಶಿವಕುಮಾರ್ ಅವರಿಗೆ ಬೊಮ್ಮಾಯಿ ಶುಭಾಶಯ ಕೋರಿದರು. ಮಾಜಿ ಸಚಿವ ಆರ್‌. ಅಶೋಕ್ ಅವರ ಹೆಗಲ ಮೇಲೆ ಕೈ ಹಾಕಿ ಫೋಟೋ ಕೂಡ ತೆಗೆಸಿಕೊಂಡರು. ಮುನಿರತ್ನ, ಭೈರತಿ ಬಸವರಾಜ್ ಹೀಗೆ ಬಿಜೆಪಿಯ ನೂತನ ಶಾಸಕರು ಡಿಕೆ ಶಿವಕುಮಾರ್ ಅವರನ್ನ ಮಾತನಾಡಿಸಿದರು.

ವಿರೋಧ ಪಕ್ಷದ ನಾಯಕರ ಜೊತೆ ಡಿಕೆ ಶಿವಕುಮಾರ್ ಫೋಟೋ ತೆಗೆಸಿಕೊಳ್ಳುವಾಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕೂಡ ಇದ್ದರು. ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್ ಹೇಗಿದ್ದೀರಿ ಎಂದು ಕೈ ಕುಲುಕಿ ಮಾತನಾಡಿಸಿದರು. ಆಗ ರಮೇಶ್ ಜಾರಕಿಹೊಳಿ ಅವರು ನಗುತ್ತಲೇ ಚನ್ನಾಗಿದ್ದೇನೆ ಎಂದರು. ಚುನಾವಣೆಯ ರಣಕಣದಲ್ಲಿ ಜಿದ್ದಾಜಿದ್ದಿನಿಂದ ಮಾತನಾಡುತ್ತಿದ್ದ ಇಬ್ಬರು ನಾಯಕರ ಈ ಸ್ನೇಹ ಸಂಗಮ ಎಲ್ಲರಿಗೂ ವಿಶೇಷವಾಗಿತ್ತು. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ.. ಯಾರೂ ಮಿತ್ರರೂ ಅಲ್ಲ ಅನ್ನೋ ಮಾತು ಇದಕ್ಕೆ ಹೇಳೋದು ಅನ್ಸುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ದ್ವೇಷ ಸಾಕು ಒಂದಾಗೋಣ.. ರಮೇಶ್ ಜಾರಕಿಹೊಳಿ ಕೈ ಕುಲುಕಿ ಡಿಕೆ ಶಿವಕುಮಾರ್ ಹೇಳಿದ್ದೇನು?

https://newsfirstlive.com/wp-content/uploads/2023/05/Ramesh-Jarkiholi.jpg

Load More