newsfirstkannada.com

ಸಿಎಂ ಸಿದ್ದರಾಮಯ್ಯರಿದ್ದ ಅದೃಷ್ಟದ ಮನೆಗೆ ಕಾಲಿಡಲು ಡಿಸಿಎಂ ತಯಾರಿ.. ಬದಲಾಗುತ್ತಾ ಡಿಕೆಶಿ ಲಕ್​​..?

Share :

06-11-2023

    ದೀಪಾವಳಿಗೆ ಸರ್ಕಾರಿ ನಿವಾಸ ಪ್ರವೇಶ ಮಾಡಿದ್ರೆ ಒಳ್ಳೆಯ ಆರಂಭ

    ಸರ್ಕಾರಿ ನಿವಾಸ ಗೃಹ ಪ್ರವೇಶದ ಬಳಿಕ ಬದಲಾಗುತ್ತಾ ಡಿಕೆ ಲಕ್?

    ಸಿದ್ದು ಇದ್ದಂತಹ ಅದೃಷ್ಟದ ಮನೆಗೆ ಕಾಲಿಡಲು ಡಿಕೆಶಿ ತಯಾರಿ

ಮನೆಯೊಂದು ಮೂರು ಬಾಗಿಲಾಗಿರುವ ಕಾಂಗ್ರೆಸ್​​ನಲ್ಲಿ ಹೊಸ ಮನೆಯ ಚರ್ಚೆ ಶುರುವಾಗಿದೆ. ಡಿಸಿಎಂ ಮತ್ತು ಕೆಪಿಸಿಸಿ ಸಾರಥಿ, ಅದೃಷ್ಟದ ಬೆನ್ನೇರಿ ಹೊರಟಿದ್ದಾರೆ. ಸಿದ್ದು ವಾಸವಿದ್ದ ಅದೃಷ್ಟದ ಮನೆಗೆ ಕಾಲಿಡಲು ಡಿಕೆಶಿ ತಯಾರಿ ನಡೆಸಿದ್ದಾರೆ. ರಾಜ್ಯದ ಸಿಂಹಾಸನ ಏರಿದವರ ಅರಮನೆ. ಆಡಳಿತದ ಪವರ್​​ ಸೆಂಟರ್​. ದಶಕದಿಂದ ಈ ಮನೆ ಹಲವರ ಪಾಲಿಗೆ ಅದೃಷ್ಟ. ಕೆಲವರಿಗೆ ಕುರ್ಚಿ ಖಾಲಿ ಮಾಡಿಸಿದ ಇತಿಹಾಸವೂ ಈ ಮನೆಗಿದೆ. ಆದರೆ ಅದೃಷ್ಟ-ದುರಾದೃಷ್ಟಗಳನ್ನ ನಂಬದ ಸಿಎಂ ಸಿದ್ದರಾಮಯ್ಯ ಪಾಲಿಗೆ ಈ ಮನೆಯ ವಾಸ್ತು, ಮಾತ್ರ ಅದೃಷ್ಟವನ್ನೇ ಹೊತ್ತು ತಂದಿದ್ದಂತು ಸುಳ್ಳಲ್ಲ. ಹೀಗಾಗಿ ಅದೃಷ್ಟ, ದೈವ ಭಕ್ತಿ, ಜ್ಯೋತಿಷ್ಯವನ್ನ ನಂಬುವ ಆಸ್ತಿಕ ನಾಯಕ ಡಿಕೆಶಿ, ದುಂಬಾಲು ಬಿದ್ದು ಈ ಸರ್ಕಾರಿ ಮನೆ ಗಿಟ್ಟಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ಸರ್ಕಾರಿ ನಿವಾಸಕ್ಕೆ ಶಿಫ್ಟ್​ ಆಗಲು ಡಿಕೆಶಿ ಸಿದ್ಧತೆ!

ಈವರೆಗೆ ಸಿದ್ದರಾಮಯ್ಯ ವಾಸವಿದ್ದ ಸರ್ಕಾರಿ ಬಂಗಲೆ ಕುಮಾರಕೃಪಾ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ಗೆ ಹಂಚಿಕೆಯಾಗಿದೆ. ಇದು ಸಿದ್ದರಾಮಯ್ಯನವರ ಅದೃಷ್ಟ ಮನೆ ಎಂದೇ ಹೇಳಲಾಗುತ್ತದೆ. ಈ ದೃಷ್ಟದ ಮನೆ ತಮಗೆ ಬೇಕೆಂದು ಡಿಕೆಶಿ ಪಟ್ಟು ಹಿಡಿದು ಪಡೆದಿದ್ದಾರೆ. ಸದ್ಯ ಕಾವೇರಿ ನಿವಾಸಕ್ಕೆ ಸಿದ್ದರಾಮಯ್ಯ ಶಿಫ್ಟ್ ಆಗಿದ್ದು, ಇದೇ ತಿಂಗಳಲ್ಲಿ ಡಿ.ಕೆ. ಶಿವಕುಮಾರ್, ಕುಮಾರಕೃಪಾಕ್ಕೆ ವಾಸ್ತವ್ಯ ಬದಲಿಸಲಿದ್ದಾರೆ.

ಈಗಾಗಲೇ ಭರದಿಂದ ಸಾಗಿರುವ ಮನೆಯ ನವೀಕರಣ ಕೆಲಸ

ಡಿಕೆ ಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಈ ಅದೃಷ್ಟದ ಕುಮಾರ ಕೃಪಾ ಪೂರ್ವದ ನಂ.1 ವಸತಿಗೃಹಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಕುಮಾರಕೃಪ ವಸತಿ ಗೃಹವನ್ನ ಡಿಕೆಶಿಗೆ ಹಂಚಿಕೆ ಮಾಡಲಾಗಿತ್ತು. ಸದ್ಯ ಸಿದ್ದು ಇದ್ದಂತಹ ಅದೃಷ್ಟದ ಮನೆಗೆ ಕಾಲಿಡಲು ಡಿಕೆಶಿ ತಯಾರಿ ನಡೆಸಿದ್ದಾರೆ. ಅದೃಷ್ಟದ ಮನೆಗೆ ಅದೃಷ್ಟ ದಿನವೇ ಕಾಲಿಡಲು ಡಿ‌ಕೆಶಿ ತಯಾರಿ ಆರಂಭಿಸಿದ್ದು, ಈಗಾಗಲೇ ಮನೆ ನವೀಕರಣ ಕೆಲಸ ಭರದಿಂದ ಸಾಗಿದೆ. ನವೆಂಬರ್​​ 10-13ರ ಒಳಗಡೆ ಸರ್ಕಾರಿ ನಿವಾಸಕ್ಕೆ ಕಾಲಿಡಲು ಡಿ‌ಕೆಶಿ ಸಿದ್ಧತೆ ನಡೆಸಿದ್ದಾರೆ. ದೀಪಾವಳಿ ಹಬ್ಬದಂದು ಸರ್ಕಾರಿ ನಿವಾಸಕ್ಕೆ ಶಿಫ್ಟ್​ ಆಗಲು ಡಿಕೆಶಿ ಸಜ್ಜಾಗಿದ್ದಾರೆ. ಅದೃಷ್ಟದ ಮನೆಗೆ ಅದೃಷ್ಟದ ದಿನದಂದೇ ಗೃಹ ಪ್ರವೇಶ ಮಾಡಲು ಡಿಕೆಶಿ ಸಜ್ಜಾಗಿದ್ದು, ಲಕ್​ನ್ನೇ ನಂಬಿದ್ದಾರೆ.

ಸಿಎಂ ನಾನೇ ಎಂಬ ಚರ್ಚೆಗೆ ಬ್ರೇಕ್​ಫಾಸ್ಟ್​ ಮೂಲಕ ಬ್ರೇಕ್ ಬಿದ್ದಿದೆ. ಆದ್ರೆ, ಅದು ಮತ್ತೆ ಯಾವಾಗ ಚರ್ಚೆಗೆ ಬರಲಿದೆ ಎಂಬುದು ಡಿಕೆ ಬಣದ ಟೆನ್ಷನ್​ನಲ್ಲಿದೆ. ಹೀಗಾಗಿ ದೀಪಾವಳಿಗೆ ಸರ್ಕಾರಿ ನಿವಾಸ ಪ್ರವೇಶ ಮಾಡಿದ್ರೆ ಒಳ್ಳೆಯ ಆರಂಭ ಸಿಗಲಿದೆ ಎಂದು ನಂಬಲಾಗಿದೆ. ದೀಪಾವಳಿ ಬಳಿಕ ಗೃಹ ಪ್ರವೇಶಕ್ಕೆ ಅತ್ಯುತ್ತಮ ದಿನ ಸಿಗದು ಅನ್ನೋದು ಡಿಕೆಶಿಗೆ ಕೆಲ ಜ್ಯೋತಿಷಿಗಳು ಸಲಹೆ ನೀಡಿದ್ದಾರಂತೆ. ಒಟ್ಟಾರೆ, ಸಿಎಂ ಸಿದ್ದು ಇದ್ದ ಕುಮಾರಕೃಪಾ ನಿವಾಸ ಅದೃಷ್ಟದ ನಿವಾಸವಾಗಿತ್ತು. ಇದೀಗ ಸಿದ್ದು ಕಾವೇರಿ ನಿವಾಸಕ್ಕೆ ಶಿಫ್ಟ್​​ ಆಗಿದ್ದು, ಡಿಕೆಶಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆಪ್ತರನ್ನ ಕಳುಹಿಸಿ ಸರ್ಕಾರಿ ಬಂಗಲೆ ಪರಿಶೀಲನೆ ನಡೆಸಿ, ವಾಸ್ತು ಪ್ರಕಾರವೇ ಮನೆಯ ನವೀಕರಣ ಆಗಿದೆ. ಹೀಗಾಗಿ ಸಂಪತ್ತಿನ ಒಡತಿ ಲಕ್ಷ್ಮೀಯನ್ನ ಆರಾಧಿಸುವ ಬೆಳಕಿನ ಹಬ್ಬದಂದೆ ಗೃಹ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ. ಇದೇ ಕುಮಾರಕೃಪಾ ನಿವಾಸದಲ್ಲಿ ಡಿಕೆಶಿ, ದೀಪಾವಳಿ ಆಚರಿಸೋದು ಪಕ್ಕಾ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಸಿದ್ದರಾಮಯ್ಯರಿದ್ದ ಅದೃಷ್ಟದ ಮನೆಗೆ ಕಾಲಿಡಲು ಡಿಸಿಎಂ ತಯಾರಿ.. ಬದಲಾಗುತ್ತಾ ಡಿಕೆಶಿ ಲಕ್​​..?

https://newsfirstlive.com/wp-content/uploads/2023/10/Dk-Shivakumar-Kpcc.jpg

Load More