newsfirstkannada.com

WATCH: ಪೇಟ ಧರಿಸಿ ಮಿಂಚಿದ ಡಿಕೆ ಶಿವಕುಮಾರ್; ‘ಹೀರೋ ಥರ ಕಾಣ್ತಿದ್ದೀರಲ್ಲ ಸರ್’ ಎಂದವರಿಗೆ ಡಿಸಿಎಂ ಹೇಳಿದ್ದೇನು?

Share :

11-06-2023

  'ಶಕ್ತಿ'ಗೆ ಚಾಲನೆ ನೀಡಲು ಬಂದ ಡಿಕೆಶಿ ಫುಲ್ ಮಿಂಚಿಂಗ್

  ಅಭಿಮಾನಿಗಳ ಹೊಗಳಿಕೆಗೆ ಡಿಸಿಎಂ ಕೊಟ್ಟ ರಿಪ್ಲೈ ಏನು?

  ಮಧ್ಯಪ್ರದೇಶದ ಉಜ್ಜೈನಿಯಿಂದ ಪೇಟ ಧರಿಸಿ ಬಂದ್ರಾ?

ಬೆಂಗಳೂರು: ರಾಜ್ಯಾದ್ಯಂತ ಇಂದು ಮಹಿಳೆಯರಿಗೆ ಉಚಿತ ಸಾರಿಗೆ ಸಂಚಾರ ನೀಡುವ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ. ವಿಧಾನಸೌಧದ ಮುಂಭಾಗ ಶಕ್ತಿ ಯೋಜನೆಗೆ ಚಾಲನೆ ನೀಡುವ ಸಂಭ್ರಮ ಕಳೆ ಕಟ್ಟಿತ್ತು. ಈ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಶೇಷ ಪೇಟ ಧರಿಸಿ ಆಗಮಿಸಿದ್ದು ಎಲ್ಲರ ಗಮನ ಸೆಳೆದಿದೆ.

ಶಕ್ತಿ ಯೋಜನೆಗೆ ಚಾಲನೆ ನೀಡಲು ಎಂಟ್ರಿ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಪೆಷಲ್ ಪೇಟ ಧರಿಸಿದ್ದರು. ಅದನ್ನು ನೋಡಿದ ಅಭಿಮಾನಿಗಳು, ಹೀರೋ ಥರ ಕಾಣ್ತಿದ್ದೀರಲ್ಲ ಸರ್ ಎಂದು ಕೇಳಿದ್ದಾರೆ.

ಅಭಿಮಾನಿಗಳ ಕಾಮೆಂಟ್‌ಗೆ ಖುಷ್ ಆದ ಡಿಕೆ ಶಿವಕುಮಾರ್, ಅಭಿಮಾನಿಗಳತ್ತ ಕೈ ಬೀಸಿ ಗಂಡಸರೆಲ್ಲಾ ಟಿಕೆಟ್ ತಗೋಬೇಕು ಕಣ್ರಯ್ಯ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಮಾತ್ರ ಉಚಿತ ಎಂದು ಹೇಳಿದರು. ಶಕ್ತಿ ಯೋಜನೆ ಕಾರ್ಯಕ್ರಮದ ಉದ್ದಕ್ಕೂ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಪೇಟ ಧರಿಸಿಯೇ ಪಾಲ್ಗೊಂಡಿದ್ದರು.

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಿನ್ನೆಯೇ ಮಧ್ಯಪ್ರದೇಶ ಉಜ್ಜೈನಿಯ ಮಹಾಕಾಳ ಮಂದಿರಕ್ಕೆ ತೆರಳಿದ್ದರು. ಇಂದು ಮುಂಜಾನೆ ಮಹಾಕಾಳ ಮಂದಿರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಐಟಿ ಸೆಲ್ ಘಟಕದ ರಾಜ್ಯಾಧ್ಯಕ್ಷ ರಘುನಂದನ್ ರಾಮಣ್ಣ ಸೇರಿದಂತೆ ಹಲವರು ಸಾಥ್ ನೀಡಿದ್ದರು. ಇದಾದ ಬಳಿಕ ಉಜ್ಜೈನಿಯಿಂದ ಬೆಂಗಳೂರಿಗೆ ಬಂದ ಡಿಕೆ ಶಿವಕುಮಾರ್ ಅವರು ಪೇಟ ಧರಿಸಿ ಮಿಂಚಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಪೇಟ ಧರಿಸಿ ಮಿಂಚಿದ ಡಿಕೆ ಶಿವಕುಮಾರ್; ‘ಹೀರೋ ಥರ ಕಾಣ್ತಿದ್ದೀರಲ್ಲ ಸರ್’ ಎಂದವರಿಗೆ ಡಿಸಿಎಂ ಹೇಳಿದ್ದೇನು?

https://newsfirstlive.com/wp-content/uploads/2023/06/Dk-Shivakumar-6.jpg

Load More