5 ರೂಪಾಯಿ ಕೊಡೋ ತಿಂಡಿಗೆ 10 ರೂಪಾಯಿ ತಗೊತಾ ಇದ್ಯಾ?
ಸಂಡೇ ನಿಮ್ಗೆಲ್ಲ ತಿಂಡಿ ಕೊಡ್ಸೋಣ ಅಂದ್ಕೊಂಡ್ರೆ ಖಾಲಿ ಆಗಿದ್ಯಲ್ರೀ..
ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಕೊಟ್ಟ ಉತ್ತರಕ್ಕೆ ಡಿಸಿಎಂ ಶಾಕ್
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇವತ್ತು ಸಡನ್ ಆಗಿ ಸಿಟಿ ರೌಂಡ್ಸ್ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ ಅಧಿಕಾರಿಗಳ ಜೊತೆ ರೋಡಿಗಿಳಿದ ಡಿ.ಕೆ ಶಿವಕುಮಾರ್, ನಗರದ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ಕೊಟ್ಟು ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು. ಇಡ್ಲಿ, ಚೌಚೌಬಾತ್ ಉಪಹಾರ ಸೇವಿಸಿದ ಅವರು ಇಂದಿರಾ ಕ್ಯಾಂಟೀನ್ ಸಿಬ್ಬಂದಿ, ಮಾರ್ಷಲ್‌ಗಳ ಕೊಟ್ಟ ಉತ್ತರಕ್ಕೆ ಶಾಕ್ ಆಗಿದ್ದಾರೆ. ಚೊಕ್ಕಸಂದ್ರ, ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಇಂದಿರಾ ಕ್ಯಾಂಟೀನ್‌ಗೆ ವಿಸಿಟ್ ಕೊಟ್ಟ ಅವರು ಇಂದಿರಾ ಕ್ಯಾಂಟೀನ್‌ನಲ್ಲಿ ಅಡುಗೆ ಮಾಡುವ ಸಿಬ್ಬಂದಿ, ಮಾರ್ಷಲ್‌ಗಳಿಂದ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿದ್ದಾರೆ.
ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್‌ಗೆ ಡಿಕೆ ಶಿವಕುಮಾರ್ ಭೇಟಿ ಕೊಟ್ಟಾಗ ಅಲ್ಲಿ ತಂದಿದ್ದ ತಿಂಡಿಯೇ ಖಾಲಿಯಾಗಿತ್ತು. ನನ್ಗೂ ತಿಂಡಿ ಇಲ್ಲ, ನಿಮ್ಗೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಡಿಸಿಎಂ, ನಿಮ್ಗೆಲ್ಲ ತಿಂಡಿ ಕೊಡ್ಸೋಣ ಅಂದ್ಕೊಂಡ್ರೆ ಖಾಲಿ ಆಗಿದ್ಯಲ್ರೀ ಅಂತಾ ಅಧಿಕಾರಿಗಳಿಗೆ ಹೇಳಿದರು. ಇಂದಿರಾ ಕ್ಯಾಂಟೀನ್ ಸಿಬ್ಬಂದಿಯಿಂದ ಮಾಹಿತಿ ಪಡೆದ ಡಿಕೆ ಶಿವಕುಮಾರ್ ಅವರು, ಎಷ್ಟು ತಿಂಡಿ ಮಾಡ್ತೀರಾ? ಸಂಡೇ ಎಷ್ಟು ಜನ ಬರ್ತಾರೆ? ಎಂದು ಪ್ರಶ್ನಿಸಿದರು. ಸರ್.. ಸಂಡೆಯಾದ್ದರಿಂದ ಹೆಚ್ಚು ಜನ ಬರಲ್ಲ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ತಿಂಡಿ ತರಲಾಗಿದೆ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಡಿ.ಕೆ ಶಿವಕುಮಾರ್ ಅವರಿಗೆ ಹೇಳಿದರು.
ಚೊಕ್ಕಸಂದ್ರದ ಬಳಿಕ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಇಂದಿರಾ ಕ್ಯಾಂಟೀನ್‌ಗೆ ಡಿಕೆ ಶಿವಕುಮಾರ್ ಅವರು ಸರ್ಪ್ರೈಸ್ ವಿಸಿಟ್ ಕೊಟ್ರು. ಇಂದಿರಾ ಕ್ಯಾಂಟೀನ್‌ನಲ್ಲಿ ಇಡ್ಲಿ, ಚೌಚೌಬಾತ್ ತಿಂದ ಡಿ.ಕೆ ಶಿವಕುಮಾರ್ ಅವರು ಇನ್ನೂ ಸ್ವಲ್ಪ ಚಟ್ನಿ ಹಾಕಿ ಎಂದರು. ಆಗ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಚಟ್ನಿ ಇಲ್ಲ ಎಂದು ಸಾಂಬಾರ ಹಾಕಿದರು. ಇದೇ ವೇಳೆ, ಸಾರ್ವಜನಿಕರಿಂದ ಹೇಗಿದೆ ಉಪಹಾರ ಎಂದು ವಿಚಾರಿಸಿದ ಅವರು ಇಂದಿರಾ ಕ್ಯಾಂಟೀನ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರು. ಡಿಸಿಎಂ ಡಿಕೆ ಶಿವಕುಮಾರ್ ಸಹಾಯವಾಣಿ ನಂಬರ್‌ಗೆ ಕರೆ ಮಾಡಿದಾಗ ಅದು ಇನ್ ವ್ಯಾಲಿಡ್ ನಂಬರ್ ಎಂಬ ಮಾಹಿತಿ ಬಂತು.
5 ರೂಪಾಯಿ ತಿಂಡಿಗೆ 10 ರೂಪಾಯಿ ಸಂಗ್ರಹ
ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಸೇವಿಸಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಸಿಬ್ಬಂದಿಗಳನ್ನು ಕರೆದು ಆತ್ಮೀಯವಾಗಿ ಮಾತನಾಡಿಸಿದರು. 5 ರೂಪಾಯಿಯ ತಿಂಡಿಗೆ 10 ರೂಪಾಯಿ ಸಂಗ್ರಹ ಮಾಡ್ತಿರೋದೇಕೆ ಎಂದು ಪ್ರಶ್ನಿಸಿದ್ರು. ಆಗ ಬಹಳ ವರ್ಷದಿಂದ ಹೀಗೆ ನಡೆಯುತ್ತಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು. ಇಂದಿರಾ ಕ್ಯಾಂಟೀನ್ ಸಿಬ್ಬಂದಿಯನ್ನು ವಿಚಾರಿಸಿದ ಡಿಕೆ ಶಿವಕುಮಾರ್ ಅವರು, ಇಡ್ಲಿಗೆ ಹಾಕೋ ಸಾಂಬರ್ನ ನನ್ಗೆ ಕೊಟ್ಟಿದ್ಯಾ.. 5 ರೂಪಾಯಿ ಕೊಡೋ ತಿಂಡಿಗೆ 10 ರೂಪಾಯಿ ತಗೊತಾ ಇದ್ಯಾ.. ಬಡವ ನೀನು.. ಸುಳ್ಳು ಹೇಳ್ಬೇಡ ಅಷ್ಟೇ! ಎಲ್ಲವನ್ನೂ ರಿಪೇರಿ ಮಾಡ್ತಿನಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
5 ರೂಪಾಯಿ ಕೊಡೋ ತಿಂಡಿಗೆ 10 ರೂಪಾಯಿ ತಗೊತಾ ಇದ್ಯಾ..
ಬಡವ ನೀನು.. ಸುಳ್ಳು ಹೇಳ್ಬೇಡ ಅಷ್ಟೇ!
ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗೆ ಸಡನ್ ವಿಸಿಟ್ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್#NewsFirstKannada #Newsfirstlive #KannadaNews #Indiracanteen@Dkshivakumar @INCKarnataka @BJP4Karnataka#Bangalore pic.twitter.com/t0757viDfC— NewsFirst Kannada (@NewsFirstKan) July 9, 2023