newsfirstkannada.com

VIDEO: ವಿಧಾನಸೌಧದ ಮೆಟ್ಟಿಲಿಗೆ ‘ಬಂಡೆ’ ದೀರ್ಘದಂಡ; ಶಕ್ತಿಸೌಧಕ್ಕೆ ನಮಸ್ಕರಿಸಿ ಎಂಟ್ರಿ ಕೊಟ್ಟ DCM

Share :

Published May 20, 2023 at 12:50pm

Update September 25, 2023 at 9:21pm

    ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ

    ವಿಧಾನಸೌಧಕ್ಕೆ ನಾನು ಚಪ್ಪಡಿ ಕಲ್ಲಾಗಬೇಕು

    ಮೋದಿ ರೀತಿ ಮೆಟ್ಟಿಲಿಗೆ ನಮಸ್ಕರಿಸಿದ ಡಿಕೆ

ನಾನು ವಿಧಾನಸೌಧಕ್ಕೆ ಚಪ್ಪಡಿ ಕಲ್ಲು ಆಗಬೇಕು. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನನ್ನ ಜಲ್ಲಿಕಲ್ಲು ಆದರೂ ಮಾಡಿಕೊಳ್ಳಿ ಹೀಗಂತಾ ಚುನಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದರು. ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನಸೌಧದ ಪ್ರವೇಶಕ್ಕೂ ಮುನ್ನ ಪ್ರವೇಶ ದ್ವಾರದ ಮೆಟ್ಟಿಲಿಗೆ ನಮಸ್ಕರಿಸಿ ಶಕ್ತಿಸೌಧದ ಒಳಗಡೆ ಪ್ರವೇಶಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ನೂತನ ಸಚಿವರ ಜೊತೆ ವಿಧಾನಸೌಧಕ್ಕೆ ಆಗಮಿಸಿದರು. ಪಶ್ಚಿಮ ದ್ವಾರದ ಮೂಲಕ ಸಿಎಂ, ಡಿಸಿಎಂ ವಿಧಾನಸೌಧ ಪ್ರವೇಶ ಮಾಡಿದರು. ಈ ವೇಳೆ ಪ್ರವೇಶಕ್ಕೂ ಮುನ್ನ ಡಿಕೆ ಶಿವಕುಮಾರ್ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲಿಗೆ ನಮಸ್ಕಾರ ಮಾಡಿದರು. ಮೆಟ್ಟಿಲಿಗೆ ನಮಸ್ಕಾರ ಮಾಡಿದ ಬಳಿಕ ವಿಧಾನಸೌಧವನ್ನ ಪ್ರವೇಶ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ವಿಧಾನಸೌಧದ ಮೆಟ್ಟಿಲಿಗೆ ‘ಬಂಡೆ’ ದೀರ್ಘದಂಡ; ಶಕ್ತಿಸೌಧಕ್ಕೆ ನಮಸ್ಕರಿಸಿ ಎಂಟ್ರಿ ಕೊಟ್ಟ DCM

https://newsfirstlive.com/wp-content/uploads/2023/05/Dk-Shivakumar-21.jpg

Load More