ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ವಿಚಾರ
ಡಿಸಿಎಂ ಪವನ್ ಕಲ್ಯಾಣ್ಗೆ ಪ್ರಶ್ನೆ ಕೇಳಿದ್ದ ಪ್ರಕಾಶ್ ರಾಜ್!
ನಟ ಪ್ರಕಾಶ್ ರಾಜ್ ಸ್ಟ್ರಾಂಗ್ ಕೌಂಟರ್ ಕೊಟ್ಟ ಪವನ್
ಹೈದರಾಬಾದ್: ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಗತ್ತಿನ ಪ್ರಸಿದ್ಧ ದೇಗುಲ ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಹಾಲಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ತಿಮ್ಮಪ್ಪನ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಇತ್ತು ಎಂದು ಲ್ಯಾಬ್ ರಿಪೋರ್ಟ್ ಧೃಡಪಡಿಸಿತ್ತು. ಈ ವಿಚಾರದಲ್ಲಿ ಯಾಕೆ ರಾಜಕೀಯ ಮಾಡುತ್ತೀರಿ? ಎಂದು ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ನಟ ಪ್ರಕಾಶ್ ರಾಜ್ ಕೆಂಡಕಾರಿದ್ದರು. ಈಗ ಪ್ರಕಾಶ್ ರಾಜ್ಗೆ ಪವನ್ ಕಲ್ಯಾಣ್ ಸ್ಟ್ರಾಂಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಪ್ರಕಾಶ್ ರಾಜ್ಗೆ ಎಚ್ಚರಿಕೆ!
ಈ ಸಂಬಂಧ ಮಾತಾಡಿದ ಡಿಸಿಎಂ ಪವನ್ ಕಲ್ಯಾಣ್, ಇತ್ತೀಚೆಗೆ ಪ್ರಕಾಶ್ ರಾಜ್ ತಿರುಪತಿ ಲಡ್ಡು ವಿಚಾರದ ಬಗ್ಗೆ ಮಾತಾಡಿದ್ದಾರೆ. ನನ್ನ ಧರ್ಮಕ್ಕೆ ಅನ್ಯಾಯವಾದ್ರೆ ಮಾತನಾಡುವುದರಲ್ಲಿ ತಪ್ಪೇನಿದೆ? ನಾನು ಯಾವ ಧರ್ಮದ ವಿರುದ್ಧವೂ ಇಲ್ಲ. ಇದನ್ನು ಪ್ರಕಾಶ್ ರಾಜ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಪವನ್ ತಿರುಗೇಟು ನೀಡಿದ್ರು.
ನನಗೆ ಪ್ರಕಾಶ್ ರಾಜ್ ಅವರ ಬಗ್ಗೆ ಅಪಾರವಾದ ಗೌರವ ಇದೆ. ಜಾತ್ಯತೀತತೆ ಬಗ್ಗೆ ಮಾತಾಡೋ ಜನ ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಹಿಂದೂಗಳು ಬಹಳ ನೋವನ್ನು ಅನುಭವಿಸುತ್ತಿದ್ದೇವೆ. ಯಾರಾದ್ರೂ ನಮ್ಮ ಬಗ್ಗೆ ಮಾತಾಡೋ ಮುನ್ನ ನೂರು ಸಲ ಯೋಚಿಸಬೇಕು. ನಮ್ಮ ಭಾವನೆಗಳಿಗೆ ಧಕ್ಕೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನೇ ಇರುವುದಿಲ್ಲ ಎಂದರು.
ಈ ಹಿಂದೆ ಇದರ ಬಗ್ಗೆ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್, ಡಿಸಿಎಂ ಪವನ್ ಕಲ್ಯಾಣ್ ಅವರೇ ಆಂಧ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಆದಷ್ಟು ಬೇಗ ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಕೊಡಿ. ಈಗಾಗಲೇ ಹಲವು ಕೋಲು ಗಲಭೆಗಳು ದೇಶದಲ್ಲಿ ನಡೆಯುತ್ತಿದೆ. ಇದಕ್ಕೆ ನೀವು ಕೋಮು ಬಣ್ಣ ಕಟ್ಟಿ ದೇಶಾದ್ಯಂತ ಗಲಭೆ ಎಬ್ಬಿಸಬೇಡಿ ಎಂದು ಕೌಂಟರ್ ಕೊಟ್ಟಿದ್ರು.
ಇದನ್ನೂ ಓದಿ: ತಿರುಪತಿ ಲಡ್ಡು ಬಗ್ಗೆ ಕಮೆಂಟ್ಸ್: ತಮಿಳು ನಟ ಕಾರ್ತಿಗೆ ಖಡಕ್ ವಾರ್ನಿಂಗ್ ಕೊಟ್ಟ ಪವನ್ ಕಲ್ಯಾಣ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ