newsfirstkannada.com

ರಾತ್ರಿ 7 ಗಂಟೆಗೆ ಎಂಟ್ರಿಯಾಗಿದ್ದ.. ಕೊಲೆ ಆಗಿದ್ದು ಹೇಗೆ? ಪ್ರತಿಮಾ ಹತ್ಯೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಡಿಸಿಪಿ

Share :

Published November 6, 2023 at 3:18pm

Update November 6, 2023 at 3:45pm

    ಅಂದು ಪ್ರತಿಮಾ ಮನೆಗೆ ಬಂದ ಕೂಡ್ಲೇ ಆರೋಪಿ ಕಿರಣ್ ಕೂಡ ಎಂಟ್ರಿ

    ನವೆಂಬರ್ 4ರ ರಾತ್ರಿ ಪ್ರತಿಮಾ ಮನೆಯಲ್ಲಿ ಹಿಂದಿನ ಡ್ರೈವರ್ ಮಾಡಿದ್ದೇನು?

    ನಿನ್ನೆ ಸಂಜೆ ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಆರೋಪಿ ಕಿರಣ್‌ ಬಂಧನ

ಬೆಂಗಳೂರು: ಗಣಿ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿಗಳು ಹೊರ ಬಂದಿದೆ. ಸುದ್ದಿಗೋಷ್ಟಿ ನಡೆಸಿದ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಅವರು ಅಂದು ಪ್ರತಿಮಾ ಮನೆಗೆ ಎಂಟ್ರಿಯಾದ ಹಿಂದಿನ ಡ್ರೈವರ್ ಕಿರಣ್ ಮಾಡಿದ್ದೇನು? ಕೊಲೆಯಾದ ಬಳಿಕ ಎಸ್ಕೇಪ್ ಆಗಿದ್ದು ಹೇಗೆ ಅನ್ನೋ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕಳೆದ ನವೆಂಬರ್ 4ರಂದು ಪ್ರತಿಮಾ ಮನೆಗೆ ಬರೋಕ್ಕಿಂತ ಮುಂಚೆ ಆರೋಪಿ ಕಾದು ಕುಳಿತಿದ್ದ. ರಾತ್ರಿ 7 ಗಂಟೆ ಸುಮಾರಿಗೆ ಪ್ರತಿಮಾ ಮನೆೆಗೆ ಹಿಂದಿನ ಡ್ರೈವರ್ ಕಿರಣ್‌ ಎಂಟ್ರಿಯಾಗಿದ್ದಾನೆ. ಅದೇ ಸಮಯಕ್ಕೆ ಪ್ರತಿಮಾ ಮನೆಗೆ ಬಂದ ಕೂಡ್ಲೇ ಐದು ಹೆಜ್ಜೆ ಅಂತರದಲ್ಲಿ ಆರೋಪಿ ಎಂಟ್ರಿಯಾಗಿದ್ದಾನೆ. ಮೊದಲು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕಿರಣ್‌ ಮನವಿ ಮಾಡಿದ್ದಾನೆ. ಅದಕ್ಕೆ ನಿರಾಕರಿಸಿದಾಗಿ ಪ್ರತಿಮಾಳನ್ನ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.

ಪ್ರತಿಮಾ ಸಹೋದರ ಫೋನ್ ಮಾಡಿದಾಗ ಅವರಿಗೆ ಅನುಮಾನ ಬಂದಿದೆ. ಅದಾದ ಬಳಿಕ ನೋಡಿದಾಗ ಅಧಿಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನವೆಂಬರ್ ಐದನೇ ತಾರೀಕು ಬೆಳಗ್ಗೆ 8 ಗಂಟೆಗೆ ಪ್ರತಿಮಾ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ತಕ್ಷಣ ಕೊಲೆಗಾರನ ಬಂಧನಕ್ಕೆ ಮೂರು ತಂಡಗಳನ್ನ ರಚನೆ ಮಾಡಲಾಗಿದೆ.

ಗೋಕುಲ್ ಬಡಾವಣೆಯ ಮನೆಯಲ್ಲಿ ಪ್ರತಿಮಾ ಅವರ ಕೊಲೆಯಾಗಿತ್ತು. ಸಂಬಂಧಿಸಿದ ವ್ಯಕ್ತಿಗಳನ್ನ ವಿಚಾರಣೆ ಮಾಡಿದ ವೇಳೆ ಕ್ಲ್ಯೂ ಸಿಕ್ಕಿತ್ತು. ಅವ್ರ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿಯೇ ಕೊಲೆ ಮಾಡಿರೋದು ಖಚಿತವಾಗಿತ್ತು. ಕೊನೆಗೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದವನ ಬಗ್ಗೆಯೇ ಸುಳಿವು ಸಿಕ್ಕಿತ್ತು. ನಿನ್ನೆ ಸಂಜೆ 4 ಗಂಟೆಗೆ ಆರೋಪಿ ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಅಲ್ಲಿ ಬಂಧಿಸಲಾಗಿದೆ.

ಕೊಲೆ ಆರೋಪಿ ಕಿರಣ್‌ ಕಳೆದ ನಾಲ್ಕು ವರ್ಷಗಳಿಂದ ಕಾಂಟ್ರ್ಯಾಕ್ಟ್ ಬೇಸ್ಡ್ ಮೇಲೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಬೇರೆ ಬೇರೆ ವಿಚಾರಕ್ಕೆ ಪ್ರತಿಮಾ ಅವರು ಆಗಾಗ ಅವನನ್ನ ಬೈಯ್ತಿದ್ದರಂತೆ. ಪ್ರತಿಮಾ ಎರಡು ತಿಂಗಳ ಹಿಂದೆ ಕಿರಣ್ ಅವರನ್ನ ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಆತನ ಮನೆಯಲ್ಲೂ ವೈಯಕ್ತಿಕ ಸಮಸ್ಯೆ ಆಗಿತ್ತು. ಒಂದು ತಿಂಗಳು ಆತ ಬೆಂಗಳೂರಿನಲ್ಲೂ ಇರಲಿಲ್ಲ.

ಡ್ರೈವರ್ ಕಿರಣ್‌ಗೆ ಕೆಲಸ ಇಲ್ಲದೇ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕೆಲಸ ಕಳೆದುಕೊಂಡ ಹಿನ್ನೆಲೆ ಪತ್ನಿ ಸಹ ಬಿಟ್ಟು ಹೋಗಿದ್ದಳು. ಹೀಗಾಗಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕಚೇರಿ ಹಾಗೂ ಮನೆ ಬಳಿ ಬಂದು ಮನವಿ ಮಾಡಿಕೊಳ್ತಿದ್ದ. ಮನವಿಗೆ ಸ್ಪಂದಿಸದ ಹಿನ್ನೆಲೆ ಪ್ರತಿಮಾ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಆರೋಪಿಯನ್ನ ಕಸ್ಟಡಿಗೆ ತೆಗೆದುಕೊಂಡು ತನಿಖೆ ಮಾಡಲಾಗುತ್ತಿದೆ. ಸದ್ಯ ಬೇರೆ ಬೇರೆ ಆಯಾಮಗಳಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ 7 ಗಂಟೆಗೆ ಎಂಟ್ರಿಯಾಗಿದ್ದ.. ಕೊಲೆ ಆಗಿದ್ದು ಹೇಗೆ? ಪ್ರತಿಮಾ ಹತ್ಯೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಡಿಸಿಪಿ

https://newsfirstlive.com/wp-content/uploads/2023/11/Pratima-Case-DCB-PC.jpg

Load More