newsfirstkannada.com

VIDEO: ಮಣಿಪುರದಲ್ಲಿ ವಿವಸ್ತ್ರಗೊಳಿಸಿದ್ದ ಪ್ರಕರಣ; ಮೊದಲ ಬಾರಿ ಮಹಿಳೆಯರನ್ನು ಭೇಟಿಯಾದ DCW ಮುಖ್ಯಸ್ಥೆ ಹೇಳಿದ್ದೇನು?

Share :

Published July 25, 2023 at 5:20pm

    ಆ ಮಹಿಳೆಯರನ್ನು ಭೇಟಿಯಾಗಲು ಇಲ್ಲಿಗೆ ಇನ್ನು ಯಾರೂ ಬಂದಿಲ್ಲ

    ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ವಾತಿ ಮಲಿವಾಲ್

    ಸಂತ್ರಸ್ತರು ತುಂಬಾ ಸಂಕಷ್ಟದಲ್ಲಿದ್ದಾರೆ ಎಂದ ಮಹಿಳಾ ಆಯೋಗ

ಇಂಫಾಲ್: ಮಣಿಪುರದಲ್ಲಿ ಮಹಿಳೆಯರ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದ ಸಂತ್ರಸ್ತ ಕುಟುಂಬಗಳನ್ನು ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ (DCW) ಸ್ವಾತಿ ಮಲಿವಾಲ್ ಭೇಟಿ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ DCW ಮುಖ್ಯಸ್ಥೆ ಸ್ವಾತಿ ಮಲಿವಾಲ್, ಮಣಿಪುರದಲ್ಲಿ ಕ್ರೌರ್ಯಕ್ಕೆ ಬಲಿಯಾದ ಮಹಿಳೆಯರ ಕುಟುಂಬಗಳನ್ನು ಭೇಟಿಯಾದೆ. ಆದರೆ ಅವರ ಕಣ್ಣೀರಿನಿಂದ ನಿದ್ದೆ ಬರಲಿಲ್ಲ. ಇಲ್ಲಿಯವರೆಗೆ ಅವರನ್ನು ಭೇಟಿಯಾಗಲು ಯಾರು ಬಂದಿಲ್ಲ ಎಂದು ವಿಡಿಯೋ ಶೇರ್ ಮಾಡಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಸಂತ್ರಸ್ತ ಮಹಿಳೆಯರನ್ನು ತಬ್ಬಿಕೊಂಡು ಸಮಾಧಾನ ಮಾಡಿ ಧೈರ್ಯ ಹೇಳಿದ್ದಾರೆ. ಇದೇ ವೇಳೆ, ಇಲ್ಲಿವರೆಗೂ ಅವರನ್ನು ಭೇಟಿಯಾಗಲು ಯಾರು ಬಾರದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್ ಹಾಗೂ ಆಡಳಿತ ಸರ್ಕಾರದ ಇತರೆ ಅಧಿಕಾರಿಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ಯಾವುದೇ ಭದ್ರತೆಯಿಲ್ಲದೇ ಇಲ್ಲಿವರೆಗೆ ನಾನು ಬಂದಿದ್ದೇನೆ. ಸಂತ್ರಸ್ತ ಮಹಿಳೆಯರ ಕುಟುಂಬ ತುಂಬಾ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಎಲ್ಲಾ ಭದ್ರತೆಗಳು ಇದ್ದರು ಇಲ್ಲಿವರೆಗೆ ಅಧಿಕಾರಿಗಳು ಏಕೆ ಬಂದಿಲ್ಲವೆಂದು ಸ್ವಾತಿ ಮಲಿವಾಲ್ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮಣಿಪುರಕ್ಕೆ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಪರಿಶೀಲಿಸುವಂತೆ ಮನವಿ ಮಾಡುತ್ತೇನೆ ಎಂದು DCW ಮುಖ್ಯಸ್ಥೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮಣಿಪುರದಲ್ಲಿ ವಿವಸ್ತ್ರಗೊಳಿಸಿದ್ದ ಪ್ರಕರಣ; ಮೊದಲ ಬಾರಿ ಮಹಿಳೆಯರನ್ನು ಭೇಟಿಯಾದ DCW ಮುಖ್ಯಸ್ಥೆ ಹೇಳಿದ್ದೇನು?

https://newsfirstlive.com/wp-content/uploads/2023/07/DCW_SWATI_MALIWAL.jpg

Load More