newsfirstkannada.com

Video: ಚಿಕನ್​ ಥಾಲಿಯಲ್ಲಿ ಬಂತು ಇಲಿ ಮಾಂಸ!? ರೆಸ್ಟೋರೆಂಟ್​ ಮಾಲೀಕನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗ್ರಾಹಕ

Share :

16-08-2023

    ಮಾಂಸ ಪ್ರಿಯರು ಈ ಸುದ್ದಿ ಓದಲೇಬೇಕು

    ಆರ್ಡರ್​ ಮಾಡಿದ ಚಿಕನ್​ ಸವಿಯುವಾಗ ಗ್ರಾಹಕ ಶಾಕ್​

    ಕಣ್ಣ ಮುಂದೇಯೇ ಸಿಕ್ತು ಅನುಮಾನಾಸ್ಪದ ಮಾಂಸದ ತುಂಡು

ಚಿಕನ್ ಅಂದ್ರೆ ಇಷ್ಟನಾ?. ಚಿಕನ್​ ಬಿರಿಯಾನಿ, ಚಿಕನ್​ ಥಾಲಿ ಎಂದು ವೀಕೆಂಡ್​ ಚಿಕನ್​ ಆರ್ಡರ್​ ಮಾಡೋರು ಈ ಸುದ್ದಿಯನ್ನ ಕೇಳಲೇ ಬೇಕು . ಯಾಕಂದ್ರೆ ವ್ಯಕ್ತಿಯೋರ್ವ ಆರ್ಡರ್ ಮಾಡಿದ್ದ ಚಿಕನ್​ನಲ್ಲಿ ಬಂತು ಇಲಿ ಮಾಂಸ!?.

ಹೌದು. ಈ ಘಟನೆ ನಡೆದಿರೋದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ. ಇಲ್ಲಿನ ಪಾಲಿ ಹಿಲ್‌ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಘಟನೆ ಮುನ್ನೆಲೆಗೆ ಬಂದಿದೆ.

ಗ್ರಾಹಕ ಅನುರಾಗ್ ಸಿಂಗ್ ಎಂಬಾತ ರೆಸ್ಟೋರೆಂಟ್​ಗೆ ಭೇಟಿ ನೀಡಿದ್ದಾನೆ. ಬ್ರೆಡ್​ನೊಂದಿಗೆ ಚಿಕನ್ ಮತ್ತು ಮಟನ್ ಥಾಲಿ ಪ್ಲ್ಯಾಟರ್ ಆರ್ಡರ್ ಮಾಡಿದ್ದಾನೆ. ಆತನ ಆಸೆಯಂತೆ ವೈಟರ್​ ಮಾಡಿದ್ದ ಆರ್ಡರ್​ ಎರಡನ್ನು ತಂದುಕೊಟ್ಟಿದ್ದಾನೆ. ಆದರೆ ಇನ್ನೇನು ಅನುರಾಗ್​ ಚಿಕನ್​ ಸವಿಯಲು ಮುಂದಾದಾಗ ಚಿಕನ್ ಜೊತೆಗೆ ಅನುಮಾನಾಸ್ಪದ ಮಾಂಸದ ತುಂಡು ಪತ್ತೆಯಾಗಿದೆ.

ಇದನ್ನು ಕಂಡು ಬೇಸತ್ತ ಗ್ರಾಹಕ ಅನುರಾಗ್ ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾನೆ. ರೆಸ್ಟೋರೆಂಟ್ ವಿರುದ್ಧ ಇಲಿಯ ಮಾಂಸ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾನೆ. ದೂರಿನ ಹಿನ್ನಲೆ ಹೋಟೆಲ್ ಮ್ಯಾನೇಜರ್, ಬಾಣಸಿಗ ಮತ್ತು ಸಪ್ಲೇಯರ್ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಚಿಕನ್​ ಥಾಲಿಯಲ್ಲಿ ಬಂತು ಇಲಿ ಮಾಂಸ!? ರೆಸ್ಟೋರೆಂಟ್​ ಮಾಲೀಕನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗ್ರಾಹಕ

https://newsfirstlive.com/wp-content/uploads/2023/08/Chicket-thali.jpg

Load More