newsfirstkannada.com

ಬೆಂಗಳೂರಿನಲ್ಲಿ ಹಾಡಹಗಲೇ ಸದ್ದು ಮಾಡಿದ ಲಾಂಗು, ಮಚ್ಚು; ಆವಾಜ್​​ ಹಾಕಿದ್ದಕ್ಕೆ ಡೆಡ್ಲಿ ಅಟ್ಯಾಕ್​​

Share :

12-09-2023

    ಬೆಂಗಳೂರಿನಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ

    ಬಾರ್​ನಲ್ಲಿ ಆವಾಜ್​ ಹಾಕಿದ್ದಕ್ಕೆ ಲಾಂಗ್​ನಿಂದ ಹಲ್ಲೆ

    ಅಟ್ಟಾಡಿಸಿ ಲಾಂಗ್​, ಮಚ್ಚಿನಿಂದ ಹಲ್ಲೆಗೈದ ಗ್ಯಾಂಗ್​​..!

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಪೊಲೀಸರು ಎಷ್ಟೇ ಕಠಿಣಕ್ರಮ ಕೈಗೊಂಡರೂ ಪುಡಿ ರೌಡಿಗಳು ಹಾಡಹಗಲೇ ಹಲ್ಲೆ, ಕೊಲೆ ಯತ್ನ, ದರೋಡೆ ಹೀಗೆ ಹಲವು ಕ್ರೈಮ್​​ಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಈಗ ಅಂಥದ್ದೇ ಒಂದು ಕ್ರೈಮ್​​ ನಗರದಲ್ಲಿ ನಡೆದಿದೆ.

ಇದ್ಯಾವುದೋ ಸಿನಿಮಾ ದೃಶ್ಯವಲ್ಲ, ಬದಲಿಗೆ ಬೆಂಗಳೂರಲ್ಲಿ ಪುಡಿ ರೌಡಿಗಳ ಅಟ್ಟಹಾಸ. ಬೈಕ್​ನಲ್ಲಿ ಬಂದ ಮೂವರು ರಾಹುಲ್​ ಎಂಬಾತನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಬೈಕ್​ನಿಂದ ಇಳಿಯುತ್ತಿದ್ದಂತೆ ರೋಹಿತ್ ಮೇಲೆ ಏಕಾಏಕಿ ಅಟ್ಯಾಕ್​​ ಮಾಡಿದ್ದಾರೆ.

ಹೌದು, ಅದು ವಿಜಯನಗರದಲ್ಲಿ ಮಟ ಮಟ ಮಧ್ಯಾಹ್ನವೇ ಲಾಂಗು, ಮಚ್ಚು ಸದ್ದು ಮಾಡಿದೆ. ಬಾರ್​ನಲ್ಲಿ ಆವಾಜ್​​ ಹಾಕಿದ್ದಕ್ಕೆ ರೋಹಿತ್ ಗೌಡನ ಮೇಲೆ ರಾಜು ಆ್ಯಂಡ್​ ಟೀಂ ಅಟ್ಯಾಕ್ ಮಾಡಿದೆ.

ಕಳೆದ ವಾರ ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇಗುಲದ ಮುಂದೆ, ರಾಜು ಆ್ಯಂಡ್​ ಟೀಂಗೆ ರೋಹಿತ್​ ಆವಾಜ್​ ಹಾಕಿದ್ದ. ಹೀಗಾಗಿ ಸಿಟ್ಟಿಗೆದ್ದ ರಾಜು ಗ್ಯಾಂಗ್​ ರೋಹಿತ್ ಮೇಲೆ ಮಚ್ಚು ಬೀಸಿದೆ. ಸಿನಿಮೀಯ ರೀತಿಯಲ್ಲಿ ಲಾಂಗು ಮಚ್ಚು ಬೀಸಿದ ರಾಜು, ಧನುಷ್, ಗುರುಪ್ರಸಾದ್ ಸೇರಿ 6 ಪುಂಡರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೆಂಗಳೂರಿನಲ್ಲಿ ಹಾಡಹಗಲೇ ಸದ್ದು ಮಾಡಿದ ಲಾಂಗು, ಮಚ್ಚು; ಆವಾಜ್​​ ಹಾಕಿದ್ದಕ್ಕೆ ಡೆಡ್ಲಿ ಅಟ್ಯಾಕ್​​

https://newsfirstlive.com/wp-content/uploads/2023/09/Crime_Vijay-Nagar.jpg

Load More